ಐನ್’ಸ್ಟೀನ್ ಹೇಳಿದ್ದು : ಅರಳಿಮರ POSTER

ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ ! ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ […]

ಮಕ್ಕಳ ಪರೀಕ್ಷೆ ಎದುರಿಸಲು ಪೋಷಕರಿಗೆ 5 ಸೂತ್ರಗಳು

ಮಕ್ಕಳು ಶಾಲಾ ಪರೀಕ್ಷೆ ಬರೆಯುವಾಗ ಪೋಷಕರು ಅದನ್ನು ಬದುಕಿನ ಪರೀಕ್ಷೆ ಎಂದೇ ಪರಿಗಣಿಸುತ್ತಾರೆ ಮತ್ತು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಅವರ ಆತಂಕ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ, ಪರೀಕ್ಷೆಯ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಹೇಗೆ ಸಹಕಾರಿಯಾಗಿ ವರ್ತಿಸಬಹುದು ಅನ್ನುವುದಕ್ಕೆ 5 ಸರಳ ಸೂತ್ರಗಳು ಇಲ್ಲಿವೆ…  ಕೆಲವು ಶಾಲೆಗಳಲ್ಲಿ ಪರೀಕ್ಷೆಗಳು ಮುಗಿದಿವೆ ಮತ್ತು ಕೆಲವು ಕಡೆ ಈಗಿನ್ನೂ ಶುರುವಾಗಿವೆ. ಅದರಲ್ಲೂ ಇದು ಹತ್ತನೇ ತರಗತಿಯ ಪರೀಕ್ಷೆಗಳ ಕಾಲ. ಶಿಕ್ಷಣದ ಒಂದು […]

ಪರೀಕ್ಷೆ ಪೆಡಂಭೂತವಲ್ಲ : ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ…

ಮಕ್ಕಳ ಪಾಲನೆ ಪೋಷಣೆಗೆ ನಾವು ನೀಡುವುದೆಲ್ಲವೂ ನಮ್ಮ ಜವಾಬ್ದಾರಿಯ ಎಚ್ಚರದಿಂದ ಹೊರತು, ಮಕ್ಕಳ ಮೇಲೆ ನಾವು ಹೂಡಿಕೆ ಮಾಡುತ್ತಿಲ್ಲ. ನಮ್ಮ ಹೂಡಿಕೆಯನ್ನು ಲಾಭ ಸಹಿತ ಮರಳಿಸಲು ಮಕ್ಕಳು ಜೀವಂತ ಬ್ಯಾಂಕ್ ಅಲ್ಲ ಎನ್ನುವ ಸತ್ಯವನ್ನು ಮನವರಿಕೆ ಮಾಡಿಕೊಂಡರೆ ಬಹುಶಃ ನಿರೀಕ್ಷೆಗಳಿಂದ ಮುಕ್ತರಾಗಬಹುದು. ಓದಿನ ಮಕ್ಕಳಿರುವ ಮನೆಯಲ್ಲಿ ಮಾರ್ಚ್, ಏಪ್ರಿಲ್ ತಿಂಗಳುಗಳೆಂದರೆ ಕಾವಿನ ಕಾಲ. ಶಿವ ರಾತ್ರಿ ಕಳೆಯುತ್ತಿದ್ದ ಹಾಗೇ ಬೇಸಿಗೆಯ ಧಗೆ ಮಾತ್ರವಲ್ಲ, ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳ ಬಿಸಿಯೂ ಹೊತ್ತಿಕೊಳ್ಳುತ್ತದೆ. ಹಿಂದೆಲ್ಲ ಮುಂದಿನ ತರಗತಿಗೆ ಹೋಗುವ ರಹದಾರಿ […]