ಯಾವುದು ಸ್ವಯಂ ಗಂಧ ಬೀರುತ್ತದೆಯೋ ಅದು ತನ್ನ ಇರುವಿನವರೆಗೆ ಘಮಲನ್ನು ಹಂಚುತ್ತಲೇ ಇರುತ್ತದೆ. ಬುದ್ಧ ಹಾಗೆ ಸ್ವಯಂ ಬೋಧೆ ಪಡೆದವನಾಗಿದ್ದ. ಅದನ್ನು ಪಡೆದವರು ಮತ್ತೊಬ್ಬರಿಗೆ ದಾಟಿಸುವ ವಾಹಕಗಳಂತೆ ಆದರು. ಆಯಾ ವಾಹಕವು ತನ್ನ ಗ್ರಹಿಕೆಯಂತೆ ಬೋಧೆಯನ್ನು ದಾಟಿಸಿತು. ಆದ್ದರಿಂದಲೇ ಬುದ್ಧನ ತಿಳಿವಿಗೆ ಇಂದು ಹತ್ತಾರು ವ್ಯಾಖ್ಯೆಗಳು. ~ ಚೇತನಾ ತೀರ್ಥಹಳ್ಳಿ
ಸಂತರ ಕಾವ್ಯದಲ್ಲಿ ಪ್ರೇಮ ಮಾಧುರ್ಯದ ರಾಮ ನಾಮ
ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಾಲಿಗೆ ರಾಮ ನಮ್ಮೊಳಗೆ ಬೆರೆತುಹೋಗಿರುವ ಉದ್ಗಾರ! ರಾಮನ ಹೆಸರೆತ್ತಿ ಮಾತಾಡುವುದು, ಶುಭ ಕೋರುವುದು, ವಂದಿಸುವುದು, ಹಲಬುವುದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕು. ಅಷ್ಟರಮಟ್ಟಿಗೆ ಈ ‘ಪುರುಷೋತ್ತಮ’ ನಮ್ಮಲ್ಲಿ ಬೆರೆತುಹೋಗಿದ್ದಾನೆ. ~ ಗಾಯತ್ರಿ
ಆಧ್ಯಾತ್ಮಿಕ ಪ್ರಬುದ್ಧತೆ : ಹಾಗೆಂದರೇನು!?
ಬಹುತೇಕ ನಾವು ಯಾವುದರ ಆಲೋಚನೆಯಿಂದ, ಚರ್ಚೆಯಿಂದ ಒಳಿತಾಗದೆ ಇರುವ ಮಾತಿರಲಿ, ಕೆಡುಕೇ ಉಂಟಾಗುತ್ತದೆಯೋ – ಅಂತಹ ಕ್ಷುಲ್ಲಕ ಸಂಗತಿಗಳಿಗೆ ಪ್ರಾಮುಖ್ಯ ನೀಡುತ್ತ ಬದುಕನ್ನು ಕುಂಠಿತಗೊಳಿಸಿಕೊಳ್ಳುತ್ತೇವೆ. ಪ್ರಬುದ್ಧ ಮನಸ್ಸುಗಳು ಇಂಥ ಕ್ಷುಲ್ಲಕ ಸಂಗತಿಗಳಿಗೆ ಆಸ್ಪದ ನೀಡಲಾರವು । ಗಾಯತ್ರಿ
ಅರಿವು ಹದ ಬೆರೆತ ಭಕ್ತ ಶ್ರೇಷ್ಠ : ಕನಕ ದಾಸರು
ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ
ಶಿಷ್ಯನು ಸಿದ್ಧನಾದಾಗ ಗುರುವು ಕಾಣಿಸಿಕೊಳ್ಳುತ್ತಾನೆ… : ಬೆಳಗಿನ ಹೊಳಹು
ವಾಸ್ತವದಲ್ಲಿ ದತ್ತ ಅವಧೂತನೊಳಗೆ ಗುರುತನವಿದ್ದಿತು. ಅರಿವೇ ಗುರು ಅಲ್ಲವೆ? ದತ್ತ ಅವಧೂತನ ಚಿಂತನೆಗಳನ್ನು ಯಾವೆಲ್ಲ ಜಡ / ಜೀವಗಳು ಪ್ರತಿಫಲಿಸಿದವೋ ಅವೆಲ್ಲವೂ ಅವನಿಗೆ ಗುರುವಾದವು… ~ ಸಾ.ಮೈತ್ರೇಯಿ
ವಿವಿಧ ಪುರಾಣಗಳು ಹೇಳುವ ಗಣಪತಿಯ ಜನ್ಮ ಕಥೆ
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ, ವಿಘ್ನೇಶ್ವರನ ಹುಟ್ಟಿನ ಕೆಲವು ಪೌರಾಣಿಕ ಪಾಠಾಂತರಗಳನ್ನು ಚುಟುಕಾಗಿ ಇಲ್ಲಿ ನೀಡಿದ್ದೇವೆ
ಗೌರೀ ಹಬ್ಬ : ಆದಿಶಕ್ತಿಯ ಗುಣಗಾನ
“ಶಿವನು ನಿನ್ನೊಡಗೂಡಿದಾಗ ಮಾತ್ರ ಸೃಷ್ಟಿಕಾರ್ಯ ಸಾಧ್ಯಾವಾದೀತು. ಹೇ ದೇವೀ! ಹಾಗಲ್ಲದಿದ್ದಲ್ಲಿ ಅವನೊಬ್ಬನೇ ಚಲಿಸಲೂ ಸಾಧ್ಯವಾಗಲಾರದು. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾದ ತ್ರಿಮೂರ್ತಿಗಳಿಂದಲೂ ವಂದಿತಳಾದ ನಿನ್ನನ್ನು ಪುಣ್ಯವಂತರಲ್ಲದವರಿಗೆ ವಂದಿಸಲು ಹೇಗೆ ತಾನೆ ಸಾಧ್ಯವಾದೀತು?”
ಕೃಷ್ಣನ ತಲೆನೋವಿಗೆ ಪಾದ ದೂಳಿನ ಮದ್ದು! : ಒಂದು ಪ್ರಕ್ಷೇಪ ಕಥೆ
ದೂತರು ವೃಂದಾವನಕ್ಕೆ ಓಡಿದರು. ಊರಹೊಲದಲ್ಲಿ ನಾಟಿ ಮಾಡುತ್ತಿದ್ದ ಗೋಪಿಕೆಯರಿಗೆ ವಿಷಯ ತಿಳಿಯಿತು. ಕೃಷ್ಣನಿಗೆ ತಲೆನೋವೆಂದು ಗಾಬರಿಯಾದರು. ಪ್ರೀತಿಸುವವರ ಪಾದದೂಳಿಯೇ ಮದ್ದು ಎಂದಾಗ ಸಮಾಧಾನಗೊಂಡರು….
ತನಗೆ ತಾನೆ ಕನ್ನಡಿಯಾಯಿತು ಪರಬ್ರಹ್ಮ! ~ ಯೋಗ ವಾಸಿಷ್ಠ
ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.” ಎನ್ನುತ್ತದೆ ಯೋಗ ವಾಸಿಷ್ಠ. ಈ ಪ್ರತಿಬಿಂಬವೇ ಸೃಷ್ಟಿ ~ ಗಾಯತ್ರಿ
ಪ್ರಶ್ನೆ ಕೇಳುವವರ ಶ್ರದ್ಧೆ ಮತ್ತು ಉತ್ತರ ಬಲ್ಲವರ ವಿನಯ : ಷಟ್ ಪ್ರಶ್ನೋಪನಿಷತ್ತಿನ ಮಹತ್ವದ ಕಾಣ್ಕೆ
ಪಿಪ್ಪಲಾದರನ್ನು ಪ್ರಶ್ನಿಸುವ ಋಷಿಗಳೇನು ಸಾಮಾನ್ಯದವರಲ್ಲ. ಅವರೇನೂ ಅಜ್ಞರಲ್ಲ, ಅಥವಾ ಕಲಿಕಾ ಹಂತದಲ್ಲಿರುವವರಲ್ಲ ಅವರೆಲ್ಲರೂ ವಿವಿಧ ಹಿನ್ನೆಲೆಗಳಿಂದ ಬಂದ ಜಿಜ್ಞಾಸುಗಳು, ಪ್ರಾಜ್ಞರು. ಈ ಋಷಿಗಳು ಹೊತ್ತು ತರುವ ಪ್ರಶ್ನೆಗಳೂ ಏನು ಸಾಮಾನ್ಯದವಲ್ಲ. ಸೃಷ್ಟಿಯಿಂದ ಹಿಡಿದು ಜೀವ ವಿಕಾಸ, ಆತ್ಮತತ್ತ್ವಗಳವರೆಗಿನ ಪ್ರಚಂಡ ಪಶ್ನೆಗಳವು. ಇವಕ್ಕೆಲ್ಲ ಉತ್ತರ ನೀಡುವ ಪಿಪ್ಪಲಾದರ ಜ್ಞಾನವನ್ನೊಮ್ಮೆ ಊಹಿಸಿ! | ಗಾಯತ್ರಿ