ಗುಂಪು, ಕೇಡಿಗೆ ದಾರಿಯೇ?

ಕಿರ್ಕೆಗಾರ್ಡ್ ನ ಪ್ರಕಾರ, The truth can only exist in the individual. ಗುಂಪುಗಳು ಯೋಚನೆ ಮಾಡುವುದಿಲ್ಲ, ಅವು ಕೇವಲ ಪ್ರತಿಕ್ರಿಯಿಸಬಲ್ಲವು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಒಂದು ಚಳುವಳಿ, ಒಂದು ರಾಜಕೀಯ ಪಕ್ಷ, ಅಥವಾ ಒಂದು ಗುಂಪು ಸೇರುವ ಮೂಲಕ ನೀವು ಸಾಮರ್ಥ್ಯಶಾಲಿಗಳಾಗುವಿರಿ ಎಂದು ನೀವು ಯೋಚಿಸುತ್ತೀರಾದರೆ, ಸಂಖ್ಯೆಯಲ್ಲಿ ಬಲವಿದೆ ಎಂದು ನೀವು ಭಾವಿಸಿದ್ದೀರಾದರೆ, ಡ್ಯಾನಿಶ್ ತತ್ವಜ್ಞಾನಿ ಸೊರೇನ್ ಕಿರ್ಕೆಗಾರ್ಡ್ ನ ಮಾತುಗಳನ್ನ ಗಮನಿಸಿ. ಕಿರ್ಕೆಗಾರ್ಡ್ ಮನುಷ್ಯರ ಗುಂಪುಗಳನ್ನು ಗಮನಿಸುತ್ತ ಒಂದು ವಿಷಯವನ್ನು ಅರ್ಥ ಮಾಡಿಕೊಂಡ. ಮನುಷ್ಯ ಒಂದು ಗುಂಪನ್ನು ಸೇರಿಕೊಳ್ಳುತ್ತಿದ್ದಂತೆಯೇ, ಹೆಚ್ಚು ಮೂರ್ಖ, ಹೆಚ್ಚು ಕ್ರೂರ, ಹೆಚ್ಚು ಅಶಕ್ತನಾಗುತ್ತ ಹೋಗುತ್ತಾನೆ. ಆದರೆ ಯಾಕೆ ಹೀಗೆ? ಯಾಕೆ ಗುಂಪು ಸೇರುವ ಮೂಲಕ ನೀವು ಕೆಟ್ಟ ಮನುಷ್ಯರಾಗುತ್ತೀರಿ?

ನೀವು ಒಬ್ಬರೇ ಇರುವಾಗ, ಯಾರಿಗಾದರೂ ಹರ್ಟ್ ಮಾಡಲು ಬಯಸುತ್ತೀರಾದರೆ , ಯಾರಿಗಾದರೂ ನೋವು ಉಂಟು ಮಾಡಲು ನಿರ್ಧರಿಸುತ್ತೀರಾದರೆ, ಆಗ ನಿಮ್ಮೊಳಗೆ ಹುಟ್ಟಿಕೊಳ್ಳುವ ಎಲ್ಲ ತಪ್ಪಿತಸ್ಥ ಭಾವವನ್ನು (guilt) ನೀವು ಒಬ್ಬರೇ ಹೊತ್ತುಕೊಳ್ಳ ಬೇಕಾಗುತ್ತದೆ. ಈ ಗಿಲ್ಟ್ ತುಂಬ ಭಾರವಾಗಿರುತ್ತದೆ. ಇದು ರಾತ್ರಿ ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ. ಅದೇ ನೀವು ಒಂದು ಸಾವಿರಾರು ಜನರ ಗುಂಪನ್ನು ಸೇರಿಕೊಂಡಾಗ, ಈ ನಿಮ್ಮ ವೈಯಕ್ತಿಕ ಗಿಲ್ಟ್ ಸಾವಿರಾರು ಜನರ ನಡುವೆ ಹಂಚಿಹೋಗುತ್ತದೆ. ಪ್ರಾಕ್ಟಿಕಲೀ ನಿಮ್ಮ ಗಿಲ್ಟ್ ಪೂರ್ತಿಯಾಗಿ ಇಲ್ಲವಾಗಿಬಿಡುತ್ತದೆ. ಕಿರ್ಕೆಗಾರ್ಡ್ ನ ಪ್ರಕಾರ, ನಾವು ಈ ಗುಂಪುಗಳನ್ನ ನಮ್ಮ ವೈಯಕ್ತಿಕ ಜವಾಬ್ದಾರಿಗಳಿಂದ ಪಾರಾಗಲು ಬಳಸುತ್ತೇವೆ. ಯಾವಾಗ ಒಬ್ಬ ಮನುಷ್ಯ, ಯುನಿಫಾರ್ಮ ಧರಿಸುತ್ತಾನೋ, ಘೋಷಣೆಗಳನ್ನು ಕೂಗುತ್ತಾನೋ, ಅಥವಾ ಯಾವುದೋ ಒಂದು ಅನಾಮಿಕ ಪ್ರೊಫೈಲ್ ನ ಹಿಂದೆ ಅಡಗಿಕೊಳ್ಳುತ್ತಾನೆಯೋ, ಆಗ ಅವನಿಗೆ ತಾನು ಪೂರ್ತಿಯಾಗಿ ಅದೃಶ್ಯನಾಗಿದ್ದೇನೆ ಎಂದು ಅನಿಸತೊಡಗುತ್ತದೆ. ಮತ್ತು ಈ ಅದೃಶ್ಯ ಮನುಶ್ಯ ಯಾವತ್ತೂ ಬಹಳ ಅಪಾಯಕಾರಿಯಾಗಿರುತ್ತಾನೆ. ಈ ಗುಂಪುಗಳು ಖುಶಿಯಾಗಿಯೇ ಒಂದು ಮನೆಯನ್ನು ಸುಟ್ಟುಬಿಡಬಲ್ಲವು, ಪೂರ್ತಿಯಾಗಿ ಒಂದು ಕಟ್ಟಡವನ್ನು ಬೀಳಿಸಿ ಬಿಡಬಲ್ಲವು. ಒಬ್ಬ ಮನುಷ್ಯನ ಬದುಕನ್ನ ಅದು online ಆಗಿರಬಹುದು ಅಥವಾ off line ಆಗಿರಬಹುದು ಪೂರ್ತಿಯಾಗಿ ನಾಶ ಮಾಡಿ ಬಿಡಬಲ್ಲವು. ಅಥವಾ ಆ ಗುಂಪಿನ ಒಬ್ಬ ಮನುಷ್ಯ ಒಂಟಿಯಾಗಿ ಮಾಡಲು ಹೆದರುವ ಅಪರಾಧವನ್ನು ಈ ಎಲ್ಲರೂ ಸೇರಿ ಯಾವ ಹೆದರಿಕೆ ಇಲ್ಲದೇ ಮಾಡಿ ಬಿಡಬಲ್ಲರು. ಇದರಿಂದ ನಿಮ್ಮ ನೈತಿಕತೆಯಷ್ಟೇ ಅಲ್ಲ ನಿಮ್ಮ ಬುದ್ಧಿಮತ್ತೆಯೂ ನಾಶವಾಗುತ್ತದೆ.

ಕಿರ್ಕೆಗಾರ್ಡ್ ನ ಪ್ರಕಾರ, The truth can only exist in the individual. ಗುಂಪುಗಳು ಯೋಚನೆ ಮಾಡುವುದಿಲ್ಲ, ಅವು ಕೇವಲ ಪ್ರತಿಕ್ರಿಯಿಸಬಲ್ಲವು. ಯಾವಾಗ ನೀವು ಒಂದು ಸೈದ್ಧಾಂತಿಕ ಗುಂಪನ್ನು ಸೇರಿಕೊಳ್ಳುತ್ತೀರೋ ಆಗ ನೀವು ನಿಮ್ಮ ಅತ್ಯಂತ ಹರಿತವಾದ, ಸ್ವಂತ್ರವಾದ ಭಾಗವನ್ನು ಕತ್ತರಿಸಬೇಕಾಗುತ್ತದೆ. ಆಗ ನೀವು “ ಇದು ನಿಜವೇ?” ಎನ್ನುವ ಪ್ರಶ್ನೆ ಕೇಳಿಕೊಳ್ಳುವುದಿಲ್ಲ. ಬದಲಾಗಿ “ಇದರ ಬಗ್ಗೆ ನಮ್ಮ ಗುಂಪು ಏನು ಹೇಳುತ್ತದೆ?” ಎಂದು ಕೇಳಿಕೊಳ್ಳುತ್ತೀರಿ. ಮೂಲಭೂತವಾಗಿ ನೀವು ನಿಮ್ಮ ಬುದ್ಧಿಮತ್ತೆಯನ್ನು ಮಾರಿಕೊಂಡು ಒಂದು belonging ನ ಆರಾಮದಾಯಕವಾದ ಭಾವವನ್ನು ಖರೀದಿ ಮಾಡುತ್ತೀರಿ.

ಗುಂಪುಗಳಿಗೆ ಒಂದೇ ಸಂಗತಿ ಅರ್ಥವಾಗುತ್ತದೆ, black or white, us versus them, ಹೀರೋ ಅಥವಾ ವೈರಿ. ನೀವು ಗುಂಪಿನಲ್ಲಿ ನಿಂತುಕೊಂಡಿದ್ದೀರಾದರೆ, ನೀವು ಚಿಂತಕರಾಗಿ ಉಳಿದಿಲ್ಲ, ನೀವು ಕೇವಲ ಇನ್ನೊಬ್ಬರ ಮಾತುಗಳನ್ನು ರಿಪೀಟ್ ಮಾಡುತ್ತಿರುವ ಗಿಳಿಯಾಗಿದ್ದೀರಿ. ಅತ್ಯಂತ ವಿವೇಕದ ಜನ ಈ ಗುಂಪುಗಳನ್ನು ಮುನ್ನಡೆಸುವಾಗ ಇದು ಸಾರ್ವಜನಿಕ ಒಳಿತಿಗೆ, ನ್ಯಾಯಕ್ಕೆ ಸಹಕಾರಿಯಾಗಬಲ್ಲದಾದರೂ , ಇದು ಕತ್ತಿಯ ಮೇಲಿನ ನಡೆ ಎನ್ನುವುದಂತೂ ಖಚಿತ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.