ಓಕ್ನಸ್  ಅನುಭವಿಸಿದ ಅತಿ ಕಠಿಣ ಶಿಕ್ಷೆ ಯಾವುದು ಗೊತ್ತೆ?  :  ಗ್ರೀಕ್ ಪುರಾಣ ಕಥೆಗಳು  ~ 24

ಓಕ್ನಸ್ಸನ ಈ ಫಜೀತಿಯಿಂದಾಗಿಯೇ, “ಎಂಥಾ ಶಿಕ್ಷೆಯಾದರೂ ಕೊಡಿ, ಓಕ್ನಸ್ಸನ ಪಾಡು ಬೇಡ” ಎನ್ನುವ ಹೇಳಿಕೆ ಚಾಲ್ತಿಗೆ ಬಂತು. ಅದೇನು ಫಜೀತಿ? ಇಲ್ಲಿದೆ ನೋಡಿ…

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

Oceanus, Tethys and Eileithyia

ಕ್ನಸ್ ಒಬ್ಬ ಅಮಾಯಕ ಜೀವಿಯಾಗಿದ್ದ. ಕಷ್ಟಪಟ್ಟು ಜೀವನ ನಡೆಸುತ್ತಿದ್ದ. ಅವನ ಹೆಂಡತಿ ಅವನನ್ನು ದಂಡಿಸುತ್ತಿದ್ದಳು. ಅವನು ದುಡಿದು ತರುವುದಕ್ಕಿಂತ ಹೆಚ್ಚು ಖರ್ಚು ಮಾಡಿ ಮತ್ತಷ್ಟು ದುಡಿದು ತರುವಂತೆ ಅಟ್ಟುತ್ತಿದ್ದಳು.

ಹೆಂಡತಿಯ ಕಾಟದಿಂದ ಓಕ್ನಸ್’ಗೆ ಖಿನ್ನತೆ ಆವರಿಸತೊಡಗಿತ್ತು. ಏಕಾಗ್ರತೆಯಿಂದ ಕೆಲಸ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಅವನು ದೇವತೆಗಳ ಕೆಲಸವೊಂದನ್ನು ಮಾಡುವಾಗ ಗಮನ ತಪ್ಪಿ ಕೆಲಸ ಕೆಟ್ಟಿತು. ಇದರಿಂದ ದೇವತೆಗಳು ಕುಪಿತರಾಗಿ ಅವನನ್ನು ಶಪಿಸಿದರು. ಟಾರ್ಟರಸ್ಸಿನಲ್ಲಿ (ಗ್ರೀಕ್ ಪುರಾಣಗಳಲ್ಲಿ ಕಂಡುಬರುವ ನರಕ) ಅವನು ವಿಚಿತ್ರ ಶಿಕ್ಷೆಯೊಂದಕ್ಕೆ ಒಳಗಾಗಬೇಕಾಯಿತು.

ಹೀಗೆ ದೇವತೆಗಳ ಅವಕೃಪೆಗೆ ಒಳಗಾದ ಓಕ್ನಸ್’ಗೆ ಪಡೆದ ಶಿಕ್ಷೆ ಏನು ಗೊತ್ತೆ?  ಒಣಹುಲ್ಲಿನಿಂದ ಹಗ್ಗ ಹೊಸೆಯುವುದು! ಒಣಹುಲ್ಲಿನ ಬಣವೆಯಿಂದ ಹುಲ್ಲು ಹಿರಿದು ಹಗ್ಗ ಹೊಸೆಯಬೇಕು. ಅವನು ಹೊಸೆದುಕೊಂಡು ಬಂದಂತೆ ಒಂದು ಹೆಣ್ಣು ಕತ್ತೆ ಹಗ್ಗವನ್ನು ಮತ್ತೊಂದು ಕಡೆಯಿಂದ ತಿಂದುಕೊಂಡು ಬರುತ್ತದೆ. ಹುಲ್ಲಿನ ರಾಶಿ ಕರಗುವಂತಿಲ್ಲ, ಅವನಿಗೆ ಹಗ್ಗ ಹೊಸೆಯುವುದು ತಪ್ಪುವಂತಿಲ್ಲ. ಅವನ ಪರದಾಟ ನೋಡಿ ನರಕವಾಸಿಗಳಿಗೆಲ್ಲ ಇದೊಂದು ವಿನೋದ. ಟಾರ್ಟರಸ್ಸಿನಲ್ಲಿ ಚಿತ್ರವಿಚಿತ್ರ ಶಿಕ್ಷೆಗೆ ಒಳಗಾಗಿ ನರಳುತ್ತಿದ್ದರೂ ಅವರು ಓಕ್ನಸ್ಸನ ಫಜೀತಿ ನೋಡಿ ನಗುತ್ತಿದ್ದರು.

ಓಕ್ನಸ್ಸನ ಈ ಫಜೀತಿಯಿಂದಾಗಿಯೇ, “ಎಂಥಾ ಶಿಕ್ಷೆಯಾದರೂ ಕೊಡಿ, ಓಕ್ನಸ್ಸನ ಪಾಡು ಬೇಡ” ಎನ್ನುವ ಹೇಳಿಕೆ ಚಾಲ್ತಿಗೆ ಬಂತು.

Leave a Reply