ಹೇಳಲಾಗದ್ದನ್ನು ಮಹಾಕಸ್ಸಪನಿಗೆ ಕೊಟ್ಟೆ…

buddha

ಮ್ಮೆ ಬುದ್ಧ ಕೊಳದ ಬಳಿ ಬರುತ್ತಾನೆ, ಜೊತೆಗೆ ಅವನ ಶಿಷ್ಯ ಸಾಗರ.

ಅವತ್ತು ಬುದ್ಧ ಏನೂ ಮಾತಾಡುವುದಿಲ್ಲ. ಒಂದು ಕಮಲವನ್ನು ತೆಗೆದುಕೊಂಡು, ಅದರ ದಂಟನ್ನು ಹಿಡಿದು ಪ್ರತಿಯೊಬ್ಬ ಶಿಷ್ಯನ ಮುಂದೆ ಹಿಡಿಯುತ್ತಾನೆ.

ಶಿಷ್ಯರು ತಮತಮಗೆ ತೋಚಿದ ಅರ್ಥವನ್ನು ತಮ್ಮೆಲ್ಲ ತಿಳಿವು ಬಸಿದು ವಿವರಿಸತೊಡಗುತ್ತಾರೆ. ಒಬ್ಬೊಬ್ಬರೂ ಒಂದೊಂದು ವ್ಯಾಖ್ಯಾನ ನೀಡುತ್ತಾರೆ.

ಕೊನೆಗೆ ಬುದ್ಧ ಮಹಾಕಸ್ಸಪನ ಬಳಿ ಬರುತ್ತಾನೆ. ಕಮಲವನ್ನು ನೋಡಿದ ಕೂಡಲೆ ಮಹಾಕಸ್ಸಪ ಜೋರಾಗಿ ನಗತೊಡಗುತ್ತಾನೆ. ಅದನ್ನು ನೋಡಿ ಬುದ್ಧ ಮುಗುಳ್ನಗುತ್ತಾನೆ.
ಮತ್ತು ಶಿಷ್ಯರ ಕಡೆ ತಿರುಗಿ, “ಏನನ್ನು ಹೇಳಬಹುದೋ ಅದನ್ನು ನಾನು ನಿಮಗೆಲ್ಲರಿಗೆ ಹೇಳಿದ್ದೇನೆ. ಏನನ್ನು ಹೇಳಲಾಗದೋ ಅದನ್ನು ಮಹಾಕಸ್ಸಪನಿಗೆ ನೀಡಿದ್ದೇನೆ” ಅನ್ನುತ್ತಾನೆ.

Leave a Reply