ಎರಡು Zen ಹನಿಗಳು

ನಿನಗೆ ಹೇಗೆ ಗೊತ್ತು!?
ಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯ ಪಕ್ಕದಲ್ಲಿ ನಡೆಯುತ್ತಿದ್ದರು. `ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿದೆ’ ಅಂದ ಚಾಂಗ್ ತ್ಸು.
`ನೀನು ಮೀನಲ್ಲ. ಆದ್ದರಿಂದ ಅವು ಖುಷಿಯಾಗಿವೆಯೋ ಇಲ್ಲವೋ ನಿನಗೆ ಗೊತ್ತಾಗುವುದು ಸಾಧ್ಯವಿಲ್ಲ’ ಅಂದ ಗೆಳೆಯ.
ಚಾಂಗ್ ತ್ಸುವಿನ ಉತ್ತರ : `ನೀನು ನಾನಲ್ಲ, ಮೀನು ಖುಷಿಯಾಗಿದೆ ಅನ್ನುವುದು ನನಗೆ ಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು!?’ 

ಜ್ಞಾನೋದಯ
ಶಿಷ್ಯನೊಬ್ಬ ಗುರುವನ್ನು ಕೇಳಿದ: `ಗುರುವೇ, ಜ್ಞಾನೋದಯ ಎಂದರೆ ಏನು?’
ಗುರು ಹೇಳಿದ: `ಹಸಿವಾದಾಗ ಉಣ್ಣುವುದು, ಬಾಯಾರಿದಾಗ ನೀರು ಕುಡಿಯುವುದು, ನಿದ್ರೆ ಬಂದಾಗ ಮಲಗುವುದು’
ಶಿಷ್ಯ : ಅಷ್ಟೇ!?
ಗುರು : ಅಷ್ಟೇ ಅಲ್ಲ, ಅದು ಜ್ಞಾನೋದಯ!

2 Comments

Leave a Reply