ಈಜತೊಡಗಿತು ಚಿತ್ರದ ಮೀನು : ಝೆನ್ ಕಥೆ

che

ಬ್ಬ ಪ್ರಸಿದ್ಧ ಕಲಾವಿದನ ಬಳಿ ಯುವ ಕಲಾವಿದನೊಬ್ಬ ಕಲಿಯಲು ಬರುತ್ತಿದ್ದ. ಆ ಯುವ ಕಲಾವಿದನಿಗೆ ಕಲೆ ಅಭಿಜಾತವಾಗಿ ಒಲಿದಿತ್ತು.

ಅವನ ಅಪ್ರತಿಮ ಕಲಾ ಪ್ರತಿಭೆ ಕಂಡು ಗುರುವಿಗೆ ಅಸಾಧ್ಯ ಹೊಟ್ಚೆಕಿಚ್ಚು. ಏನಾದರೊಂದು ನೆಪ ಹುಡುಕಿ ಆ ಯುವ ಕಲಾವಿದನ ಮೇಲೆ ಹರಿ ಹಾಯುತ್ತಿದ್ದ. ಚಿತ್ರ ಬರಿಯಲಿಕ್ಕಲ್ಲ, ಮನೆಗೆ ಸುಣ್ಣ ಹಚ್ಚುವುದಕ್ಕೆ ಲಾಯಕ್ಕು ನೀನು ಎಂದು ಮಾತು ಮಾತಿಗೆ ಎಲ್ಲರ ಮುಂದೆ ಅಪಮಾನ ಮಾಡುತ್ತಿದ್ದ.

ಕ್ರಮೇಣ ಆ ಯುವ ಕಲಾವಿದನ ಆತ್ಮವಿಶ್ವಾಸ ಕಡಿಮೆಯಾಗತೊಡಗಿತು.
ಒಂದು ದಿನ ಗೋಲ್ಡ್ ಫಿಶ್ ಪೇಂಟ್ ಮಾಡುವ ಕೆಲಸ ಯುವಕನ ಪಾಲಿಗೆ ಬಂತು. ಆತ ಕಣ್ಣು ಮುಚ್ಚಿ ತನ್ನ ದೊಡ್ಡಪ್ಪನ ಮನೆಯಲ್ಲಿದ್ದ ಗೋಲ್ಡ್ ಫಿಶ್ ಧ್ಯಾನಿಸುತ್ತ ಚಿತ್ರ ಬರೆದು ಮುಗಿಸಿದ.

ಆ ಚಿತ್ರ ನೋಡುತ್ತಿದ್ದಂತೆಯೇ ಕೆಂಡಾಮಂಡಲನಾದ ಗುರು “ಹೀಗಾ ಚಿತ್ರ ಬರೆಯೋದು?” ಎಂದು ಶಿಷ್ಯನನ್ನು ಹೀಯಾಳಿಸುತ್ತ, ಆ ಚಿತ್ರವನ್ನು ಮುದುಡಿ ಮಾಡಿ ಅಲ್ಲೇ ಇದ್ದ ನೀರಿನ ಕೊಳಕ್ಕೆ ಎಸೆದ.

ಅಲ್ಲಿದ್ದ ಎಲ್ಲರೂ ನೋಡ ನೋಡುತ್ತಿದ್ದಂತೆಯೇ, ಆ ಮೀನಿನ ಚಿತ್ರ ನೀರಿಗೆ ಇಳಿದು ಈಜತೊಡಗಿತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.