ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ನಿಜದ ಮಾತು
ಸರಾಗವಾಗಿ ಹರಿಯುವುದಿಲ್ಲ,
ಸರಾಗವಾಗಿ ಹರಿಯುವುದು
ನಿಜದ ಮಾತಲ್ಲ.
ತಿಳುವಳಿಕೆಯುಳ್ಳವ
ಸಮರ್ಥನೆ ಮಾಡುತ್ತ ಕುಳಿತುಕೊಳ್ಳುವುದಿಲ್ಲ,
ಸಮರ್ಥನೆಗೆ ಇಳಿಯುವವನಿಗೆ ತಿಳುವಳಿಕೆಯಿಲ್ಲ.
ಸಂತನಿಗೆ ಸ್ವಂತ ಆಸ್ತಿಯಿಲ್ಲ;
ಹೆಗಲು ಕೊಟ್ಟು ಕೊಟ್ಟು ಖುಷಿಯ ಬೆಟ್ಟ ಕಟ್ಟಿದ್ದಾನೆ,
ಇರುವುದೆಲ್ಲವ ಹಂಚಿ ಹಂಚಿ ಶ್ರೀಮಂತನಾಗಿದ್ದಾನೆ.
ತಾವೋ ತುತ್ತಿನಲಿ ಒತ್ತಾಯವಿಲ್ಲ
ಅಂತೆಯೇ ಸಂತ, ಹಿಂದೆ ನಿಂತು ಮುಂದುಗಾಣಿಸುತ್ತಾನೆ