ತಾವೋ ತಿಳಿವು #8 : ದಾವ್’ನ ಹಾರೈಕೆಗೆ ಪಾತ್ರವಾಗುವುದು

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಕಂಠ ಮಟ್ಟ ಕುಡಿದಿದ್ದನ್ನ
ಕಾರಲೇಬೇಕಾಗುತ್ತದೆ.
ಆಗ ನೀನು ಕುಡಿದದ್ದೂ ವ್ಯರ್ಥ.

ನಾಲಿಗೆ ಹರಿತವಾಗಿಸಿಕೊಂಡರೆ
ಬೇಗ ಮೊಂಡಾಗುತ್ತದೆ.
ಆಗ ನೀನೇ ಮೂಕ.

ಐಶ್ವರ್ಯ ತುಂಬಿ ತುಳುಕೋ ಮನೆಗೆ
ಕನ್ನ ಬಿದ್ದೇ ಬೀಳುತ್ತದೆ.
ಆಗ ನೀನೇ ದರಿದ್ರ.

ಸಂಪತ್ತು, ಅಂತಸ್ತು, ಸೊಕ್ಕು ಎಲ್ಲ
ತಮಗೆ ತಾವೇ ಶತ್ರುಗಳು.
ಎಲ್ಲವನ್ನೂ ಚಿವುಟಿ ಹಾಕುತ್ತವೆ.

ಮಾಡೊದನ್ನೆಲ್ಲ, ಹಿಂದೆ ನಿಂತು ಮಾಡು;
ಆಗ ನೀನು
ದಾವ್ ನ ಹಾರೈಕೆಗೆ ಪಾತ್ರನಾಗುತ್ತೀಯ.

Leave a Reply