ಐನ್’ಸ್ಟೀನ್ ಹೇಳಿದ್ದು : ಅರಳಿಮರ POSTER

ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ !

Genius2

ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ ಅದು ನಮ್ಮ ಮಿತಿ. ನಮಗೆ ಬೇರೆ ಜ್ಞಾನಗಳ ಕುರಿತು, ಸಾಧನೆಗಳ ಕುರಿತು ತಿಳಿವಳಿಕೆಯೇ ಇರುವುದಿಲ್ಲ. 

ಬಹುತೇಕವಾಗಿ ನಾವು ಮಕ್ಕಳ ವಿಷಯದಲ್ಲಿ ಈ ತಪ್ಪನ್ನು ಮತ್ತೆಮತ್ತೆ ಮಾಡುತ್ತೇವೆ. ಅಂಕ ಗಳಿಕೆಯೊಂದೇ ಸಾಧನೆ ಎಂಬ ನಮ್ಮ ಸೀಮಿತ ತಿಳಿವಳಿಕೆಯೇ ಮಕ್ಕಳ ಯೋಗ್ಯತೆ – ಅಯೋಗ್ಯತೆಗಳನ್ನು ಅಳೆಯುವ ಸಾಧನವಾಗಿ ಬಳಸುತ್ತೇವೆ. ಬೇರೆ ಕ್ಷೇತ್ರಗಳ ಪರಿಚಯವೇ ನಮಗೆ ಇಲ್ಲದೆ ಇರುವುದರಿಂದ ಹೀಗೆ ವರ್ತಿಸುತ್ತೇವೆ. 

ನಮ್ಮ ಈ ನಿಲುವು ಬದಲಾಗದೆ ಹೋದರೆ, ನಮ್ಮದೇ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನಾಳೆ, ಮಕ್ಕಳು ಸ್ವತಂತ್ರ ವ್ಯಕ್ತಿಗಳಾಗಿ ರೂಪುಗೊಂಡಾಗ ಅವರ ನಡತೆಯ ಸರಿತಪ್ಪುಗಳನ್ನು ಪ್ರಭಾವಿಸುವಲ್ಲಿ ಇವು ಕೂಡಾ ಮುಖ್ಯ ಪಾತ್ರ ವಹಿಸುತ್ತವೆ.

ಆದ್ದರಿಂದ, ಎಚ್ಚರವಹಿಸೋಣ. ಯಾರನ್ನೂ …. ವಿಶೇಷವಾಗಿ ಮಕ್ಕಳನ್ನು ನಮ್ಮ ಮಾಪನದಲ್ಲಿ ಅಳೆಯದಿರೋಣ. 

Leave a Reply