ಕಬೀರ ಹೇಳಿದ್ದು ….

ಲೌಕಿಕ ಜಗತ್ತಿನಲ್ಲಿ ಹಣ ಗಳಿಕೆಯನ್ನೇ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಅಥವಾ ಗೆಲುವುಗಳನ್ನು. ಯಾವುದೇ ಕ್ಷೇತ್ರದಲ್ಲಿ ಪಡೆಯುವ ಪದಕಗಳೇ ಸಾಧನೆಗಳಾಗುತ್ತವೆ. ಬಹಳ ಬಾರಿ ಇಂಥಾ ಸಾಧಕರು ನೋಡಲಿಕ್ಕಷ್ಟೇ ದೊಡ್ಡ ಮನುಷ್ಯರು. ಇವರಿಂದ ಸಮಾಜಕ್ಕಾಗಲೀ ತಮ್ಮ ಸುತ್ತಲಿನ ಜನಕ್ಕಾಗಲೀ ಏನೂ ಪ್ರಯೋಜನವಿಲ್ಲ. ಪರರ ಕಷ್ಟಕ್ಕೆ ಇವರು ಮಿಡಿಯುವುದಿಲ್ಲ. ಸಂತೈಸುವುದಿಲ್ಲ. ಹಣದ ಮಾತಿರಲಿ, ಕನಿಷ್ಠ ಕಾಳಜಿಯನ್ನೂ ತೋರುವುದಿಲ್ಲ. ಇಂಥ ‘ಸಾಧಕ’ರಿಂದ ಏನು ತಾನೆ ಪ್ರಯೋಜನ? –  ಇದು ಸಂತ ಕಬೀರರು ಕೇಳುವ ಪ್ರಶ್ನೆ. 

kabeera

Leave a Reply