ವಾಸ್ತವದಲ್ಲಿ ಸುಖ ಸಂತೋಷಗಳು ನಮ್ಮ ಸಹಜ ಸ್ವಭಾವವೇ ಆಗಿವೆ. ಅದು ನಮ್ಮ ಆತ್ಮವೇ ಆಗಿದೆ. ಅದನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ, ಕಾರಣ ಅದು ಅವರ ಸ್ವಭಾವ. ಅದು ಅವರ ಆಜನ್ಮಹಕ್ಕು. ಅದನ್ನು ಅವರು ಕಾಣದೇ ಇರಲು ಕಾರಣ, ಅವರು ಯಾವಾಗಲೂ ತಮ್ಮಿಂದ ಹೊರಗೆ ಅದನ್ನು ಹುಡುಕುವುದೇ ಆಗಿದೆ.
ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ. ಬ್ರಹ್ಮಜ್ಞಾನ ಪಡೆಯುವುದರಿಂದ ಸುಖ ಸಂತೋಷಗಳು ಸಿಗುತ್ತವೆ ಎಂದು ನೀವು ಭಾವಿಸುತ್ತೀರಿ. ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ ಹತ್ತು ಜನ ಪೆದ್ದರು ನದಿ ದಾಟಿದಂತಿದೆ.
ಹತ್ತು ಜನ ಪೆದ್ದರು ಒಮ್ಮೆ ಎಲ್ಲಿಗೋ ಹೊರಟಿದ್ದರು. ದಾರಿಯಲ್ಲಿ ಅವರಿಗೊಂದು ನದಿ ಎದುರಾಯಿತು. ಎಲ್ಲರೂ ಈಜಿ ಆಚೆ ದಡವನ್ನು ಸೇರಿದರು. ದಡ ಸೇರಿದ ನಂತರ ಎಲ್ಲರೂ ಬಂದು ತಲುಪಿದ್ದಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕೆಂದು ತಂಡದ ನಾಯಕನು ಎಲ್ಲರ ತಲೆಯನ್ನು ಎಣಿಸಿದ. ಒಂಬತ್ತು ಜನ ಮಾತ್ರ ಲೆಕ್ಕಕ್ಕೆ ಸಿಕ್ಕಿದರು. ಪುನಃ ಎಣಿಸಿದ, ಆಗಲು ಅಷ್ಟೇ! ಮತ್ತೊಬ್ಬನನ್ನು ಕರೆದು ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಣಿಸಲು ಹೇಳಿದ. ಆಗಲೂ ಒಂಬತ್ತು ಜನರೇ! ನಾಯಕನಿಗೆ ಗಾಬರಿಯಾಯ್ತು. ಏನೂ ತೋಚದೆ ಎಲ್ಲರು ಅಳಲು ಪ್ರಾರಂಭಿಸಿದರು. ಇವರ ಅಳುವನ್ನು ಕೇಳಿ ದಾರಿಯಲ್ಲಿ ಬರುತ್ತಿದ್ದ ದಾರಿಹೋಕ ಏನೆಂದು ವಿಚಾರಿಸಿದ. ಪೆದ್ದರ ನಾಯಕ ಎಲ್ಲವನ್ನು ವಿಸ್ತಾರವಾಗಿ ವಿವರಿಸಿದ. ದಾರಿಹೋಕ ಸುಮ್ಮನೆ ಎಣಿಸಿನೋಡುವಾಗ ಸರಿಯಾಗಿ ಹತ್ತು ಜನರಿದ್ದರು. ಆಗ ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಲ್ಲರ ಬೆನ್ನು ಮೇಲೆ ಒಂದೊಂದು ಪೆಟ್ಟು ಕೊಡುತ್ತ ಎಣಿಸಿದ. ಎಲ್ಲರು ಸೇರಿ ಹತ್ತು ಜನರಾದರೆಂದು ತಿಳಿದಮೇಲೆ ಪೆದ್ದರಿಗೆ ಸಮಾಧಾನವಾಯಿತು. ಅವರು ದಾರಿಹೋಕನನ್ನು ಕೊಂಡಾಡಿದರು.
ನಿಮ್ಮಗ್ರಹಿಕೆಯೂ ಹೀಗೆಯೇ ಇದೆ.
ವಾಸ್ತವದಲ್ಲಿ ಸುಖ ಸಂತೋಷಗಳು ನಮ್ಮ ಸಹಜ ಸ್ವಭಾವವೇ ಆಗಿವೆ. ಅದು ನಮ್ಮ ಆತ್ಮವೇ ಆಗಿದೆ. ಅದನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ, ಕಾರಣ ಅದು ಅವರ ಸ್ವಭಾವ. ಅದು ಅವರ ಆಜನ್ಮಹಕ್ಕು. ಅದನ್ನು ಅವರು ಕಾಣದೇ ಇರಲು ಕಾರಣ, ಅವರು ಯಾವಾಗಲೂ ತಮ್ಮಿಂದ ಹೊರಗೆ ಅದನ್ನು ಹುಡುಕುವುದೇ ಆಗಿದೆ. ಯಾವುದೇ ಸಂದರ್ಭಗಳಲ್ಲೂ ಎಂದಿಗೂ ಇರುವ ಮತ್ತು ಸದಾ ಪೂರ್ಣವಾಗಿರುವ ಸುಖವನ್ನು ಕಂಡುಕೊಳ್ಳಬೇಕಾದರೆ ಮೊದಲು ನಾವು ನಮ್ಮ ಸ್ವರೂಪವನ್ನು ಕಂಡುಕೊಳ್ಳಬೇಕು. ಅದನ್ನು ಅರಿತುಕೊಳ್ಳಬೇಕು. ಇದೇ ಬ್ರಹ್ಮಜ್ಞಾನ ಅಥವಾ ಮುಕ್ತಿ.
ಬಹಳ ಸುಂದರ ಕಥೆ ಮತ್ತು ವಿಶ್ಲೇಷಣೆ..!