Omnipotence paradox ಇರುವುದು ಇನ್ನೂ ಆಳವಾದ ಸಂಗತಿಯೊಂದಿದೆ ಎನ್ನುವುದನ್ನ ನಮಗೆ ನೆನಪು ಮಾಡಿಕೊಡಲು. ಭಗವಂತ ನಮ್ಮ ತಿಳುವಳಿಕೆಯ ಆಚೆ ಇರುವ ಸಂಗತಿಯಾದರೆ ಇಂಥ ಪ್ರಶ್ನೆಗಳು ಯಾವಾಗಲೂ ಅವನ ವಿರುದ್ಧವೇ ಕೆಲಸ ಮಾಡುತ್ತವೆ । ಚಿದಂಬರ ನರೇಂದ್ರ
ಭಗವಂತ ತನ್ನಿಂದಲೂ ಎತ್ತಲು ಸಾಧ್ಯವಾಗದಂಥ ಭಾರದ ಬಂಡೆಗಲ್ಲೊಂದನ್ನು ಸೃಷ್ಟಿ ಮಾಡಬಲ್ಲನೆ? ಇದು ತತ್ವಶಾಸ್ತ್ರದ ಅತ್ಯಂತ ಹಳೆಯ ಮತ್ತೆ ಪ್ರಸಿದ್ಧ ಸಮಸ್ಯೆಗಳಲ್ಲಿ ಒಂದು. ಈ ಸಮಸ್ಯೆಯನ್ನ The Omnipotence paradox ಎಂದು ಹೆಸರಿಸಲಾಗುತ್ತದೆ.
ಈ ದ್ವಂದ್ವ ದ ಬಗ್ಗೆ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಮೊದಲು, ನಾವು ಒಂದು ಬಹಳ ಮುಖ್ಯ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮಧ್ಯ ಯುಗದ ಕಾಲದಲ್ಲಿ ಅತ್ಯಂತ ಸರ್ವಶಕ್ತ ಭಗವಂತನ ( all powerful gos) ಐಡಿಯಾ ಕೇವಲ ನಂಬಿಕೆಯ ಮಾತಾಗಿರಲಿಲ್ಲ, ಆ ಕಾಲದಲ್ಲಿ ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ಜನ ಈ ಐಡಿಯಾಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಚಿಂತಕರು ಇಂಥದೊಂದು ಪ್ರಶ್ನೆ ಮಾಡುತ್ತಾರೆಂದರೆ ಅವರು ಭಗವಂತನನ್ನು ಅವಮಾನ ಮಾಡಲು ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಅವರು ಸಾಮರ್ಥ್ಯದ ನಿಜ ಅರ್ಥ ಏನೆಂಬುವುದನ್ನ ಶೋಧಿಸುತ್ತಿದ್ದರು. ಸಾಮರ್ಥ್ಯಕ್ಕೂ ಒಂದು ಮಿತಿ ಇದೆಯಾ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಿತ್ತು.
ಈ paradox ನ ಪ್ರಕಾರ ಭಗವಂತ ತನ್ನಿಂದಲೂ ಎತ್ತಲು ಸಾಧ್ಯವಾಗದಂಥ ಬಂಡೆಯನ್ನು ಸೃಷ್ಟಿ ಮಾಡಬಲ್ಲನಾದರೆ, ಭಗವಂತನಿಂದ ಎಲ್ಲವೂ ಸಾಧ್ಯವಿಲ್ಲ ಎನ್ನುವುದು ಪ್ರೂವ್ ಆಗುತ್ತದೆ. ಮತ್ತು ಭಗವಂತನಿಂದ ಇಂಥದೊಂದು ಬಂಡೆಯನ್ನು ಸೃಷ್ಟಿಸುವುದು ಸಾಧ್ಯವಿಲ್ಲವಾದರೆ, ಆಗಲೂ ಭಗವಂತನಿಂದ ಎಲ್ಲವೂ ಸಾಧ್ಯವಿಲ್ಲ ಎನ್ನುವ ಮಾತು ನಿಜವಾಗುತ್ತದೆ. ಈ paradox ಎನನ್ನು ಪ್ರೂವ್ ಮಾಡಲು ಪ್ರಯತ್ನಿಸುತ್ತದೆಯೆಂದರೆ ಭಗವಂತ ಸರ್ವಶಕ್ತನಲ್ಲ ಎನ್ನುವುದನ್ನ.
ಚಿಂತಕ Thomas Aquinas ನಂಥವರು ಈ ದ್ವಂದ್ವದ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು. ಅವನ ಪ್ರಕಾರ Omnipotence (ಸರ್ವಶಕ್ತ) ಎಂದರೆ, ಅಸಾಧ್ಯವನ್ನು ಸಾಧ್ಯಮಾಡುವುದಲ್ಲ, ಸರ್ವಶಕ್ತ ಎಂದರೆ, ತಾರ್ಕಿಕವಾಗಿ ಸಾಧ್ಯವಿರುವ ಎಲ್ಲವನ್ನೂ ಸಾಧ್ಯ ಮಾಡುವುದು.
ಉದಾಹರಣೆಗೆ, ಭಗವಂತ ಒಂದು ಚೌಕಾಕಾರದ ವೃತ್ತವನ್ನು ರಚಿಸಲಾರ. ಇದರ ಅರ್ಥ ಭಗವಂತ ದುರ್ಬಲ ಎಂದಲ್ಲ, ಇಂಥದೊಂದು ಸಂಗತಿ ತಾರ್ಕಿಕವಾಗಿ ಅಸ್ತಿತ್ವದಲ್ಲಿಯೇ ಇಲ್ಲ. ಕೆಲವರ ಪ್ರಕಾರ ಈ ಪ್ರಶ್ನೆಯೇ ತಪ್ಪು. ಇದು ಹೇಗೆಂದರೆ ಸುಳ್ಳು ಹೇಳಿಯೂ ಭಗವಂತ ಪರಿಪೂರ್ಣನಾಗಿರಬಲ್ಲನೆ? ಎಂದಂತೆ.
ಇನ್ನೊಂದು ವಿಷಯ, ಈ paradox ಕೇವಲ ಧರ್ಮಗಳಿಗೆ ಮಾತ್ರ ಸವಾಲು ಹಾಕುವುದಿಲ್ಲ, ಇದು ನಮ್ಮ ಭಾಷೆಯನ್ನೂ ಚಾಲೆಂಜ್ ಮಾಡುತ್ತದೆ. ಮಾನವ ನಿರ್ಮಿತ ಶಬ್ದವೊಂದು ಅಪರಿಮಿತವನ್ನು ವಿವರಿಸುವುದು ಸಾಧ್ಯವೆ? ಕಾರಣ-ಪರಿಣಾಮಗಳ ಮೇಲೆ ನಿರ್ಮಿತವಾದ ನಮ್ಮ ತರ್ಕ, ತರ್ಕದಾಚೆಯೂ ಇರುವ ಸಂಗತಿಗಳನ್ನು ಹಿಡಿದಿಡಬಲ್ಲದೆ?
ಈ Omnipotence paradox ಇರುವುದು ಇನ್ನೂ ಆಳವಾದ ಸಂಗತಿಯೊಂದಿದೆ ಎನ್ನುವುದನ್ನ ನಮಗೆ ನೆನಪು ಮಾಡಿಕೊಡಲು. ಭಗವಂತ ನಮ್ಮ ತಿಳುವಳಿಕೆಯ ಆಚೆ ಇರುವ ಸಂಗತಿಯಾದರೆ ಇಂಥ ಪ್ರಶ್ನೆಗಳು ಯಾವಾಗಲೂ ಅವನ ವಿರುದ್ಧವೇ ಕೆಲಸ ಮಾಡುತ್ತವೆ. ಇದುವೇ ದಿವ್ಯ ನಿಗೂಢದ (Devine mystery) ಅರ್ಥ.

