ತಾವೋ ತಿಳಿವು #12 : ಹೆಸರು ಗೊತ್ತಿಲ್ಲದ್ದನ್ನು ‘ತಾವೋ’ ಎಂದೆ

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ಭೂಮಿ, ಸ್ವರ್ಗ ಎಲ್ಲ ಆಮೇಲೆ,
ಎಲ್ಲಕ್ಕಿಂತಲೂ ಮೊದಲು
ಏನೂ ‘ಒಂದು’
ಎಲ್ಲವನ್ನು ಕಟ್ಟಿಹಾಕಿದೆ.
ನಿಶಬ್ದ, ನಿರ್ಮಲ, ನಿರಾಕಾರ, ನಿರಂತರ,
ನಿರ್ಗುಣ, ನಿಶ್ಚಲ.

ಒಂದೇ ಸವನೇ
ಒಂದರಿಂದ ಒಂದಕ್ಕೆ
ಸತತವಾಗಿ ಹರಿಯುತ್ತಾ
ಮತ್ತೆ ಮೂಲ ಸೆಲೆಗೆ ಮರಳಿ
ಜಗದ ತಾಯಿ ಎನಿಸಿಕೊಂಡಿದೆ.

ನನಗೆ ಅದರ ಹೆಸರು ಗೊತ್ತಿಲ್ಲ
ಸುಮ್ಮನೇ ‘ತಾವೋ’ ಎಂದೆ.

ತಾವೋ ಅನನ್ಯ.
ಈ ಭೂಮಿ , ಸ್ವರ್ಗ, ಮನುಷ್ಯ
ಎಲ್ಲವೂ ಅನನ್ಯ
ಇವು ನಾಲ್ಕು ಅನನ್ಯ ಶಕ್ತಿಗಳು.

ಮನುಷ್ಯ ಭೂಮಿಯ
ಕಟ್ಟಳೆಗಳನ್ನು ಪಾಲಿಸಿದರೆ
ಭೂಮಿಯ ಗಮನವೆಲ್ಲಾ
ಸ್ವರ್ಗದ ಹಿಂದೆ,
ಸ್ವರ್ಗದಲ್ಲಿ ತಾವೋನ ದರ್ಬಾರು
ಮತ್ತು
ತಾವೋ ತನ್ನೊಳಗೆ ಮಗ್ನ.

Leave a Reply