Nice ಆಗಿರುವುದು ಮತ್ತು Kind ಆಗಿರುವುದು ಎರಡೂ ಒಂದೇನಾ?

ಇನ್ನೊಬ್ಬರೊಂದಿಗೆ Nice ಆಗಿರುವುದು ಮತ್ತು Kind ಆಗಿರುವುದು ಎರಡೂ ಒಂದೇನಾ? Calcium Psychologist ಗಳು ಇವೆರಡೂ ಒಂದೇ ಅಲ್ಲ ಎಂದು ಒತ್ತಿ ಹೇಳುತ್ತಾರೆ. ನೋಡಿ ಅವರ ವಿವರಣೆ ಹೀಗಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

Nice ಆಗಿರುವುದೆಂದರೆ ಅದು approval ಗೆ ಸಂಬಂಧಿಸಿದ್ದು. ಇನ್ನೊಬ್ಬರ ಜೊತೆ nice ಆಗಿರುವುದೆಂದರೆ ಬಿಕ್ಕಟ್ಟುಗಳಿಂದ ದೂರವಿರುವುದು (avoiding conflicts), ಅತಿಯಾಗಿ ಹೊಂದಿಕೊಳ್ಳುವುದು (over accommodating). No ಎಂದು ಹೇಳಬೇಕಾಗಿರುವಲ್ಲಿ Yes ಎಂದು ಹೇಳಿಬಿಡುವುದು. ಇನ್ನೊಬ್ಬರಿಗೆ ಮುಜುಗರ, ತೊಂದರೆ ಆಗದಿರಲೆಂದು ನೀವು ಅವರ ಎದುರು ಸ್ವಲ್ಪ ಹೆಚ್ಚೇ ಬಾಗಿಬಿಡುವುದು. ಮೂಲಭೂತವಾಗಿ ಇಲ್ಲಿ ನೀವು ಪ್ರಾಮಾಣಿಕರಾಗಿಲ್ಲ.

ಆದರೆ kind ಆಗಿರುವುದು ಸಂಪೂರ್ಣವಾಗಿ ಬೇರೆಯೇ ಮತ್ತು ಇದು ಅತ್ಯಂತ ಶಕ್ತಿಶಾಲಿಯಾಗಿರುವಂಥದು. Kind ಆಗಿರುವುದು, ಪ್ರಾಮಾಣಿಕತೆ, ಸ್ವಗೌರವ, ಮಿತಿಗಳನ್ನು ಒಳಗೊಂಡಿರುವಂಥದು. Nice ಆಗಿರುವ ಜನ, ತಮಗೆ ಸಾಧ್ಯವಾಗದಿರುವ ಸಂದರ್ಭಗಳಲ್ಲೂ yes yes , no problem ಖಂಡಿತ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದರೆ, kind ಆಗಿರುವ ನೀವು ಹೇಳುತ್ತೀರಿ, ನನಗೆ ಸಾಧ್ಯವಾದರೆ ಖಂಡಿತ ನಿಮ್ಮ ಕೆಲಸ ಮಾಡುತ್ತೇನೆ, ಸಾಧ್ಯವಾಗದಿದ್ದರೆ ನಿಮಗೆ ಮುಂಚೆಯೇ inform ಮಾಡುತ್ತೇನೆ. I am so sorry , ನನಗೆ ನಿಜವಾಗಿಯೂ ನಿಮಗೆ ಸಹಾಯ ಮಾಡುವ ಇಚ್ಛೆ ಇದೆ, ಖಂಡಿತ ಪ್ರಯತ್ನ ಮಾಡುತ್ತೇನೆ.

ಈ ಮಾತುಗಳಲ್ಲಿನ ವ್ಯತ್ಯಾಸ ಗಮನಿಸಿ. Kind ಜನರು ಇನ್ನೊಬ್ಬರಿಗೆ ಸಹಾಯ ಮಾಡುವ ಪ್ರಬಲ ಇಚ್ಛೆ ಹೊಂದಿರುವಾಗಲೂ, ತಮ್ಮ ಬಗ್ಗೆ, ತಮ್ಮ ಸಾಮರ್ಥ್ಯದ ಬಗ್ಗೆ ಯೋಚನೆ ಮಾಡುತ್ತಾರೆ, ಅವರು ಯಾವ ಸುಳ್ಳು ಭರವಸೆಯನ್ನು ಕೊಡಬಯಸುವುದಿಲ್ಲ, ಒಂದು ವೇಳೆ ಅವರ ಈ ಮಾತು ಜನರಿಗೆ ಇರುಸುಮುರುಸು ಉಂಟು ಮಾಡಿದರು ಕೂಡ. ಸೈಕಾಲಜಿಯ ದೃಷ್ಟಿಯಿಂದ ನೋಡುವುದಾದರೆ ಈ nice ಆಗಿರುವುದು ಭಯ ಪ್ರೇರಿತವಾಗಿರುವಂಥದು, fear of failure, fear of rejection, fear of upsetting people, ಬಿಕ್ಕಟ್ಟು, fear of being disliked ಮುಂತಾಗಿ. ಆದರೆ kindness ಬಹಳ ಮೌಲ್ಯಾಧಾರಿತವಾದದ್ದು. ಇದು ಪ್ರಾಮಾಣಿಕತೆ ಮತ್ತು ಭಾವನಾತ್ಮಕ ಸುರಕ್ಷತೆಯನ್ನು ಒಳಗೊಂಡಿರುವಂಥದು. ಇಲ್ಲಿ ಆತಂಕಕ್ಕೆ ಜಾಗವಿಲ್ಲ. nice ಆಗಿರುವಾಗ, ಸೌಹಾರ್ದತೆಯನ್ನು ಕಾಯ್ದುಕೊಳ್ಳಲು, ಬಿಕ್ಕಟ್ಟುಗಳಿಂದ ಹೊರತಾಗಿರಲು ನಿಮ್ಮನ್ನು ನೀವು ಕುಗ್ಗಿಸಿಕೊಳ್ಳುತ್ತೀರಿ. ಆದರೆ kind ಆಗಿರುವಾಗ, ಇನ್ನೊಬ್ಬರಿಗೆ ಅಷ್ಟು ಇಷ್ಟವಾಗದಿದ್ದರೂ ನೀವು grounded ಆಗಿರುತ್ತೀರಿ, ನಿಮ್ಮ ಇಚ್ಛೆಯನುಸಾರ ವರ್ತಿಸುತ್ತೀರಿ ಆದರೆ ಗೌರವದೊಂದಿಗೆ.

Nice ಆಗಿರುವ ಜನ ತಮ್ಮ ಸುತ್ತ ಬಹಳಷ್ಟು ಅಸಮಾಧಾನಗಳನ್ನು ಹುಟ್ಟುಹಾಕಿಕೊಂಡಿರುತ್ತಾರೆ. ಆದರೆ kind ಜನ, ತಮ್ಮ ಸುತ್ತಲಿನ ಎಲ್ಲರೂ ಅಷ್ಟು ಖುಶಿಯಾಗಿ ಇಲ್ಲದಿರುವಾಗಲೂ ತಮ್ಮ self respect ಗೆ ಚ್ಯುತಿಯಾಗದಂತೆ ನೋಡಿಕೊಳ್ಳುತ್ತಾರೆ.

ಈಗ ನಾವು nice ಜನರಾ ಅಥವಾ kind ಜನರಾ? ನಾವು nice ಜನ ಆಗಿದ್ದರೆ ನಮ್ಮನ್ನು ಸಂಪೂರ್ಣವಾಗಿ ಅಭಿವ್ಯಕ್ತಿಸಲು ಬಿಡದೇ, ನಮ್ಮನ್ನು ಕಟ್ಟಿಹಾಕುತ್ತಿರುವ ಸಂಗತಿ ಯಾವುದು? ಆ ಸಂಗತಿಯನ್ನು ಗುರುತಿಸಿ, work on that.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.