ಮಾಧ್ಯಮಗಳ ಪ್ರಚೋದನೆ

ಸ್ಯಾಂಡರ್ಸ್ ಅವರ ಈ ಕಥೆ ಮಾಧ್ಯಮಗಳ ಬಗ್ಗೆ. ಮಾಧ್ಯಮಗಳು ಯಾವ ವಿಷಯಗಳ ಬಗ್ಗೆ ತಾವು ಮಾತನಾಡಲು ಬಯಸುತ್ತವೆಯೋ, ಅವುಗಳ ಮೇಲೆ ನಾವು ಅತಿಯಾಗಿ concentrate ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತವೆ ~ ಸಂಗ್ರಹಾನುವಾದ : ಚಿದಂಬರ ನರೇಂದ್ರ

ಜಾರ್ಜ್ ಸ್ಯಾಂಡರ್ಸ್ ತಮ್ಮ The Brain-Dead Megaphone ಎನ್ನುವ ಪ್ರಬಂಧವನ್ನು ಒಂದು ಕುತೂಹಲಭರಿತ ಕಥೆಯಿಂದ ಶುರು ಮಾಡುತ್ತಾರೆ. ನೀವು ಆಸಕ್ತಿದಾಯಕ ವ್ಯಕ್ತಿಗಳಿಂದ ತುಂಬಿದ ಒಂದು ಗ್ಯಾದರಿಂಗ್ ನಲ್ಲಿ ಇದ್ದೀರಿ ಎಂದು ಕಲ್ಪಿಸಿಕೊಳ್ಳಿ. ಪ್ರತಿಯೊಬ್ಬರೂ ತಮ್ಮ ತಮ್ಮ  ಇಷ್ಟದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅಷ್ಟರಲ್ಲಿ ಯಾರೋ ಒಬ್ಬರು ಮೈಕ್ ‌ಕೈಗೆತ್ತಿಕೊಳ್ಳುತ್ತಾರೆ,  ಸಿನಿತಾರೆಯರ ಬಗ್ಗೆ ಗಾಸಿಪ್ ಮಾಡಲು ಶುರು ಮಾಡುತ್ತಾರೆ, ರಾಜಕೀಯದ ಬಗ್ಗೆ, ರಾಜಕಾರಣದ ಬಗ್ಗೆ ಆಕ್ರೋಶಭರಿತವಾಗಿ ಮಾತನಾಡುತ್ತಾರೆ ಮತ್ತು ಹೀಗೆಯೇ ಎಲ್ಲದರ ಬಗ್ಗೆಯೂ ತಮ್ಮ ಜಡ್ಜಮೆಂಟ್ ನೀಡುತ್ತ ಹೋಗುತ್ತಾರೆ.

ಇದರಿಂದ ಬೇಸತ್ತ ಜನ ಮತ್ತೆ ತಮ್ಮ ಮಾತುಕತೆಗಳಿಗೆ ಮರಳಲು ಪ್ರಯತ್ನಿಸುತ್ತಾರಾದರೂ, ಮೈಕ್ ‌ನ ಶಬ್ದ ಎಷ್ಟು ಜೋರಾಗಿರುತ್ತದೆಯೆಂದರೆ,  ಜನರಿಗೆ ಈ ಅಸಂಬದ್ಧ ಮತ್ತು ಕಟುವಾದ ಟ್ಯಾಬ್ಲಾಯ್ಡ್ ಗಾಸಿಪ್‌ಗಳನ್ನು ಕೇಳದೇ ಬೇರೆ ದಾರಿಯೇ ಇರುವುದಿಲ್ಲ. ಈ ಸಂದಿಗ್ಧವನ್ನೇ ನಾವು ಈಗ ಚರ್ಚಿಸ ಬೇಕಾಗಿದೆ.

ಆದರೆ ಕೊನೆಗೆ ಮೈಕ್ ‌ ಸುಮ್ಮನಾದಾಗ, ಜನರು ಅವನ ಮಾದರಿಯನ್ನೇ ಅನುಸರಿಸಲು ಪ್ರಾರಂಭಿಸುತ್ತಾರೆ. ಅವರ ಮಾತುಕತೆ ಒಂದು ಬಗೆಯಲ್ಲಿ ಈಗ ನಾರ್ಮಲೈಜ್ ಆಗಿದೆ. ಅವರ ಮಾತುಕತೆಯಲ್ಲಿ ಈಗ  ಇಮ್ಯಾಜಿನೇಷನ್ ಮತ್ತು ವೈವಿಧ್ಯತೆ ಇಲ್ಲ. ಸ್ಯಾಂಡರ್ಸ್ ಪ್ರಕಾರ , “ಮೈಕ್ ಹಿಡಿದ ವ್ಯಕ್ತಿ ಪಾರ್ಟಿಯ ಮೇಲೆ ಪರಿವರ್ತನಾತ್ಮಕ ಪರಿಣಾಮ ಬೀರಿದ್ದಾನೆ. ಅವನು ಆ ಸಭೆಯನ್ನು ಹೆಚ್ಚು ಮೂರ್ಖ, ಕಡಿಮೆ ದಯಾಳು ಮತ್ತು ಕಡಿಮೆ ಸುಸಂಭದ್ಧವಾಗಿಸಿದ್ದಾನೆ.”

ಸ್ಯಾಂಡರ್ಸ್ ಅವರ ಈ ಕಥೆ ಮಾಧ್ಯಮಗಳ ಬಗ್ಗೆ. ಮಾಧ್ಯಮಗಳು ಯಾವ ವಿಷಯಗಳ ಬಗ್ಗೆ ತಾವು ಮಾತನಾಡಲು ಬಯಸುತ್ತವೆಯೋ, ಅವುಗಳ ಮೇಲೆ ನಾವು ಅತಿಯಾಗಿ concentrate ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತವೆ.

ಹೌದು, ಇಂದಿನ ದಿನಗಳಲ್ಲಿ ನಾವು ಸಾಮಾಜಿಕ ಮಾಧ್ಯಮಗಳನ್ನೂ ಈ ಸಮೀಕರಣಕ್ಕೆ ಸೇರಿಸಬಹುದು.  ಬೇರೆಯವರನ್ನು ಭೇಟಿಯಾದಾಗ ಏನು ಮಾತನಾಡಬೇಕು ಎಂಬುದನ್ನು ನಾವು ಸ್ವತಃ ಆಯ್ಕೆ ಮಾಡಬಹುದು ಎಂದು ಭಾವಿಸಿರುತ್ತೇವೆ. ಆದರೆ ವಾಸ್ತವದಲ್ಲಿ, ನಮ್ಮ ಮಾತುಕತೆಯ ವಿಷಯಗಳು ಸೀಮಿತವಾಗಿದ್ದು, ಕಾಪಿ ಮಾಡಿದವುಗಳಾಗಿರುತ್ತವೆ. ಅವು ಸಪ್ಪೆಯಾಗಿರುತ್ತವೆ, ಆಕ್ರೋಶದಿಂದ ಕೂಡಿರುತ್ತವೆ ಮತ್ತು ಕಟುವಾಗಿರುತ್ತವೆ.

ಸ್ಯಾಂಡರ್ಸ್,  ಮನುಷ್ಯರು ಸ್ವಭಾವತಃ  ಗಾಸಿಪ್ ಮಾಡುವವರಲ್ಲ ಅಥವಾ ಕಟುವಾಗಿರುವುದಿಲ್ಲ  ಎಂದು ಹೇಳುತ್ತಿಲ್ಲ. ಆದರೆ ನಮ್ಮ ಸಂಪೂರ್ಣ ಗಮನ ದೀರ್ಘಕಾಲದವರೆಗೆ ಮಾಧ್ಯಮಗಳು ಪ್ರಸ್ತುತಪಡಿಸುವ ವಿಷಯಗಳ ಮೇಲೆಯೇ ಕೇಂದ್ರೀಕೃತವಾಗಿದ್ದರೆ, ನಮ್ಮ ಮಾತುಕತೆಗಳೂ ಅದೇ ರೀತಿಯಾಗುತ್ತವೆ ಎಂದು ಸೂಚಿಸುತ್ತಿದ್ದಾರೆ. ಆದ್ದರಿಂದ, ಮಾಧ್ಯಮಗಳು ಮಾತನಾಡುವ ವಿಷಯಗಳನ್ನು ಮೀರಿ ನಾವು ಇತರ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ. ನಾವು ನಮ್ಮ ಕಲ್ಪನಾಶಕ್ತಿಯನ್ನು ಮರುಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ‘ಬ್ರೇನ್-ಡೆಡ್ ಮೆಗಾಫೋನ್’ ವ್ಯಕ್ತಿ ಹೇಳುತ್ತಿರುವ ಮಾತುಗಳಿಂದ ನಮ್ಮ  ಚಿಂತನೆಗಳನ್ನು ಮರಳಿ ಪಡೆದುಕೊಳ್ಳಬೇಕಾಗಿದೆ.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.