ಸಂಬಂಧಗಳ ನಡುವಿನ ನಿಯತಿ in yun

ನೀವು ಘಟನೆಗಳನ್ನ, ಸಂಗತಿಗಳನ್ನ ಕೇವಲ ಅನಗತ್ಯದ ಆಕಸ್ಮಿಕಗಳೆಂದು ನೋಡದೇ ಅವುಗಳನ್ನ ಸೂಚನೆಗಳೆಂದು ನೋಡಬಲ್ಲಿರಾದರೆ, ಆಗ ನೀವು ಜಗತ್ತನ್ನು ಒಂದು ಅವಕಾಶವಾಗಿ ನೋಡಲು ಶುರು ಮಾಡುತ್ತೀರಿ. ಸಹಾಯ ಪಡೆಯಲು ಸಿದ್ಧವಾಗಿರುವಂತೆ, ಬದಲಾಗಲು ಸಿದ್ಧರಾಗಿರುವಂತೆ, ನೀವು ಬದುಕನ್ನ ಬಾಳಬಲ್ಲಿರಾದರೆ, ನಿಮಗೆ ಸಹಾಯ ಸಿಗುತ್ತದೆ, ಖಂಡಿತವಾಗಿ ನೀವು ಬದಲಾಗುತ್ತೀರಿ ~ ಚಿದಂಬರ ನರೇಂದ್ರ

ಯಾರೋ ಒಬ್ಬರು ಅಪರಿಚಿತರು ಪಾರ್ಕ ನಲ್ಲಿ ನಿಮಗೆ ಎದುರಾಗುತ್ತಾರೆ, ಸಹಜವಾಗಿ ಅವರನ್ನು ನೋಡಿ ನೀವು ಮುಗುಳ್ನಗುತ್ತೀರಿ, ತಲೆ ಬಾಗಿಸಿ ಗ್ರೀಟ್ ಮಾಡುತ್ತಿರಿ. ಮತ್ತು ಆಮೇಲೆ ನಿಮ್ಮ ಪಾಡಿಗೆ ನೀವು ನಿಮ್ಮ ಬದುಕಿನಲ್ಲಿ ಬ್ಯುಸಿ ಆಗಿಬಿಡುತ್ತೀರಿ. ಕೆಲ ದಿನಗಳ ನಂತರ ಅದೇ ವ್ಯಕ್ತಿ ಸುಪರ್ ಮಾರ್ಕೇಟಿನಲ್ಲಿ ನಿಮಗೆ ಮತ್ತೆ ಎದುರಾಗುತ್ತಾರೆ. ಕೋರಿಯನ್ ಐಡಿಯಾ in-yun ಪ್ರಕಾರ ಇಲ್ಲಿ ಏನೋ ಒಂದು ಮಹತ್ವದ ಸಂಗತಿ ಸಂಭವಿಸುತ್ತಿದೆ. in-yun ಎಂದರೆ ನಿಯತಿ, ಅದರ ನಿಜವಾದ ಅರ್ಥ ವ್ಯಕ್ತಿಗಳ, ಸಂಬಂಧಗಳ ನಡುವಿನ ನಿಯತಿ.

in – yun ಗೂ, ಬುದ್ಧಿಸ್ಟ್ ಐಡಿಯಾಗಳಾದ ಸಂಸಾರ ಮತ್ತು ಪುನರ್ಜನ್ಮಕ್ಕೂ ಸಂಬಂಧವಿದೆ. ಅವಶ್ಯಕವಾಗಿ ಹೀಗೆಂದರೆ ಯಾರೋ ಒಬ್ಬ ವ್ಯಕ್ತಿ ನಿಮಗೆ ಎರಡು ಬಾರಿ ಎದುರಾಗುತ್ತಾರೆಂದರೆ ಇದು ಕೇವಲ ಕಾಕತಾಳಿಯವಲ್ಲ. ಯೂನಿವರ್ಸ್ ನಿಮಗೆ ಏನೋ ಹೇಳಲು ಪ್ರಯತ್ನ ಮಾಡುತ್ತಿದೆ. ಇಲ್ಲಿ ಯಾರೋ ಮಹತ್ವದ ವ್ಯಕ್ತಿ ಇದ್ದಾರೆ, ಅವರು ಏನೋ ಮಹತ್ವದ್ದನ್ನ ಕಲಿಸಲಿದ್ದಾರೆ ಎಂದು ಬ್ರಹ್ಮಾಂಡ ನಿಮಗೆ ಹೇಳಲು ಬಯಸುತ್ತಿದೆ. ಹೌದು ಬುದ್ಧಿಸಂ ಒಂದು ಧರ್ಮ ಮತ್ತು in-yun ಕೆಲವು ಧಾರ್ಮಿಕ ನಂಬಿಕೆಗಳಿಗೆ ಬದ್ಧವಾದ ಒಂದು ಐಡಿಯಾ. ಆದರೆ ಇದರ non Buddhist version ಕೂಡ ಒಂದಿದೆ.

ಫ್ರೆಂಚ್ ಫಿಲಾಸೊಫರ್ ಗ್ಯಾಬ್ರಿಯಲ್ ಮಾರ್ಸೆಲ್ ನ ಪ್ರಕಾರ, ನಾವು ನಮ್ಮ ಬದುಕನ್ನ ಲಭ್ಯತೆಯ ಸ್ಥಿತಿಯಲ್ಲಿ ( state of disponibilité) ಬಾಳಬೇಕು. ಹೀಗೆಂದರೆ, ನಾವು ಜಗತ್ತು ಹೇಳಿದಂತೆ ಕೇಳಲು ಸದಾ ಸಿದ್ಧರಾಗಿರಬೇಕು, we should be ready to be at the disposal of the world.

ನೀವು ಘಟನೆಗಳನ್ನ, ಸಂಗತಿಗಳನ್ನ ಕೇವಲ ಅನಗತ್ಯದ ಆಕಸ್ಮಿಕಗಳೆಂದು ನೋಡದೇ ಅವುಗಳನ್ನ ಸೂಚನೆಗಳೆಂದು ನೋಡಬಲ್ಲಿರಾದರೆ, ಆಗ ನೀವು ಜಗತ್ತನ್ನು ಒಂದು ಅವಕಾಶವಾಗಿ ನೋಡಲು ಶುರು ಮಾಡುತ್ತೀರಿ. ಸಹಾಯ ಪಡೆಯಲು ಸಿದ್ಧವಾಗಿರುವಂತೆ, ಬದಲಾಗಲು ಸಿದ್ಧರಾಗಿರುವಂತೆ, ನೀವು ಬದುಕನ್ನ ಬಾಳಬಲ್ಲಿರಾದರೆ, ನಿಮಗೆ ಸಹಾಯ ಸಿಗುತ್ತದೆ, ಖಂಡಿತವಾಗಿ ನೀವು ಬದಲಾಗುತ್ತೀರಿ. in -yun ಎನ್ನುವುದು crossing path theory ಯ ತಾತ್ವಿಕ ವರ್ಷನ್. ಇದರ ಪ್ರಕಾರ, ಯಾರಾದರೂ ನಿಮ್ಮ ಬದುಕನ್ನು ಪ್ರವೇಶಿಸುತ್ತಾರೆ ಎಂದರೆ ಅದರ ಹಿಂದೆ ಏನೋ ಒಂದು ಕಾರಣವಿದೆ.

ಯಾವುದೋ ಒಂದು ಸಂಗತಿ, ಒಂದು ಘಟನೆ, ಮತ್ತೆ ಮತ್ತೆ ಮತ್ತೆ ನಿಮ್ಮ ಜೊತೆ ಸಂಭವಿಸುತ್ತಿದೆಯಾದರೆ, ಇದರಿಂದ ನೀವು ಕಲಿಯಬೇಕಾದದ್ದು ಏನೋ ಇದೆ ಎನ್ನುವುದನ್ನ ಬ್ರಹ್ಮಾಂಡ ನಿಮಗೆ ಸೂಚಿಸುತ್ತಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.