ಈ 5 ತತ್ವಜ್ಞಾನಿಗಳಲ್ಲಿ ನೀವು ಯಾರಿಗೆ ಹತ್ತಿರ?

ಚಿದಂಬರ ನರೇಂದ್ರ

ಜಗತ್ತಿನಲ್ಲಿ ಇರೋದು ಐದು ವಿವಿಧ ಬಗೆಯ ತತ್ವಜ್ಞಾನಿಗಳು. ಈ ಐವರಲ್ಲಿ ನೀವು ಯಾರಿಗೆ ಹತ್ತಿರ?

  1. Sphinx : ಇವರು ಎಲ್ಲವನ್ನೂ ಪ್ರಶ್ನೆ ಮಾಡುತ್ತಾರೆ ಆದರೆ ಯಾವುದಕ್ಕೂ ಉತ್ತರ ನೀಡುವ ಗೋಜಿಗೆ ಹೋಗುವುದಿಲ್ಲ. ಅವರು ನಿಮ್ಮ ಅಸ್ತಿತ್ವವನ್ನು ನೀವು ಸಂಶಯದಿಂದ ನೋಡುವವರೆಗೆ ಕೇಳುತ್ತಲೇ ಇರುತ್ತಾರೆ, “why do you think that way?” ಸಾಕ್ರೆಟಿಸ್ ಒಬ್ಬ ಮಹಾನ್ Sphinx ತತ್ವಜ್ಞಾನಿ. ಇವರ ಮಾತು ಕೇಳಿ ಹುಚ್ಚು ಹಿಡಿಯಬಹುದಾದರೂ ಇವರು ಪರಿಣಾಮಕಾರಿಯಂತೂ ಹೌದು. ಇವರು ಜ್ಞಾನದ ಸೂಲಗಿತ್ತಿಯರಿದ್ದ ಹಾಗೆ.
  2. Leviathan : ಇವರು ಒಂದು system philosophy ಯನ್ನು ಸೃಷ್ಟಿಸುವವರು ಮತ್ತು ಅದನ್ನೇ ನೆಚ್ಚಿಕೊಳ್ಳುವವರು. ಇವರು ಒಂದು ಪುಸ್ತಕ, ಒಂದು ಫಿಲಾಸೊಫಿ, ಒಂದು ಐಡಿಯಾಕ್ಕೆ ಬದ್ಧರಾದವರು. ಅದು ದೇವರಾಗಿರಬಹುದು, ಪ್ರೇಮವಾಗಿರಬಹುದು, ಕರ್ತವ್ಯವಾಗಿರಬಹುದು, ಹೀಗೆ ಯಾವುದೇ ಒಂದು ವಿಷಯಕ್ಕೆ ಇವರು ತಮ್ಮನ್ನು ತಾವು ಒಪ್ಪಿಸಿಕೊಂಡವರು. ಅವರು ಒಂದು ಸಿಸ್ಟಂ ಮೂಲಕ ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡುವವರು.
  3. Kitsune : ಇವರು ಕ್ಷಣಕ್ಷಣಕ್ಕೆ ಬದಲಾಗುವವರು. ಏನೋ ಒಂದು ಕೋಲಾಹಲಕಾರಿ ಸಂಗತಿ ಹೇಳಿ ಎರಡನೇ ಕ್ಷಣಕ್ಕೇ ಕಣ್ಣು ಮಿಟುಕಿಸುತ್ತ ತಮ್ಮ ಮಾತಿನಿಂದ ಹಿಂದೆ ಸರಿಯುವವರು. ಇವರು ಗಂಭೀರ ಜನ ಎಂದು ಯಾರೂ ನಂಬುವುದಿಲ್ಲ. ಇವರು ಪ್ರಖರ ನಿರಾಕರಣಾವಾದಿಗಳಾ (nihilist) ಅಥವಾ ಸುಮ್ಮನೇ ಜಾರಿಕೊಳ್ಳುವವರಾ ಕಂಡುಹಿಡಿಯುವುದು ಕಷ್ಟ. ಇವರು ಎಲ್ಲವನ್ನೂ ನಂಬುವಂತೆ, ಯಾವುದನ್ನೂ ನಂಬದಂತೆ ಕಾಣಿಸಿಕೊಳ್ಳುತ್ತಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಇವರ ಇಂಥ ಸಂಕೋಚಕ್ಕೂ ಒಂದು ಡೆಪ್ತ್ ಇರುವುದು ನಮಗೆ ಗೊತ್ತಾಗುತ್ತದೆ.
  4. Minotaur : ಇವರು ಮನುಷ್ಯ ಸಂಕಟ, ಮರಣ, ಅಸಂಗತತೆಯ ಮಾಯೆಯಲ್ಲಿ ಕಳೆದುಹೋದವರು. ಇವರು ಗೊಂದಲದ ದಾರಿಗಳಿಂದ ಪಾರಾಗುವುದಿಲ್ಲ ಬದಲಾಗಿ ಅಲ್ಲಿಯೇ ಕರಾಳ ಗೂಡೊಂದನ್ನು ಕಟ್ಟಿಕೊಳ್ಳುವವರು. ಇವರ ಬಳಿ ಯಾವ ಉತ್ತರಗಳಿಲ್ಲ, ಇವರ ಬಳಿ ಇರೋದು ಕೇವಲ ನಿರಾಶೆ, ಅಪಾಯದ ಮುನ್ಸೂಚನೆ ಮತ್ತು ತಾರ್ಕಿಕ ಸ್ವೀಕಾರಗಳು. ಸೂಕ್ಷ್ಮವಾಗಿ ಗಮನಿಸಿದಾಗ ಸಿಸಿಫಸ್ ನ ನಗು ನಿಮಗೆ ಕೇಳಿಸಬಹುದು.
  5. Garuda : ಇವರು ಸ್ಪಷ್ಟವಾದಿಗಳು. ಇವರಿಗೆ ಚರ್ಚೆಯ ಮೊದಲು ಡೆಫಿನಿಷನ್ ಗಳು ಸ್ಪಷ್ಟವಾಗಿರಬೇಕು. ನೀವು ಒಂದು ರೂಪಕ ಅಥವಾ ಏನೋ ಒಂದು ಅಸಂಗತವನ್ನು ಹೇಳಿದಾಗ, What do you actually mean by that? ಇವರು ಸದಾ ಕೇಳುವ ಪ್ರಶ್ನೆ. ಪದಗಳನ್ನು ಪೂರ್ತಿ ಅರ್ಥ ಮಾಡಿಕೊಳ್ಳದ ಹೊರತು ಚರ್ಚೆ ಮಾಡಿ ಪ್ರಯೋಜನವಿಲ್ಲ ಎನ್ನುವುದು ಇವರ ನಿಲುವು. ಇವರಿಗೆ logic ಮತ್ತು rationality ಎಂದರೆ ಪ್ರೀತಿ.

ಈ ಐದು ಬಗೆಗಳಲ್ಲಿ ನೀವು ಯಾವ ಬಗೆಯವರು? ಅಥವಾ ಈ ಎಲ್ಲವನ್ನೂ ಸಂದರ್ಭಕ್ಕೆ ತಕ್ಕ ಹಾಗೆ ಬಳಸುವವರು? ಯೋಚನೆ ಮಾಡಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.