PANIC ಪದದ ಹುಟ್ಟಿಗೆ ಕಾರಣನಾದ ಹರ್ಮೀಸನ ಮಗ ಪ್ಯಾನ್ : ಗ್ರೀಕ್ ಪುರಾಣ ಕಥೆಗಳು ~ 12

ಪ್ಯಾನ್ ವಿಪರೀತ ತುಂಟತನ ಬೆಳೆಸಿಕೊಳ್ಳುವುದಕ್ಕೆ ಕಾರಣವೂ ಇತ್ತು . ಅವನ ದೇಹ ವಿಚಿತ್ರವಾಗಿದ್ದುದೇ ಅದಕ್ಕೆ ಕಾರಣ…

pan

ಪ್ಯಾನ್, ಸ್ಯೂಸ್ ಮಹಾದೇವನ ಮಗನಾದ ಹರ್ಮೀಸನ ಮಗ. ವಿಪರೀತ ತುಂಟನಾಗಿದ್ದ ಈತನನ್ನು ಸ್ಯೂಸ್ ದೇವತೆ ಕುರಿಹಿಂಡುಗಳ ದೇವತೆಯಾಗಿ ನೇಮಿಸಿದ್ದ. ಇದರ ಜೊತೆಗೆ ಕಾಡು, ಹುಲ್ಲುಗಾವಲು, ದ್ರಾಕ್ಷಿ ಬಳ್ಳಿಗಳು ಮತ್ತು ಆಲಿವ್ ಮರಗಳ ಪಾಲನೆ ಪೋಷಣೆಯನ್ನೂ, ರಕ್ಷಣೆಯನ್ನೂ ಇವನೇ ಮಾಡಬೇಕಿತ್ತು.

ಪ್ಯಾನ್ ವಿಪರೀತ ತುಂಟತನ ಬೆಳೆಸಿಕೊಳ್ಳುವುದಕ್ಕೆ ಕಾರಣವೂ ಇತ್ತು . ಅವನ ದೇಹ ವಿಚಿತ್ರವಾಗಿದ್ದುದೇ ಅದಕ್ಕೆ ಕಾರಣ. ಪ್ಯಾನ್ ತಲೆ ಮೇಲೆ ಮೇಕೆಗಳಿಗೆ ಇರುವಂತೆ ಕೊಂಬುಗಳಿದ್ದವು. ಅವನ ಕಿವಿಗಳೂ ಕಾಲುಗಳೂ ಮೇಕೆಯಂತೆಯೇ ಇದ್ದವು. ಮನುಷ್ಯರ ಹಾಗೆ ಮುಖವಿದ್ದರೂ ಅದಕ್ಕೆ ಹೋತದ ಗಡ್ಡವಿತ್ತು. ಅವನ ಈ ರೂಪವನ್ನು ಕಂಡು ದೇವತೆಗಳೆಲ್ಲ ಹಾಸ್ಯ ಮಾಡಿ ನಗುತ್ತಿದ್ದರು. ಇದರಿಂದ ಬೇಸರಗೊಂಡು ಮೂಲೆಯಲ್ಲಿ ಕೂರುವ ಬದಲು ಪ್ಯಾನ್, ಸ್ವತಃ ತಾನೇ ಅವರೆಲ್ಲರನ್ನು ಹಾಸ್ಯ ಮಾಡಿ ನಗುತ್ತಿದ್ದ. ದೇವತೆಗಳು, ಅಪ್ಸರೆಯರ ಮುಂದೆ ಧುತ್ತನೆ ಹಾಜರಾಗಿ ಅವರನ್ನು ಗಾಬರಿಬೀಳಿಸುತ್ತಿದ್ದ. ಸುಂದರಿಯರ ಬೆನ್ನಟ್ಟಿ ಹೋಗಿ ಅವರನ್ನು ತಬ್ಬಿಬ್ಬುಗೊಳಿಸುತ್ತಿದ್ದ.

ಪ್ಯಾನನ ಚೇಷ್ಟೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಹೀಗೆ ಗಾಬರಿಗೊಳಿಸುವ ಪ್ರಕ್ರಿಯೆಯನ್ನು ಪ್ಯಾನನ ವರಸೆ ಎಂದೇ ದೇವತೆಗಳು ಕರೆಯತೊಡಗಿದರು. ಮುಂದೆ ಅದು ‘ಪ್ಯಾನಿಕ್’ (Panic) ಎಂದೇ ಪ್ರಚುರಗೊಂಡಿತು.

Leave a Reply