ಬಾಬಾ ಫರೀದ್ ಉರ್ಫ್ ಬಾಬಾ ಶೇಖ್ ಫರೀದ್ ಉರ್ಫ್ ಖ್ವಾಜಿ ಫರೀದುದ್ದೀನ್ ಮಸೂದ್ ಗಂಜ್’ಶಕರ್.
ಇವರು12ನೇ ಶತಮಾನದಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ ಜೀವಿಸಿದ್ದ ಸೂಫಿ ಸಂತ. ಪಂಜಾಬಿ ಸಾಹಿತ್ಯದ ಮೊದಲ ಕವಿ ಅನ್ನುವ ಮನ್ನಣೆಯೂ ಫರೀದ್’ಗೆ ಇದೆ.
ಸೂಫೀ ಚಿಂತನೆಗಳ ಪ್ರಚಾರಕ್ಕಾಗಿಯೇ ಫರೀದ್ ಪಾಕ್ ಪಟ್ಟಣವೆಂಬ ಊರು ಕಟ್ಟಿದ್ದ. ಅದೊಂದು ಸೂಫಿಸಮ್’ನ ವಿಶ್ವವಿದ್ಯಾನಿಲಯದಂತೆ ರೂಪುಗೊಂಡಿತ್ತು.
ಬಾಬಾ ಫರೀದನ ಅನುಯಾಯಿಗಳು ಮುಂದೆ ‘ಚಿಶ್ತಿ’ಗಳೆಂದು ಹೆಸರಾದರು. ಸೂಫೀ ಪರಂಪರೆಯಲ್ಲಿ ಚಿಶ್ತಿಗಳದು ಬಹು ಮಹತ್ವದ ಹೆಸರು.
ಬಾಬಾ ಫರೀದರ ಒಂದು ರಚನೆ
ಸತ್ತಂತಿರಬೇಡ, ಮೈಮರೆಯಬೇಡ.
ಎಚ್ಚರದಲ್ಲಿಯೂ ಇರಬೇಕಾದುದಿಲ್ಲ,
ಏನನ್ನೂ ಮಾಡಬೇಕಾದುದಿಲ್ಲ;
ನೀನೇನು ಉತ್ಕಟವಾಗಿ ಬಯಸ್ತಿದ್ದೀಯಲ್ಲ,
ಯಾವುದನ್ನೋ ಹುಡುಕ್ತಾ ಅಲೀತಿದ್ದೀಯಲ್ಲ,
ಪ್ರೇಮದಲ್ಲಿ ತಮ್ಮಿರುವ ಕಳೆಕೊಂಡ ಪ್ರೇಮಿಗಳ ಹಾಗೆ!
ಹಾಗೇ ನಿನ್ನನ್ನ ನೀನು ಕಳೆದುಕೋ.
ಫರೀದ್,
ಆಗ ತಿಳಿಯುತ್ತೆ,
ಆ ಬಯಕೆ ನೀನೇ ಆಗಿದ್ದೀಯೆಂದು…
ಆ ಹುಡುಕಾಟ ನೀನೇ ಆಗಿದ್ದೀಯೆಂದು.
ಸೂಫಿ ತತ್ವ ಅತ್ಯುತ್ತಮವಾಗಿವೆ.