ಪುರುಷಾಧಿಪತ್ಯದ ಭೀಕರತೆ

ಪುರುಷಾಧಿಪತ್ಯ ನಿಮ್ಮ ಮೇಲೆ ಹೊರಗಿನಿಂದ ಮಾತ್ರ ಆಗುತ್ತಿಲ್ಲ ಅದು ನಿಮ್ಮ ಒಳಗೂ ನಡೆಯುತ್ತಿದೆ. ದೈಹಿಕ ಹಿಂಸೆ ನಿಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಯಾರಾದರೂ ನಿಮ್ಮ ತಲೆಗೆ ಬಂದೂಕನ್ನಿಟ್ಟು ನೀವು ಏನನ್ನ ಧರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದರೆ, ನಿಮಗೆ ಗೊತ್ತಾಗುತ್ತದೆ ನಿಮ್ಮ ಮೇಲೆ ಶೋಷಣೆ ಮಾಡಲಾಗುತ್ತಿದೆ ಎನ್ನುವುದು… । ಚಿದಂಬರ್ ನರೇಂದ್ರ

ಪುರುಷಾಧಿಪತ್ಯ ಎಷ್ಟು ಭಯಾನಕವಾದದ್ದು ಎನ್ನುವುದನ್ನು ಊಹಿಸುವುದೂ ಅಸಾಧ್ಯ. ನಿಮಗೆ ಅನಿಸಬಹುದು ಪುರುಷಾಧಿಪತ್ಯ ಹೆಣ್ಣನ್ನು ಶೋಷಣೆ ಮಾಡಲು ಗಂಡು ರಚಿಸಿರುವ ಮಹಾ ಸಂಚು ಎಂದು. ನಿಜ. ನಿಮಗೆ ಅನಿಸಬಹುದು ಗಂಡು, ಹೆಣ್ಣಿನ ಮೇಲೆ ಒತ್ತಾಯ ಹೇರುವಾಗ, ಅಥವಾ ಸರ್ಕಾರಗಳು ಹೆಣ್ಣಿನ ಹಕ್ಕುಗಳನ್ನು ಮೊಟಕುಗೊಳಿಸುವಾಗ ಮಾತ್ರ ಹೆಣ್ಣಿನ ಶೋಷಣೆ ನಡೆಯುತ್ತದೆ ಎಂದು.

ಆದರೆ ಫ್ರೆಂಚ್ ಸಮಾಜಶಾಸ್ತ್ರಜ್ಞ Pierre Bourdieu ಹೇಳುವುದೇನೆಂದರೆ, ಶೋಷಣೆ ಕೇವಲ ಹೊರಗಿನವರಿಂದ ಆಗುತ್ತದೆ ಎನ್ನುವುದು ನಿಮ್ಮ ಅನಿಸಿಕೆಯಾದರೆ ನಿಮಗೆ ಶೋಷಣೆಯ ಒಳಸುಳಿಗಳ ಬಗ್ಗೆ ಏನೂ ಗೊತ್ತಿಲ್ಲ ಎನ್ನಬಹುದು. ಅವರ ಪ್ರಕಾರ, ಅತ್ಯಂತ ಯಶಸ್ವಿ ಅಧಿಕಾರ ಪದ್ಧತಿ, ದೈಹಿಕ ಬಲವನ್ನು ಉಪಯೋಗಿಸುವುದಿಲ್ಲ. ನಿಜದಲ್ಲಿ ಅದು ಸಾಂಕೇತಿಕ ಹಿಂಸೆ (symbolic violence) ಎನ್ನುವ ಸೈಕಾಲೊಜಿಕಲ್ ಆಯುಧವನ್ನು ಬಳಸುತ್ತದೆ. ಇದು ಸಾಬೀತು ಮಾಡುವುದೇನೆಂದರೆ ಪುರುಷಾಧಿಪತ್ಯ ನಿಮ್ಮ ಮೇಲೆ ಹೊರಗಿನಿಂದ ಮಾತ್ರ ಆಗುತ್ತಿಲ್ಲ ಅದು ನಿಮ್ಮ ಒಳಗೂ ನಡೆಯುತ್ತಿದೆ. ದೈಹಿಕ ಹಿಂಸೆ ನಿಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಯಾರಾದರೂ ನಿಮ್ಮ ತಲೆಗೆ ಬಂದೂಕನ್ನಿಟ್ಟು ನೀವು ಏನನ್ನ ಧರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದರೆ, ನಿಮಗೆ ಗೊತ್ತಾಗುತ್ತದೆ ನಿಮ್ಮ ಮೇಲೆ ಶೋಷಣೆ ಮಾಡಲಾಗುತ್ತಿದೆ ಎನ್ನುವುದು. ಆಗ ನೀವು ಆ ವ್ಯಕ್ತಿಯನ್ನು ದ್ವೇಷ ಮಾಡುತ್ತೀರ, ಅವರ ವಿರುದ್ಧ ಬಂಡೇಳುತ್ತೀರ.

ಆದರೆ ಸಾಂಕೇತಿಕ ಹಿಂಸೆ ಒಂದು ಜಾದೂವಿನ ಥರ ಕೆಲಸ ಮಾಡುತ್ತದೆ. ಇದು ಹೇಗೆಂದರೆ ವ್ಯವಸ್ಥೆ, ಶೋಷಿತರನ್ನು brain wash ಮಾಡಿ ಅವರ ಗುಲಾಮಿತನ ಬಹಳ ಸ್ವಾಭಾವಿಕವಾದದ್ದು , ಸುಂದರವಾದದ್ದು ಮತ್ತು ಪವಿತ್ರವಾದದ್ದು ಎಂದು ಮನವೊಲಿಸುತ್ತದೆ. Pierre Bourdieu ನ ಪ್ರಕಾರ ಶೋಷಕರ ದೊಡ್ಡ ಗೆಲುವು ಯಾವುದೆಂದರೆ, ಶೋಷಿತರು ತಮ್ಮ ಗುಲಾಮಿತನವನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳುವುದು. ಯಾವಾಗ, ಹಿಲ್ಸ್ ಧರಿಸುತ್ತ, cosmetic surgery ಮಾಡಿಸಿಕೊಳ್ಳುತ್ತ, ವಿಪರೀತ ಡಯಟ್ ಮಾಡುತ್ತ ಹೆಣ್ಣು ದಿನಗಟ್ಟಲೇ, ಗಂಟೆಗಟ್ಟಲೆ ನೋವು ಅನುಭವಿಸುತ್ತಾಳೋ, ಮತ್ತು ಇದನ್ನೆಲ್ಲ ಆಕೆ, ತಾನು ಗಂಡಿನ ಆದೇಶದ ಮೇಲೆ ಮಾಡುತ್ತಿಲ್ಲ. ಬದಲಾಗಿ ಇದನ್ನು ನಾನು ನನ್ನ ಮರ್ಜಿಯ ಪ್ರಕಾರ ಮಾಡುತ್ತಿದ್ದೇನೆ, ಇದರಿಂದ ನಾನು ಬಲಗೊಳ್ಳುತ್ತಿದ್ದೇನೆ, I am empowering myself ಎನ್ನುವುದನ್ನ Pierre Bourdieu ಸಾಂಕೇತಿಕ ಹಿಂಸೆಯ ಬ್ರಿಲಿಯನ್ಸ್ ಎಂದು ಗುರುತಿಸುತ್ತಾರೆ.

ನಿಮ್ಮ ಮೇಲೆ ನೀವೇ ಹಿಂಸೆ ಮಾಡಿಕೊಳ್ಳುವುದು ಬೇರೆಯವರ ಒತ್ತಾಯದ ಮೇಲೆ ಅಲ್ಲ, ಇದು ನಿಮ್ಮ ಸ್ವಂತದ ಐಡಿಯಾ ಎಂದು ವ್ಯವಸ್ಥೆ ನಿಮ್ಮ ಮನವೊಲಿಸಿಟ್ಟಿದೆ. ಆದರೆ ನಾವು ಯೋಚಿಸ ಬೇಕಾದದ್ದು ಏನೆಂದರೆ, ವ್ಯವಸ್ಥೆ ಇದನ್ನು ಹೇಗೆ ಜಾರಿಗೊಳಿಸುತ್ತದೆ ಎನ್ನುವುದನ್ನ. ಇದರ ಉತ್ತರ ಏನೆಂದರೆ ವ್ಯವಸ್ಥೆ, ಅಧಿಕಾರ ಮತ್ತು ಶೋಷಣೆಗೆ ಪ್ರಕೃತಿಯ ಹೆಸರು ನೀಡುವ ಮೂಲಕ ಇದನ್ನು ಸಾಧಿಸಿಕೊಳ್ಳುತ್ತದೆ.

ಸಮಾಜ ಹೇಳುತ್ತದೆ, ಹೆಣ್ಣು ಸ್ವಾಭಾವಿಕವಾಗಿ ಹೆಚ್ಚು ಮಮತಾಮಯಿ, ಕಾಳಜಿ ಮಾಡುವುದು ಅವಳಿಗೆ ಬಹಳ ಸಹಜ , ಮನೆ ನೋಡಿಕೊಳ್ಳುವುದು ಆಕೆಗೆ ಪ್ರಕೃತಿದತ್ತವಾಗಿ ಒಲಿದು ಬಂದಿರುವ ವರ ಮುಂತಾಗಿ. ಸಮಸ್ಯೆ ಶುರುವಾಗೋದು ಇಲ್ಲಿಯೇ. ಯಾವಾಗ ಇಂಥ ಶೋಷಣೆಗೆ nature ಮತ್ತು biology ಯ ಹೆಸರು ನೀಡಲಾಗುತ್ತದೆಯೋ ಆಗ ಹೆಣ್ಣು ತಾನಾಗಿಯೇ ಮುಂದೆ ಬಂದು ಹೆಚ್ಚಿನ ಪ್ರಮಾಣದ unpaid , ಭಾವನಾತ್ಮಕ ಮತ್ತು ದೈಹಿಕ ಕೆಲಸಗಳನ್ನು ತನ್ನ ಮೇಲೆ ಹೊತ್ತುಕೊಳ್ಳುತ್ತಾಳೆ. ಹೀಗೆ ಮಾಡದೇ ಹೋದರೆ ತಾನು ಕೇವಲ ಸಮಾಜದ ನಿಯಮಗಳನ್ನು ಮಾತ್ರ ಮೀರುತ್ತಿಲ್ಲ, ಬದಲಾಗಿ ಹೆಣ್ಣಾಗುವುದರಲ್ಲಿಯೇ ತಾನು ಅಯಶಸ್ವಿಯಾಗುತ್ತಿದ್ದೇನೆ ಎಂದುಕೊಳ್ಳುತ್ತಾಳೆ. ಮತ್ತು ಈ ಕಾರಣವಾಗಿಯೇ ಹೆಣ್ಣು, ಪುರುಷಾಧಿಪತ್ಯದ ಬಹು ದೊಡ್ಡ ಸೆಕ್ಯುರಿಟಿ ಗಾರ್ಡ್ ಆಗಿ ರೂಪಿತಳಾಗುತ್ತಾಳೆ.

ನೀವು ಗಮನಿಸಿರಬಹುದು, ಹೆಣ್ಣಿನ modesty (ನಮ್ರ ವರ್ತನೆ) ಯ ಮೇಲೆ ಯಾರು ಹೆಚ್ಚು ಕಣ್ಣಿಟ್ಟಿರುತ್ತಾರೆ ಎನ್ನುವುದನ್ನ. ಬಹುತೇಕ ಈ ಕೆಲಸ ಮಾಡೋದು ಮನೆಯ ಹಿರಿಯ ಹೆಂಗಸರು. ಮನೆಯ ಸೊಸೆಯ ಮೇಲೆ ಬೇಗ ಮಕ್ಕಳನ್ನು ಹೆರುವ ಒತ್ತಾಯ ಯಾರು ಮಾಡುತ್ತಾರೆ? ಬಹುತೇಕ ಮನೆಯ ಹಿರಿಯ ಹೆಂಗಸರು. ಶೋಷಿತರು ಗುಲಾಮಿತನವನ್ನು ತಮ್ಮೊಳಗೆ ಎಷ್ಟು ಒಂದಾಗಿಸಿಕೊಂಡಿದ್ದಾರೆಂದರೆ, ಅವರು ಸ್ವತಃ ತಮ್ಮನ್ನು ತಾವು ಕಂಟ್ರೋಲ್ ಮಾಡಿಕೊಳ್ಳುತ್ತಾರೆ. ನಿಜವಾದ ಸ್ವಾತಂತ್ರ್ಯ ಯಾವುದೆಂದರೆ, ನಿಮ್ಮ ಎದುರು ನಿಂತು ನಿಮ್ಮನ್ನು ಶೋಷಿಸುತ್ತಿರುವ ಗಂಡಿಗೆ ಸವಾಲು ಹಾಕುವುದು ಮಾತ್ರ ಅಲ್ಲ, ಅವರು ನಿಮ್ಮ ಮೆದುಳಿನಲ್ಲಿ ಈಗಾಗಲೇ download ಮಾಡಿರುವ ಸಾಫ್ಟವೇರ್ ನ un-install ಮಾಡುವುದು ಕೂಡ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.