ತಾವೋ ತಿಳಿವು #33 ~ ಇಲ್ಲಿ ಸಿದ್ಧಿ ಅಸಾಧ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao4

ತಾವೋ ಬ್ರಹ್ಮಾಂಡದ ಚುಕ್ಕಾಣಿ,
ಒಳಿತಿಗಾಗಿ ಕಾಯುತ್ತಿರುವ ನಿಧಿ,
ಕೆಡಕು ಶರಣಾಗುವ ಜಾಗ.

ಸಿಹಿ ಮಾತುಗಳಿಂದ ಮನ್ನಣೆ
ಸತ್ಕಾರ್ಯಗಳಿಂದ ಸ್ಥಾನ ಮಾನ ಸಾಧ್ಯ.
ಆದರೆ, ತಾವೋಗೆ ಮೌಲ್ಯಗಳ ಹಂಗಿಲ್ಲ;
ಅಂತೆಯೇ ಇಲ್ಲಿ ಸಿದ್ಧಿ ಅಸಾಧ್ಯ.

ಹೊಸ ನಾಯಕ ಕಾಣಿಸಿಕೊಂಡಾಗ
ಅವನಿಗೆ ಸಂಪತ್ತು, ಅನುಭವ ಧಾರೆಯೆರೆಯದಿರಿ.
ಬದಲಾಗಿ, ತಾವೋ ಕಾಣಿಸಿ.

ಸಂತರಿಗೆ
ತಾವೋ ಯಾಕೆ ಆಪ್ಯಾಯಮಾನ?
ಯಾಕೆಂದರೆ ಅವರು
ಹುಡುಕಿದ್ದನ್ನು ಕಂಡುಕೊಳ್ಳುತ್ತಾರೆ,
ಎಡವಿದಾಗ ಸಂತೈಸಲ್ಪಡುತ್ತಾರೆ,
ಹಾಗೆಂದೇ ತಾವೋ ಎಂದರೆ ಅಕ್ಕರೆ.

Leave a Reply