ಮೆದುಳಿಗೆ ಎಲ್ಲವನ್ನೂ ಝಿರೋದಿಂದ ವಿಶ್ಲೇಷಣೆ ಮಾಡುವುದರಲ್ಲಿ ಆಸಕ್ತಿ ಇಲ್ಲ. ಆದ್ದರಿಂದ ಅದು ಮೊದಲು ಒಂದು ಸಾಮಾನ್ಯ ಅನಿಸಿಕೆಯನ್ನು ಕಟ್ಟಿಕೊಂಡು ಅದರ ಸುತ್ತಲೂ ಬೇರೆ ಎಲ್ಲವನ್ನೂ ಕಟ್ಟಿಕೊಳ್ಳುತ್ತದೆ… । ಸಂಗ್ರಹಾನುವಾದ : ಚಿದಂಬರ ನರೇಂದ್ರ
ಸೈಕಾಲೊಜಿಯಲ್ಲಿ Halo Effect ಎನ್ನುವ ಹೆಸರಿನ ಕುತೂಹಲಕಾರಿ ಪರಿಕಲ್ಪನೆಯೊಂದಿದೆ. Halo Effect ನ ಪ್ರಕಾರ ನೀವು ಒಬ್ಬ ವ್ಯಕ್ತಿಯಲ್ಲಿ ಒಂದು ಒಳ್ಳೆಯ ಗುಣವನ್ನು ಗಮನಿಸುವಿರಾದರೆ, ನಿಮ್ಮ ಮೆದುಳು ಆ ವ್ಯಕ್ತಿಯಲ್ಲಿ ಇನ್ನೂ ಹಲವಾರು ಒಳ್ಳೆಯ ಗುಣಗಳಿವೆ ಎಂದು ತಿಳಿದುಕೊಳ್ಳಲು ಶುರು ಮಾಡುತ್ತದೆ. ಇದು ಯಾವತ್ತೂ ನಿಜ ಆಗಿರಬೇಕಿಲ್ಲ ಆದರೆ ಮೆದುಳಿಗೆ ಶಾರ್ಟ್‌ಕಟ್ ಗಳೆಂದರೆ ಇಷ್ಟ.
ಉದಾಹರಣೆಗೆ, well dressed ಆದ, ಚುರುಕು ಮಾತುಗಳ, ಹಸನ್ಮುಖಿ ವ್ಯಕ್ತಿಯೊಬ್ಬ ನಿಮಗೆ ಎದುರಾದಾಗ, ಅವನು ಮಾತನಾಡುವುದಕ್ಕಿಂತ ಮುಂಚೆಯೇ ನಿಮ್ಮ ಮೆದುಳು ಅವನೊಬ್ಬ ಸ್ಮಾರ್ಟ್ ಆದ, ಆತ್ಮವಿಶ್ವಾಸವಿರುವ, ಸಾಮರ್ಥ್ಯಶಾಲಿ ವ್ಯಕ್ತಿಯೊಂದು ಗ್ರಹಿಸಲು ಶುರು ಮಾಡುತ್ತದೆ. ಆದರೆ ಈ ಯಾವುದು ಕೂಡ ಇನ್ನೂ ಪ್ರೂವ್ ಆಗಿಲ್ಲ ಆದರೂ ನಿಮ್ಮ ಮೆದಳು ಆಗಲೇ ಹಾಗೆಂದು ನಿರ್ಣಯ ಮಾಡಿಯಾಗಿದೆ.
ಇದು ಕೇವಲ ಮನುಷ್ಯರ ಜೊತೆ ಮಾತ್ರ ಆಗುವಂಥದಲ್ಲ, ಇದು ಪ್ರತಿಯೊಂದು ಸಂಗತಿಯೊಂದಿಗೂ ತಳಕು ಹಾಕಿಕೊಂಡಿದೆ. ಉದಾಹರಣೆ ಹೆಸರು ಮಾಡಿರುವ ಪ್ರೀಮಿಯಂ ಬ್ರ್ಯಾಂಡ್ ಗಳು ನಿಮಗೆ ವಿಶ್ವಾಸಾರ್ಹ ಅನಿಸುತ್ತವೆ. ಸರಾಗವಾಗಿ ಮಾತನಾಡುವ ವ್ಯಕ್ತಿ ನಿಮಗೆ ಜಾಣ ಅನಿಸುತ್ತಾರೆ. ಕಾನ್ಫಿಂಡಂಟ್ ಆಗಿರುವ ವ್ಯಕ್ತಿಯ ಮಾತುಗಳು ನಿಮಗೆ ಹೆಚ್ಚು ನಿಜ ಅನಿಸುತ್ತವೆ. ಏಕೆಂದರೆ ಒಂದು ಕಾಣುವ ಸಿಗ್ನಲ್ ನ ಆಧಾರವಾಗಿಟ್ಟುಕೊಂಡು ನಿಮ್ಮ ಮೆದುಳು ಮಿಸ್ಸಿಂಗ್ ಇನ್ಫಾರ್ಮೇಷನ್ ನ ತುಂಬಿಕೊಳ್ಳುತ್ತಿರುತ್ತದೆ.
ಇದು ಕೇವಲ ಮೆದುಳಿನ ಸಾಮಾಜಿಕ ವರ್ತನೆ ಅಲ್ಲ, ಇದು ನಿಮ್ಮ ಮೆದುಳು ಹೇಗೆ ಎನರ್ಜಿಯನ್ನು ಸೇವ್ ಮಾಡಿಕೊಳ್ಳುತ್ತದೆ ಎನ್ನುವುದಕ್ಕೆ ಉದಾಹರಣೆ. ನಿಮ್ಮ ಮೆದುಳಿಗೆ ಎಲ್ಲವನ್ನೂ ಝಿರೋದಿಂದ ವಿಶ್ಲೇಷಣೆ ಮಾಡುವುದರಲ್ಲಿ ಆಸಕ್ತಿ ಇಲ್ಲ. ಆದ್ದರಿಂದ ಅದು ಮೊದಲು ಒಂದು ಸಾಮಾನ್ಯ ಅನಿಸಿಕೆಯನ್ನು ಕಟ್ಟಿಕೊಂಡು ಅದರ ಸುತ್ತಲೂ ಬೇರೆ ಎಲ್ಲವನ್ನೂ ಕಟ್ಟಿಕೊಳ್ಳುತ್ತದೆ. ನಿಮ್ಮ ಕುರಿತಾದ ನಿಮ್ಮ general impression, ಕೆಲಸ ಪೂರ್ತಿ ಮಾಡದವ, delay ಮಾಡುವವ, ಅವೊಯಿಡ್ ಮಾಡುವವ, ಗುರಿ ಮುಟ್ಟದಿರುವವ ಇತ್ಯಾದಿ ಆಗಿದ್ದರೆ, ನಿಮ್ಮ ಮೆದುಳು ಈ ಸಂಗತಿಗಳ ಸುತ್ತಲೂ ತನ್ನ ಅನಿಸಿಕೆಯನ್ನು ಕಟ್ಟಿಕೊಳ್ಳುತ್ತದೆ, ನಾನು ಒಬ್ಬ consistent ವ್ಯಕ್ತಿ ಅಲ್ಲ ಎಂದು.
ಇದು ಕೇವಲ ಧನಾತ್ಮಕ ಸಂಗತಿಗಳ ಬಗ್ಗೆ ಅಲ್ಲ. ನಿಮ್ಮ ಮೆದುಳು ತಾನು ಗಮನಿಸಬಹುದಾದ ಮಾದರಿಗಳನ್ನು ನೆಚ್ಚಿಕೊಂಡಿರುತ್ತದೆ. ಆದ್ದರಿಂದ ಮುಂದಿನ ಕೆಲ ದಿನಗಳಲ್ಲಿ, ನೀವು ಹೇಗೆ ಕಾಣಿಸಿಕೊಳ್ಳ ಬಯಸುತ್ತಿರಿ, ಹೇಗೆ ಗುರುತಿಸಿಕೊಳ್ಳಬಯಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಗಮನವನ್ನು ಫೋಕಸ್ ಮಾಡಿ, ಇನ್ನೊಬ್ಬರ ದೃಷ್ಟಿಯಲ್ಲಲ್ಲ, ಸ್ವತಃ ನಿಮ್ಮ ದೃಷ್ಟಿಯಲ್ಲಿ. ಆದ್ದರಿಂದ ಕಣ್ಣಿಗೆ ಕಾಣುವಂಥ ಕೆಲವು ಸ್ಪಷ್ಟ ಆ್ಯಕ್ಷನ್ ಗಳನ್ನು ಆಯ್ಕೆ ಮಾಡಿಕೊಂಡು ನೀವು ಅಂದುಕೊಂಡದ್ದನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡುತ್ತ, ಸಣ್ಣ ಸಣ್ಣ ಕೆಲಸಗಳನ್ನ ಮನಪೂರ್ವಕವಾಗಿ ಮಾಡಿ ಮುಗಿಸಿ, ಕ್ಯಾಜುವಲ್ ಆಗಿ ಅಲ್ಲ, ಸ್ಪಷ್ಟವಾಗಿ. ಆಗ ನಿಮ್ಮ ಮೆದುಳು ನಿಮ್ಮ ಕುರಿತಾಗಿ ಭರವಸೆಯನ್ನು ಕಟ್ಟಿಕೊಳ್ಳುತ್ತದೆ.

