ಜ್ಞಾನವನ್ನು ಪಡೆದವರು ಅದನ್ನು ಹಂಚಬೇಕು : ಧ್ಯಾನಗೈಯುವರಾರು? #ಭಾಗ1

photoನಮ್ಮ ದೇಶದಲ್ಲೇ ನೂರಿಪ್ಪತ್ತು ಜನರಿಗೆ ಜ್ಞಾನ ಪ್ರಾಪ್ತಿ ಆದಂತಾಯ್ತು! ಆದರೆ ಈ ನೂರಿಪ್ಪತ್ತರಲ್ಲಿ ಇಪ್ಪತ್ತು ಜನರಾದರೂ ಧ್ಯಾನದ ವಿಷಯ ಮಾತಾಡಲಾರರು ಎಂದಾದರೆ, ಅದರ ಬಗ್ಗೆ ತಿಳಿಹೇಳಲಾರರು ಎಂದಾದರೆ ಏನು ಪ್ರಯೋಜನ? ತಾವು ಏನನ್ನು ಅರಿತುಕೊಂಡಿದ್ದಾರೋ ಅದನ್ನು ಮತ್ತಷ್ಟು ಜನರು ಅನುಸರಿಸುವಂತೆ ಪ್ರೇರೇಪಣೆ ನೀಡದೆ ಉಳಿದರೆ ಏನುಪಯೋಗವಾದಂತಾಯ್ತು!? ~ Whosoever Ji 

ಧ್ಯಾನ ಮಾಡುವುದೆಂದರೆ ನಮ್ಮ ಜೊತೆ ನಾವಿರುವುದು. ನಾವೇ ನಾವಾಗುವುದು. ಮಿಕ್ಕೆಲ್ಲವೂ ಅದರಲ್ಲೇ ಒಳಗೊಳ್ಳುತ್ತದೆ. ಈಗ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ. ಧ್ಯಾನ ಯಾರು ಮಾಡುತ್ತಾರೆ? ಮತ್ತು ಧ್ಯಾನ ಯಾರನ್ನು ಕುರಿತು ಮಾಡುತ್ತೇವೆ? ಧ್ಯಾನವನ್ನು ಯಾಕಾಗಿ ಮಾಡುತ್ತೇವೆ? ಇದಕ್ಕೆ ಉತ್ತರವಿರುವುದಿಲ್ಲ. ಧ್ಯಾನ ತನ್ನಿಂತಾನೆ ಯಾಂತ್ರಿಕವಾಗಿ ನಡೆಯುತ್ತದೆ. ಧ್ಯಾನದ ಜತೆಜತೆಗೆ ಧ್ಯಾನದ ಅರಿವು ಕೂಡ ಬೆಳೆಯಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.

ಒಬ್ಬ ವ್ಯಕ್ತಿ ಭಾರತದಲ್ಲಿ ವಾಸಿಸ್ತಾ ಇದ್ದಾನೆ ಆದರೆ ಅವನು ಭಾರತದ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಅವನು ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದಾನೆ ಅನ್ನುವುದರಿಂದ ಅಂಥಾ ವ್ಯತ್ಯಾಸವೇನೂ ಆಗೋದಿಲ್ಲ. ಆದರೆ, ಹೆಚ್ಚು ತಿಳಿದುಕೊಂಡಿದ್ದರೆ ಹೆಚ್ಚು ಒಳ್ಳೆಯದಷ್ಟೆ. ನೀವೆಲ್ಲಿ ಇರುತ್ತೀರೋ ಆ ಜಾಗದ ಬಗ್ಗೆ ತಿಳಿದುಕೊಂಡಿದ್ದರೆ ಒಳ್ಳೆಯದು. ಇದರಿಂದ ನೀವು ಆ ಜಾಗದ ಬಗ್ಗೆ ಹೇಳಲಿಕ್ಕೂ ಸಾಧ್ಯವಾಗುತ್ತದೆ, ತಿಳಿಸಿಕೊಡಲಿಕ್ಕೂ ಸಾಧ್ಯವಾಗುತ್ತದೆ. ಆದರಿಂದ ಮತ್ತಷ್ಟು ಒಳ್ಳೆಯದಾಗುತ್ತದೆ.
ಧ್ಯಾನ ಮಾಡುತ್ತೀರಿ, ಒಳ್ಳೆಯದು. ಧ್ಯಾನದ ಬಗ್ಗೆ ಅರಿತು ಮಾಡಿದರೆ ಮತ್ತಷ್ಟು ಒಳ್ಳೆಯದು. ಏಕೆಂದರೆ ಆಗ ನೀವು ಧ್ಯಾನದ ಬಗ್ಗೆ ಮಾತಾಡಬಲ್ಲಿರಿ. ತಿಳಿಸಿಕೊಡಬಲ್ಲಿರಿ, ಇದರಿಂದ ಮತ್ತಷ್ಟು ಒಳ್ಳೆಯದಾಗುತ್ತದೆ. ಹೀಗಾಗುವುದರಿಂದ ಒಂದು ತೂಕ ಮತ್ತಷ್ಟು ಹೆಚ್ಚುತ್ತದೆ.

ಎಲ್ಲೋ ಕೆಲವರಿಗಷ್ಟೆ ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನಬಹುದಾದರೂ ಆ ಕೆಲವರೇ ಸಾಕಷ್ಟಾಯಿತು! ಈಗ, ಕೋಟಿಯಲ್ಲಿ ಯಾರೋ ಒಬ್ಬರಿಗೆ ಅದು ಲಭ್ಯವಾಗುತ್ತದೆ ಎಂದಾದರೆ, ನಮ್ಮ ದೇಶದಲ್ಲಿ ನೂರು ಕೋಟಿ ಜನರಿದ್ದೀವಿ, ನೂರು ಜನರಿಗಂತೂ ಆದಂತಾಯಿತು… ಈಗಂತೂ ನಾವು ನೂರಿಪ್ಪತ್ತು ಕೋಟಿ ಇದ್ದೀವಿ…. ಅಂದರೆ ನಮ್ಮ ದೇಶದಲ್ಲೇ ನೂರಿಪ್ಪತ್ತು ಜನರಿಗೆ ಜ್ಞಾನ ಪ್ರಾಪ್ತಿ ಆದಂತಾಯ್ತು! ಆದರೆ ಈ ನೂರಿಪ್ಪತ್ತರಲ್ಲಿ ಇಪ್ಪತ್ತು ಜನರಾದರೂ ಧ್ಯಾನದ ವಿಷಯ ಮಾತಾಡಲಾರರು ಎಂದಾದರೆ, ಅದರ ಬಗ್ಗೆ ತಿಳಿಹೇಳಲಾರರು ಎಂದಾದರೆ ಏನು ಪ್ರಯೋಜನ? ತಾವು ಏನನ್ನು ಅರಿತುಕೊಂಡಿದ್ದಾರೋ ಅದನ್ನು ಮತ್ತಷ್ಟು ಜನರು ಅನುಸರಿಸುವಂತೆ ಪ್ರೇರೇಪಣೆ ನೀಡದೆ ಉಳಿದರೆ ಏನುಪಯೋಗವಾದಂತಾಯ್ತು!?

ಜ್ಞಾನವನ್ನು ಪಡೆದವರು ಅದನ್ನು ಮತ್ತಷ್ಟು ಜನಕ್ಕೆ ಹಂಚುವಂತಾಗಬೇಕು. ಕೆಲವರಾದರೂ ಅದನ್ನು ಪಡೆದುಕೊಳ್ಳುವವರು ಇರುತ್ತಾರೆ. ಏಕೆಂದರೆ ಇದು ಹೊರಗಿನ ಯಾವುದೋ ಸಂಗತಿಯಲ್ಲ. ನಮ್ಮೊಳಗೇ ಇರುವುದನ್ನು ಅರಿಯುವ ಪ್ರಕ್ರಿಯೆಯಷ್ಟೆ. ಈ ಪ್ರಕ್ರಿಯೆಗೆ ದಿಕ್ಸೂಚಿಯಾಗಬೇಕು. ಮತ್ತಷ್ಟು ಜನ ತಾವು ಅನುಸರಿಸಿದ ಹಾದಿಯನ್ನು ನಡೆದು ಫಲ ಕಾಣಲು ಪ್ರೇರಣೆಯಾಗಬೇಕು.

(ಮುಂದುವರೆಯುವುದು….)

Leave a Reply