ತಾವೋ ತಿಳಿವು #34 ~ ಯಾರೊಂದಿಗೂ ಸ್ಪರ್ಧೆಯಿಲ್ಲ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao3

ಲ್ಲ ಧಾರೆಗಳೂ
ಸಮುದ್ರದತ್ತ ಹರಿಯುತ್ತವೆ.
ಏಕೆಂದರೆ ಸಮುದ್ರ , ಕೆಳಗೆ ನಿಂತು ಕರೆಯುತ್ತದೆ.
ಈ ವಿನಯವೇ ಸಮುದ್ರದ ಶಕ್ತಿ.

ಜನರನ್ನು ಆಳಬೇಕೆನ್ನುವವರು
ಅವರಿಗಿಂತ ಎರಡು ಹೆಜ್ಜೆ ಕೆಳಗೆ ನಿಲ್ಲಿ.
ಜನರನ್ನು ಮುನ್ನಡೆಸಬೇಕೆನ್ನುವವರು
ಅವರಿಗಿಂತ ಎರಡು ಹೆಜ್ಜೆ ಹಿಂದೆ ನಡೆಯಿರಿ.

ತಾವೋ,
ಮೇಲೆ ನಿಂತು ಮಾತಾಡುವಾಗಲೂ
ಜನರಿಗೆ ಕೀಳರಿಮೆ ಕಾಡುವುದಿಲ್ಲ;
ಮುಂದೆ ನಡೆಯುತ್ತಾ ಮುನ್ನಡೆಸುವಾಗಲೂ
ಹಾದಿ ತಪ್ಪುವ ಭಯವಿರುವುದಿಲ್ಲ.

ತಾವೋಗೆ ಯಾರೊಂದಿಗೂ ಸ್ಪರ್ಧೆಯಿಲ್ಲ
ಅಂತಯೇ ತಾವೋ ಜೊತೆ ಸ್ಪರ್ಧೆ ಅಸಾಧ್ಯ.

Leave a Reply