ಯಾವುದು ನಮ್ಮನ್ನು ಹೂಳಬಲ್ಲದೋ ಅದೇ ಮೇಲಕ್ಕೆತ್ತಲೂಬಹುದು

ಒಂದು ಕಾಡು ಕುದುರೆ ಮರುಭೂಮಿಯಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತಾಗಿ ಆಳವಾದ ಮತ್ತು ಗುಂಡಿಯೊಳಗೆ ಬಿದ್ದುಬಿಟ್ಟಿತು. ಕುದುರೆಗೆ ಅಲ್ಲಿಂದ ಹೊರಬರಲು ದಾರಿಯೇ ತೋಚಲಿಲ್ಲ. ಅದು ಯೋಚಿಸುತ್ತ ಇರುವಾಗಲೇ ಜೋರಾದ ಸುಂಟರಗಾಳಿ ಎದ್ದು, ಸುತ್ತಲಿನ ಮರಳಿನ ದಿಬ್ಬಗಳು ಕುಸಿದು ಜರಿಯುತ್ತಾ, ಗುಂಡಿಯೊಳಗೆ ಜಲಪಾತದಂತೆ ಸುರಿಯಲಾರಂಭಿಸಿದವು.

ಗುಂಡಿ ತುಂಬ ಕೆಲವೇ ನಿಮಿಷಗಳಲ್ಲಿ ತುಂಬಿ, ಮರಳು ಕುದುರೆಯ ಮೊಣಕಾಲಿನವರೆಗೆ ಬಂತು. ಆಮೇಲೆ ಹೊಟ್ಟೆಯವರೆಗೆ ಏರಿತು. ಕುದುರೆ ಆತಂಕಟ್ಟು ಸುಮ್ಮನೆ ನಿಂತಿದ್ದರೆ ಅದು ಅಲ್ಲೇ ಜೀವಂತ ಸಮಾಧಿಯಾಗಿಬಿಡುತ್ತಿತ್ತು. ಆದರೆ ಹಾಗಾಲಿಲ್ಲ. ಅದು ಧೈರ್ಯದಿಂದ ಕಾಲು ಮೇಲೆತ್ತಿ ಮರಳನ್ನು ತುಳಿಯತೊಡಗಿತು. ತುಳಿದು ತುಳಿದು ನೆಲದಂತೆ ಗಟ್ಟಿಗೊಳಿಸಿ, ಅದರ ಮೇಲೆ ಹೆಜ್ಜೆಯಿಟ್ಟು ಮೇಲಕ್ಕೇರುತ್ತಿತ್ತು.

ಮತ್ತೆ ಗಾಳಿ ಎದ್ದು, ಇನ್ನಷ್ಟು ಮರಳು ಬಿತ್ತು. ಕುದುರೆಯ ತುಳಿತದಿಂದ ಗುಂಡಿಯೊಳಗಿನ ಮರಳಿನ ನೆಲ ಮತ್ತಷ್ಟು ಮೇಲಕ್ಕೇರಿತು. ಕೊನೆಗೆ ಗುಂಡಿ ಪೂರ್ತಿ ತುಂಬಿದಾಗ, ಕುದುರೆ ಆರಾಮಾಗಿ ಹೊರಗೆ ಹೆಜ್ಜೆಯಿಟ್ಟಿತು.

ಇದರಿಂದ ನಾವು ಕಲಿಯಬಹುದಾದ ಪಾಠ ಬಹಳ ಸರಳ. ಯಾವುದು ನಮ್ಮನ್ನು ಹೂತುಹಾಕುವ ವಿಪತ್ತಿನಂತೆ ತೋರುವುದೋ ಅದೇ ಯಶಸ್ಸಿನ ತಳಹದಿಯೂ ಆಗಬಲ್ಲದು; ನಾವು ಸರಾತ್ಮಕ ದಿಕ್ಕಿನಲ್ಲಿ ಹೆಜ್ಜೆ ಇಡುವುದಷ್ಟೆ ಮುಖ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.