ದೇವರ ಅಸ್ತಿತ್ವ ಕುರಿತ ವಾಗ್ವಾದ : ಪಾಸ್ಕಲ್‌ನ ಪಣ

ಪಾಸ್ಕಲ್ ನ ಪ್ರಕಾರ ದೇವರ ಅಸ್ತಿತ್ವದ ವಿಷಯದಲ್ಲಿ ಎರಡು ಸಾಧ್ಯತೆಗಳಿವೆ. ಒಂದು ದೇವರು ಇದ್ದಾನೆ ಎನ್ನುವುದಾದರೆ ಇನ್ನೊಂದು ದೇವರು ಇಲ್ಲ ಎನ್ನುವುದು. ಬದುಕನ್ನ ನಾವು ಬಾಳು ರೀತಿಯಲ್ಲಿಯೂ ಎರಡು ಸಾಧ್ಯತೆಗಳಿವೆ. ಒಂದು ನಾವು ಆಸ್ತಿಕರಾಗಿ ಬದುಕುತ್ತೀವಿ ಹಾಗು ಇನ್ನೊಂದು ನಾವು ನಾಸ್ತಿಕರಾಗಿ ಜೀವನವನ್ನು ನಡೆಸುತ್ತೀವಿ… । ಚಿದಂಬರ ನರೇಂದ್ರ

ಫಿಲಾಸೊಫರ್ ‘ಪಾಸ್ಕಲ್ ನ ಪಣ’ ( Pascal’s wager ) ಎನ್ನುವುದು ದೇವರಿದ್ದಾನೋ ಇಲ್ಲವೋ ಎಂಬ ವಾದದ ಫಿಲಾಸೊಫಿಯ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಆರ್ಗ್ಯುಮೆಂಟ್. ಪಾಸ್ಕಲ್ ತತ್ವಜ್ಞಾನಿಯಾಗಿದ್ದ ನಿಜ ಆದರೆ ಅವನು ಗಣಿತಶಾಸ್ತ್ರಜ್ಞ ನೂ ಆಗಿದ್ದ. ದೇವರ ಅಸ್ತಿತ್ವದ ಕುರಿತಾದ ಅವನ ವಾದ ಸಂಭವನೀಯತೆಯ ಸಿದ್ಧಾಂತದ ( Theory of Probability) ಮೇಲೆ ನಿರ್ಭರವಾಗಿತ್ತು. ಪಾಸ್ಕಲ್ ನ ಪ್ರಕಾರ ದೇವರ ಅಸ್ತಿತ್ವದ ವಿಷಯದಲ್ಲಿ ಎರಡು ಸಾಧ್ಯತೆಗಳಿವೆ. ಒಂದು ದೇವರು ಇದ್ದಾನೆ ಎನ್ನುವುದಾದರೆ ಇನ್ನೊಂದು ದೇವರು ಇಲ್ಲ ಎನ್ನುವುದು.

ಹಾಗೆಯೇ, ಬದುಕನ್ನ ನಾವು ಬಾಳು ರೀತಿಯಲ್ಲಿಯೂ ಎರಡು ಸಾಧ್ಯತೆಗಳಿವೆ. ಒಂದು ನಾವು ಆಸ್ತಿಕರಾಗಿ ಬದುಕುತ್ತೀವಿ ಹಾಗು ಇನ್ನೊಂದು ನಾವು ನಾಸ್ತಿಕರಾಗಿ ಜೀವನವನ್ನು ನಡೆಸುತ್ತೀವಿ. ನಾನು ನಾಸ್ತಿಕನಾಗಿ ಬದುಕುತ್ತೇನಾದರೆ, ಮಂದಿರ ಮಸಿದಿ ಚರ್ಚುಗಳಿಗೆ ಹೋಗದೆ, ಪವಿತ್ರ ಗ್ರಂಥಗಳನ್ನು ಓದದೇ, ಇರುತ್ತೇನಾದರೆ, ಹಾಗು ಒಂದು ವೇಳೆ ದೇವರು ಇರುವ ವಿಷಯ ನಿಜವಾದರೆ ನಾನು ಶಾಶ್ವತವಾಗಿ ಸ್ವರ್ಗವನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ನಾನು ಸ್ವರ್ಗದ ಟಿಕೇಟ್ ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ಬಹುಶಃ ನನಗೆ ನರಕದ ದಾರಿ ಹಿಡಿಯಬೇಕಾಗಿ ಬರಬಹುದು.

ಆದರೆ ಇನ್ನೊಂದು ವಿಷಯ ಕಲ್ಪನೆ ಮಾಡಿಕೊಳ್ಳಿ, ನೀವು ಆಸ್ತಿಕರಾಗಿ ಬದುಕುತ್ತೀರಿ, ದೇವರನ್ನ ನಂಬುತ್ತೀರಿ, ಪವಿತ್ರ ಗ್ರಂಥಗಳ ಪಠಣ ಮಾಡುತ್ತೀರಿ, ಮತ್ತು ದೇವರು ಇರುವ ಸಂಗತಿ ನಿಜವಾದರೆ, ಸ್ವರ್ಗದ ಅವಕಾಶ ನಿಮಗೆ ಕಟ್ಟಿಟ್ಟ ಬುತ್ತಿ. ಪಾಸ್ಕಲ್ ನಿಗೆ ಇದು ತತ್ವಜ್ಞಾನದ ಇತಿಹಾಸದಲ್ಲಿ ಅತ್ಯಂತ ಸುರಕ್ಷಿತವಾದ ಪಣ. ಇಂಥ ಅತ್ಯಂತ ಸುರಕ್ಷಿತ ಆಯ್ಕೆಯ ಮೇಲೆ ಯಾವ ಜಾಣ ತಾನೇ ಬೆಟ್ ಮಾಡಲಾರ? ಪಾಸ್ಕಲ್ ಹೇಳುವ ಹಾಗೆ, Faith ಎನ್ನುವುದು ಪ್ರೂವ್ ಮಾಡಲಾಗದ ಸಂಗತಿ, ಮತ್ತು ನಂಬಿಕೆಯ ಮೇಲೆ ಪಣ ಹೂಡಿ ಅಕಸ್ಮಾತ್ ನೀವು ಸೋಲುವಿರಾದರೆ, ನೀವು ಕಳೆದುಕೊಳ್ಳುವುದಾದರೂ ಏನು? ಗೆದ್ದರೆ ನೀವು ಸಮಸ್ತವನ್ನೂ ಗೆಲ್ಲುತ್ತೀರಿ, ಸೋತರೆ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ.

ನಿಮ್ಮ ಅನಿಸಿಕೆ ಏನು? ದೇವರ ನಂಬಿಕೆಯ ಮೇಲೆ ಪಣ ಹೂಡಿ, ಶಾಶ್ವತ ಬದುಕನ್ನು ನಿಶ್ಚಿತ ಮಾಡಿಕೊಳ್ಳುತ್ತೀರೋ ಅಥವಾ ಪಾಸ್ಕಲ್ ನ ಸಂಭವನೀಯತೆಯ ವಾದದಲ್ಲಿ ಏನಾದರೂ ತಪ್ಪಿದೆ ಎಂದು ನಿಮಗೆ ಅನಿಸುತ್ತದೆಯೋ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.