ರ್-ಮ್-ದ್ ಅಂದರೆ ಅರಬ್ ಭಾಷೆಯಲ್ಲಿ ತೀವ್ರ ಶಾಖ ಎಂದರ್ಥ. ಈ ಪದಮೂಲದಿಂದ ಹುಟ್ಟಿದ ರಮ್-ದಾನ್, “ಬಿಸಿಲಿಗೆ ಕಾದ ಮರಳು” ಎಂಬ ಅರ್ಥವನ್ನು ಕೊಡುತ್ತದೆ. ಬಿಸಿಲಿನ ಶಾಖ ನೆಲವನ್ನು ಸುಡುವಂತೆ ಹಸಿವಿನ ಶಾಖ ದುಷ್ಟ ಚಿಂತನೆಗಳನ್ನು ಸುಡುತ್ತದೆ. ಹೀಗೆ ರಮ್-ದಾನ್ ಮತ್ತು ಉಪವಾಸ ಒಂದಕ್ಕೊಂದು ಹೆಣೆದುಕೊಂಡಿದೆ ಅನ್ನುವುದು ರಮ್-ದಾನ್ ಉಪವಾಸದ ಸರಳ ವಿವರಣೆ.
ಈಗ ರಮ್-ದಾನ್ (ಅಥವಾ ರಂಜಾನ್) ತಿಂಗಳು ನಡೆಯುತ್ತಿದೆ. ಇದು ಉಪವಾಸದ ತಿಂಗಳೆಂದೇ ಚಾಲ್ತಿಯಲ್ಲಿದ್ದು, ಶ್ರದ್ಧಾವಂತ ಮುಸ್ಲಿಂ ಸಮುದಾಯದವರು ವಿಶಿಷ್ಟ ಬಗೆಯ ಉಪವಾಸವನ್ನು ಆಚರಿಸುತ್ತಾರೆ.
(ಇಂಟರ್ನೆಟ್ ಮಾಹಿತಿ)