ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ದೊಡ್ಡ ದೇಶವನ್ನು ಆಳುವುದು
ಸಣ್ಣ ಮೀನನ್ನು ಹುರಿದಷ್ಟೆ
ನಾಜೂಕಿನ ಕೆಲಸ.
ದಾವ್ ನ ಹಾದಿಯಲ್ಲಿ ನಡೆಯುವ
ಜೈಲರ್ ಇದ್ದರೆ
ಅತೃಪ್ತ ಆತ್ಮಗಳು ಬಾಲ ಬಿಚ್ಚುವುದಿಲ್ಲ.
ಅವುಗಳ ಅಶರೀರ ತಾಕತ್ತು
ನಾಶವಾಗುವುದಿಲ್ಲವಾದರೂ, ಅವು
ಸಾಮಾನ್ಯರಿಗೆ ಕಾಟ ಕೊಡುವುದಿಲ್ಲ.
ಆಗ ಪವಿತ್ರ ಆತ್ಮಗಳಿಗೂ
ಮೆರೆಯುವ ಅವಕಾಶ ಇರುವುದಿಲ್ಲ.
ಯಾವಾಗ ಹೀಗಾಗುತ್ತದೋ
ಆವಾಗ ಮೌಲ್ಯ ತನ್ನ ಪಟ್ಟ
ಬಿಟ್ಟು ಕೊಡಲೇ ಬೇಕಾಗುತ್ತದೆ.
ಅದೇ ದಾವ್ ನ ಆಶಯ.