ತಾವೋ ತಿಳಿವು #40 ~ ಕರಾರಿಗೆ ಸಹಿ ಮಾಡಿದ ಮೇಲೆ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಒಂದು ಕಹಿ ಜಗಳ
ಯಶಸ್ವಿ ಸಂಧಾನದಲ್ಲಿ ಮುಕ್ತಾಯವಾದರೂ
ಮನಸಿನ ಯಾವದೋ ಮೂಲೆಯಲ್ಲಿ
ಒಂದಿಷ್ಟು ಅಸಹನೆ
ಹಾಗೇ ಉಳಿದುಕೊಂಡು ಬಿಡುತ್ತದೆ .

ಹೀಗಾಗಬಾರದು,
ಸಮಾಧಾನ ನಿಜದಲ್ಲಿ ಮನೆ ಮಾಡಬೇಕೆಂದು,

ಸಂತರು ತಮ್ಮ ಪಾಲಿನ ಕರಾರನ್ನು
ಚಾಚೂ ತಪ್ಪದೇ ಪಾಲಿಸುತ್ತಾರೆ
ಎಲ್ಲ ಬೇಡಿಕೆಗಳನ್ನೂ ಪೂರೈಸುತ್ತಾರೆ
ಯಾವ ಹಕ್ಕೊತ್ತಾಯವನ್ನೂ ಮಂಡಿಸುವುದಿಲ್ಲ.

ಆದರೆ ದುರ್ಬಲರು ಮಾತ್ರ
ತಕರಾರು ಮಾಡುತ್ತಲೇ ಇರುತ್ತಾರೆ.

ಸಂತರು
ಕರಾರಿಗೆ ಸಹಿ ಮಾಡಿದ ಮೇಲೆ
ಅದನ್ನು ಹರಿದೊಗೆದು ಬಿಡುತ್ತಾರೆ.

Leave a Reply