ತಾವೋ ತಿಳಿವು #17 ~ ಇದು ಜ್ಞಾನ, ಇದು ಶಕ್ತಿ….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ನಿನ್ನ ಬಗ್ಗೆ ಗೊತ್ತಿರುವುದು ಜಾಣತನವಾದರೆ
ನನ್ನ ಬಗ್ಗೆ ಗೊತ್ತಿರುವುದು ಜ್ಞಾನ.

ನಿನ್ನ ಸೋಲಿಸುವುದು ಅಧಿಕಾರವಾದರೆ
ನನ್ನ ನಾ ಗೆಲ್ಲುವುದು ಪರಮ ಶಕ್ತಿ.

ಮುನ್ನುಗ್ಗುವುದು ಹಟ,
ನಿಂತಲ್ಲೇ ನಿರಾಳವಾಗುವುದು ಧೈರ್ಯ

ಇರುವುದು ಸಾಕಷ್ಟು ಎನ್ನುವವ ಶ್ರೀಮಂತ
ಸತ್ತ ಮೇಲೂ ಬಾಳುವವ ಚಿರಂಜೀವಿ.

Leave a Reply