ಧರ್ಮ ಜನರನ್ನು ಒಳ್ಳೆಯವರನ್ನಾಗಿಸುವುದೇ? : Soren Kierkegaard ಪ್ರತಿಪಾದನೆ…

ಕಿರ್ಕೆಗಾರ್ಡ್ ಸಾಬೀತು ಮಾಡಿದ್ದು ಏನೆಂದರೆ, ಒಮ್ಮೆ ನೀವು ಈ ಆದೇಶ ಆಕಾಶದಿಂದ ಬಂದದ್ದು ಎನ್ನುವುದನ್ನು ಒಪ್ಪಿಕೊಂಡುಬಿಟ್ಟರೆ, ನೈಜವಾದ ಆಸ್ಥೆ ಮಾನವ ನೈತಿಕತೆಯ ಸುರಕ್ಷತಾ ಪದರವನ್ನು ಧ್ವಂಸ ಮಾಡಿಬಿಡುತ್ತದೆ. ಆಗ ಯಾವುದೇ ಅಪರಾಧ, ಯಾವುದೇ ಕ್ರೌರ್ಯ, ಯಾವುದೇ ದ್ರೋಹ ನಿಮಗೆ ಸರಿ ಎನಿಸತೊಡಗುತ್ತದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ಧರ್ಮ ಜನರನ್ನು ಒಳ್ಳೆಯವರನ್ನಾಗಿಸುತ್ತದೆ ಎನ್ನುವುದು ಬಹಳ ಜನರ ಅಭಿಪ್ರಾಯ. ಜನರ ಪ್ರಕಾರ faith ಎಂದರೆ ದಯೆ, ದಾನ, ಪ್ರೀತಿ ಆದರೆ ಡ್ಯಾನಿಶ್ ತತ್ವಜ್ಞಾನಿ Soren Kierkegaard ನ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿತ್ತು. ಅವನ ಪ್ರಕಾರ ನಿಜವಾದ faith, ನೈತಿಕವಾಗಿರುವುದು ಅಲ್ಲವೇ ಅಲ್ಲ, ಅದು ಭಗವಂತನ ಆಜ್ಞೆಗಳನ್ನು ಪಾಲಿಸುವುದು, ಅವು ಎಷ್ಟೇ ಕೆಟ್ಟದಾಗಿದ್ದರೂ. ನಿನ್ನ ಮಗುವನ್ನು ಕೊಲ್ಲು ಎಂದು ಭಗವಂತ ಹೇಳಿದರೆ, ನೀನು ಅದನ್ನು ಮಾಡಲೇಬೇಕು.

Genesis 22 ರಲ್ಲಿ ಅಬ್ರಹಾಂ ಮತ್ತು ಐಸಾಕ್ ರ ಒಂದು ಕತೆ ಇದೆ. ಈ ಕತೆಯಲ್ಲಿ ದೇವರು ಅಬ್ರಹಾಂ ಗೆ ಅವನ ಅತ್ಯಂತ ಪ್ರೀತಿಯ ಮಗ ಐಸಾಕ್ ನನ್ನು ಮೌಂಟ್ ಮೋರಿಯಾ ಗೆ ಕರೆದುಕೊಂಡು ಹೋಗಿ ಬಲಿ ಕೊಡುವಂತೆ ಹೇಳುತ್ತಾನೆ. ಅಬ್ರಹಾಂ, ದೇವರೊಡನೆ ವಾದ ಮಾಡಲಿಲ್ಲ, ಅಳಲಿಲ್ಲ, ಕೊಲೆ ಮಾಡುವುದು ಪಾಪ ಎಂದು ಯೋಚನೆ ಮಾಡಲಿಲ್ಲ ಅವನು ಭಗವಂತನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸಿದ. ಐಸಾಕ್ ನ ಕಟ್ಟಿಹಾಕಿ ಚೂರಿಯಿಂದ ಅವನನ್ನು ಕೊಲ್ಲಲು ಅಬ್ರಹಾಂ ಮುಂದಾದಾಗ ಕೊನೆಯ ಕ್ಷಣದಲ್ಲಿ ದೇವರು ಅಬ್ರಹಾಂನನ್ನು ತಡೆ ಹಿಡಿದು ಬಲಿಯ ಸಲುವಾಗಿ ಇನ್ನೊಂದು ಪ್ರಾಣಿಯನ್ನು ಕೊಟ್ಟ.

ಜನರ ದೃಷ್ಟಿಯಲ್ಲಿ, ಸಮಾಜದ ದೃಷ್ಟಿಯಲ್ಲಿ ಇದೊಂದು ಹುಚ್ಚುತನ. ನಿಮ್ಮ ನೆರೆಮನೆಯವನೇನಾದರೂ ಹೀಗೆ ಮಾಡಿದರೆ ನೀವು ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಿಬಿಡುತ್ತೀರಿ. ಆದರೆ ಇಂದಿಗೂ ಜನ ದೇವರ ಹೆಸರಿನಲ್ಲಿ ಕ್ರೌರ್ಯವನ್ನು ಸರಿ ಎಂದು ವಾದಿಸುತ್ತಾರೆ. ಸಮಾಜದ ದೃಷ್ಟಿಯಲ್ಲಿ ಇದು ಹುಚ್ಚುತನವಾದರೂ, ಸಂಪ್ರದಾಯ, ಪರಂಪರೆಯ ಆಧಾರದ ಮೇಲೆ ಇದನ್ನು ಭಕ್ತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಸೊರೆನ್ ಕಿರ್ಕೆಗಾರ್ಡ್ ಇದೇ ದ್ವಂದ್ವವನ್ನು ಗಮನಿಸಿದ. ಧರ್ಮ ಮತ್ತು ನೈತಿಕತೆ ಎರಡೂ ಒಂದೇ ಸಂಗತಿ ಅಲ್ಲ ಎಂಬುವುದನ್ನ. ದೇವರಿಗಾಗಿ ಅಬ್ರಹಾಂ ಗೆ ತನ್ನ ನೈತಿಕತೆಯನ್ನು ಬಿಡಬೇಕಾಗಿ ಬಂತು. ಸಮಾಜದ ದೃಷ್ಟಿಯಲ್ಲಿ ಇದು ಒಂದು ಕೇಡಿನ ಸಂಗತಿ. ಆದರೆ ಧರ್ಮದ ದೃಷ್ಟಿಯಲ್ಲಿ ನೋಡಿದರೆ ಅಬ್ರಹಾಂ faith ನ ಅತ್ಯಂತ ದೊಡ್ಡ ಹೀರೋ.

ಈ ದ್ವಂದ್ವ ಕ್ಕೆ ಕಿರ್ಕೆಗಾರ್ಡ್ ಒಂದು ಹೆಸರು ಕೊಟ್ಟ, Teleological suspension of the ethical. ಇಲ್ಲಿ Teleological ಎಂದರೆ, ಮಹತ್ತರವಾದ ಉದ್ದೇಶಕ್ಕಾಗಿ. suspension ಎಂದರೆ, ನಿಯಮವನ್ನು ತಡೆಹಿಡಿಯುವುದು. ಕಿರ್ಕೆಗಾರ್ಡ್ ನ ವಾದ ಏನಾಗಿತ್ತು ಎಂದರೆ, ದೇವರು ಎಲ್ಲ ಮಾನವ ತರ್ಕಗಳನ್ನು, ಮನುಷ್ಯ ಋಜುತ್ವವನ್ನು ಮಿರಿ ಅಸ್ತಿತ್ವದಲ್ಲಿದ್ದಾನೆ. ಭಗವಂತ ಬಯಸಿದರೆ, ಕೊಲೆ ಮಾಡಬಾರದು ಎನ್ನುವ ಸಾರ್ವತ್ರಿಕ ನಿಯಮ ಕೂಡ ಬಿದ್ದು ಹೋಗುತ್ತದೆ. ಕಿರ್ಕೆಗಾರ್ಡ್, ಅಬ್ರಹಾಂ ನನ್ನ Knight of Faith ಎಂದು ಗುರುತಿಸಿದ. ಹೀಗೆಂದರೆ ದೇವರ ಆಜ್ಞೆಗಳನ್ನು ಯಾವ ಪ್ರಶ್ನೆಯನ್ನೂ ಕೇಳದೇ ಪಾಲಿಸುವವ, ಸಮಾಜದ ದೃಷ್ಟಿಯಲ್ಲಿ ಇದು ಅಪರಾಧ, ಹುಚ್ಚು ಆಗಿದ್ದರೂ.

Knight of faith ನ ಫ್ರಿಕ್ವೆನ್ಸಿ ಎಂತಹದೆಂದರೆ, ಬೇರೆ ಯಾರಿಗೂ ಇದು ಕೇಳಿಸುವುದಿಲ್ಲ. ಇಂಥ ಭಯಂಕರ ಕೆಲಸವನ್ನು ತಾನು ಯಾಕೆ ಮಾಡಬೇಕಾಯ್ತು ಎನ್ನುವುದನ್ನ ಅವನು ಜನರಿಗೆ ವಿವರಿಸುವುದು ಸಾಧ್ಯವಿಲ್ಲ, ಮತ್ತು ಅವನೇನಾದರೂ ಇದನ್ನು ವಿವವರಿಸುವ ಪ್ರಯತ್ನ ಮಾಡಿದನಾದರೆ ಅವನು ಹುಚ್ಚನ ಹಾಗೆ ಕಾಣಿಸಿಕೊಳ್ಳುತ್ತಾನೆ. ಕಿರ್ಕೆಗಾರ್ಡ್ ನ ಪ್ರಕಾರ, ಯಾವಾಗ ಇಂಥ ಮನುಷ್ಯನಿಗೆ ದೇವರ ಧ್ವನಿ ಕೇಳಿಸುತ್ತದೆಯೋ ಆಗ ಅವನ ನೈತಿಕತೆ ಅವನಿಂದ ದೂರವಾಗುತ್ತದೆ. ಆಗ ದೇವರು ಅವನಿಗೆ ಕ್ರೌರ್ಯ ಮಾಡಲು ಆದೇಶ ನೀಡಿದರೂ ಅದು ಅವನಿಗೆ ಪವಿತ್ರ ಕರ್ತವ್ಯವಾಗಿಬಿಡುತ್ತದೆ.

ಮುಂದಿನ ಸಲ ಯಾರಾದರೂ ತಾವು ದೇವರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದಾಗ ಅವರಿಗೆ ಹೆದರಿಕೊಳ್ಳಿ. ಕಿರ್ಕೆಗಾರ್ಡ್ ಸಾಬೀತು ಮಾಡಿದ್ದು ಏನೆಂದರೆ, ಒಮ್ಮೆ ನೀವು ಈ ಆದೇಶ ಆಕಾಶದಿಂದ ಬಂದದ್ದು ಎನ್ನುವುದನ್ನು ಒಪ್ಪಿಕೊಂಡುಬಿಟ್ಟರೆ, ನೈಜವಾದ ಆಸ್ಥೆ ಮಾನವ ನೈತಿಕತೆಯ ಸುರಕ್ಷತಾ ಪದರವನ್ನು ಧ್ವಂಸ ಮಾಡಿಬಿಡುತ್ತದೆ. ಆಗ ಯಾವುದೇ ಅಪರಾಧ, ಯಾವುದೇ ಕ್ರೌರ್ಯ, ಯಾವುದೇ ದ್ರೋಹ ನಿಮಗೆ ಸರಿ ಎನಿಸತೊಡಗುತ್ತದೆ. ನಿಜವಾದ faith, ನಿಮ್ಮನ್ನು ನೈತಿಕ ಮನುಷ್ಯನನ್ನಾಗಿಸುವುದಿಲ್ಲ. ಬದಲಾಗಿ ನಿಜವಾದ faith ಮನುಷ್ಯನನ್ನು ಏನನ್ನಾದರೂ ಮಾಡುವ (ಏನನ್ನಾದರೂ ಮಾಡಲು ಹೇಸದ) ಮನುಷ್ಯನನ್ನಾಗಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.