ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ನನ್ನ ಮಾತು ತುಂಬಾ ಸರಳ
ತಿಳಿಯಲು ಮತ್ತು ಬಳಸಲು ಕೂಡ.
ಆದರೂ ಜನ ಹಿಂಜರಿಯುತ್ತಾರೆ.
ನನ್ನ ಮಾತು, ಪೂರ್ವಜರಿಂದ
ಕೃತಿ, ಸಾಧನೆಯಿಂದ, ಸಿದ್ಧಿಯಿಂದ.
ಇವುಗಳ ಅನುಪಸ್ಥಿತಿ ಎಂದರೆ
ನನ್ನ ಗೈರು ಹಾಜರಿ ಕೂಡ.
ಅನಾಮಧೇಯತೆಯೇ
ನನ್ನ ವಿಳಾಸ.
ಹೃದಯದ ಮಾತು
ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ನನ್ನ ಮಾತು ತುಂಬಾ ಸರಳ
ತಿಳಿಯಲು ಮತ್ತು ಬಳಸಲು ಕೂಡ.
ಆದರೂ ಜನ ಹಿಂಜರಿಯುತ್ತಾರೆ.
ನನ್ನ ಮಾತು, ಪೂರ್ವಜರಿಂದ
ಕೃತಿ, ಸಾಧನೆಯಿಂದ, ಸಿದ್ಧಿಯಿಂದ.
ಇವುಗಳ ಅನುಪಸ್ಥಿತಿ ಎಂದರೆ
ನನ್ನ ಗೈರು ಹಾಜರಿ ಕೂಡ.
ಅನಾಮಧೇಯತೆಯೇ
ನನ್ನ ವಿಳಾಸ.