ತಾವೋ ತಿಳಿವು #30 ~ ತಾವೋ ಜಾಲದ ಹೆಣಿಗೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಧೈರ್ಯ ಮತ್ತು ಹುಂಬತನ ಸಾವಿನೆಡೆ ಕರೆದೊಯ್ದರೆ
ಧೈರ್ಯ ಮತ್ತು ಎಚ್ಚರಿಕೆ ಬಾಳಿನೆಡೆಗೆ.
ಯಾವುದು ಸರಿ? ಯಾವುದು ತಪ್ಪು?
ಸಂತನಿಗೂ ಬಗೆಹರಿಯದ ಬೆರಗು.

ತಾವೋ,
ಸ್ಪರ್ಧಿಸದಿದ್ದರೂ ಎಲ್ಲಕ್ಕಿಂತ ಮುಂದೆ,
ಮಾತಿಲ್ಲದಿದ್ದರೂ ಕರಾರುವಾಕ್ ಆದ ಉತ್ತರ,
ಆಹ್ವಾನವಿಲ್ಲದಿದ್ದರೂ ಖಚಿತ ಹಾಜರಿ,
ಲೆಕ್ಕಾಚಾರವಿಲ್ಲದೆ ಸಾಧಿಸುವುದು.
ಅಂತೆಯೇ ತಾವೋ ನೆಲೆ ಸಮಾಧಾನದಲ್ಲಿ.

ತಾವೋ ಜಾಲ
ಇಡೀ ಬ್ರಹ್ಮಾಂಡವನ್ನು ಆವರಿಸಿದೆ.
ಜಾಲದ ಹೆಣಿಗೆ ಸಾಕಷ್ಟು ವಿಶಾಲವಾಗಿದ್ದರೂ
ಯಾವುದೂ ನುಣುಚಿಕೊಳ್ಳುವ ಸಾಧ್ಯತೆಯೇ ಇಲ್ಲ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

3 Responses

Leave a Reply