ಐದು ಅದ್ಭುತ ಫಿಲಾಸಫಿ ಪುಸ್ತಕಗಳು…

ಹೆಚ್ಚು ಗಂಡಸರೇ ತುಂಬಿಕೊಂಡಿರುವ ಫಿಲಾಸಫಿಯ ಫೀಲ್ಡ್ ನಲ್ಲಿ ಹೆಣ್ಣು ಮಕ್ಕಳು ರಚಿಸಿರುವ ಐದು ಅದ್ಭುತ ಫಿಲಾಸಫಿ ಪುಸ್ತಕಗಳ ರೆಕಮೆಂಡೇಶನ್ ನಿಮಗಾಗಿ… । ಚಿದಂಬರ ನರೇಂದ್ರ

  1. Second sex by Simon de Beauvoir: ಇವರ ವಾದ ಬಹಳ ಸರಳ, ಯಾರೂ ಹೆಣ್ಣಾಗಿ ಹುಟ್ಟುವುದಿಲ್ಲ ಆದರೆ ಅವರು ಬೆಳೆಯುತ್ತ ಹೆಣ್ಣಾಗುತ್ತಾರೆ. ಇಲ್ಲಿ ಅವರು ಬಯಾಲೊಜಿಯ ಬಗ್ಗೆ ಮಾತನಾಡುತ್ತಿಲ್ಲ, ಹೇಗೆ ನಿಮ್ಮ ವ್ಯಕ್ತಿತ್ವ ನೀವು ನಿರಾಕರಿಸುವ ಮೊದಲೇ ರೂಪಗೊಳ್ಳುತ್ತದೆ ಎನ್ನುವುದನ್ನು ಅವರು ಹಲವಾರು ಉದಾಹರಣೆಗಳೊಂದಿಗೆ ವಿವರಿಸುತ್ತಾರೆ.
  2. Vindication of rights of woman by Mary Wollstonecraft : 1792 ರಲ್ಲಿ ಮಾರ್ಕ್ಸ್ ನಿ ಗಿಂತ, ನಿಷೆ ಗಿಂತ ಮೊದಲು ರಚಿತವಾದ ಈ ಪುಸ್ತಕ, ಹೇಗೆ ಹೆಣ್ಣು ಸ್ವಭಾವತಃ irrational ಅಲ್ಲ ಆದರೆ by design ಆಕೆ ಹಾಗೆ ವರ್ತಿಸುತ್ತಾಳೆ ಎನ್ನುವುದರ ಬಗ್ಗೆ ಮಾತನಾಡುತ್ತದೆ. ಈ ಪುಸ್ತಕ ಹೇಗೆ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಲಾಯಿತು, ಹೇಗೆ ಅವರನ್ನು ಇನ್ನೊಬ್ಬರ ಮೇಲೆ ಅವಲಂಬಿತರನ್ನಾಗಿಸಲಾಯಿತು ಮತ್ತು ನಂತರ ಹೇಗೆ ಇದೇ ಕಾರಣಕ್ಕೆ ಅವರನ್ನು ದೂಷಿಸಲಾಗುತ್ತದೆ ಎನ್ನುವುದನ್ನು ಚರ್ಚಿಸುತ್ತದೆ.
  3. Bell Jar by Sylvia Plath : ಅಸ್ತಿತ್ವವಾದಿ ಕುಸಿತದ (existential collapse) ಬಗ್ಗೆ ರಚಿತವಾಗಿರುವ ಅತ್ಯಂತ ಪ್ರಾಮಾಣಿಕ ಕಾದಂಬರಿ. ಇನ್ವೊಬ್ಬರಿಂದ ರೂಪಿತವಾಗಿರುವ ಬದುಕು ಬಾಳುವುದನ್ನ ಪ್ಲಾತ್ ನ ಕೇವಲ ಥಿಯರಿಯಾಗಿಸದೇ ಜೀವಂತ ಅನುಭವದ ಕತೆಯ ರೂಪದಲ್ಲಿ ನಿರೂಪಿಸುತ್ತಾರೆ.
  4. Frankenstein by Mary Shelly : ಮೇರಿ ತಮ್ಮ ೧೯ ರ ಹರೆಯದಲ್ಲಿ ಬರೆದ ಈ ಪುಸ್ತಕದಲ್ಲಿ ಅವರು, ಹೇಗೆ monster ಖಳನಾಯಕ ಅಲ್ಲ, ಬದಲಾಗಿ monster ಯಾರು ಎಂದರೆ , ನೀವು ಏನನ್ನೋ ಹುಟ್ಟು ಹಾಕಿ ಅದಕ್ಕೆ ಜವಾಬ್ದಾರರಾಗಲು ನಿರಾಕರಿಸಿದಾಗ ಏನಾಗುತ್ತದೆ ಎನ್ನುವುದು ಎಂದು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ.
  5. The eyes were watching god by Zora Neale Hurston : ಇನ್ನೊಬ್ಬರು ಡಿಫೈನ್ ಮಾಡಿದ ಬದುಕನ್ನು ಬಾಳುತ್ತಿರುವ ಹೆಣ್ಣು ಕೊನೆಗೊಮ್ಮೆ ಅವಳಿಗೆ ಯಾರೂ ಕೇಳಲು ಕಲಿಸದ ಪ್ರಶ್ನೆಯೊಂದನ್ನು ಕೇಳುತ್ತಾಳೆ, “What do I actually want?”

5 ಹೆಣ್ಣು ಮಕ್ಕಳ 5 ಪುಸ್ಚಕಗಳು, ಎಲ್ಲರದೂ ಒಂದೇ ಪ್ರಶ್ನೆ, ಜಗತ್ತು ನಿಮಗಾಗಿ ನಿರ್ಧಾರಗಳನ್ನು ಮಾಡುತ್ತಿರುವಾಗ ಸ್ವಾತಂತ್ರ್ಯದ ಬಗ್ಗೆ ನಿಮಗೆ ಏನು ಅನಿಸುತ್ತದೆ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.