ತಾವೋ ತಿಳಿವು #53 ~ ಎರಕ ಸರಳವಾದಷ್ಟು ಮೂರ್ತಿ ಸ್ಪಷ್ಟವಾಗುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಒಂದಾನೊಂದು ಕಾಲದಲ್ಲಿ,
ತಾವೋ ನಡೆಸಿದಂತೆ ನಡೆದುಕೊಂಡು ಬಂದವರಿಗೆ
ಕಲಿಸುವುದರಲ್ಲಿ ಆಸಕ್ತಿ ಇರಲಿಲ್ಲ,
ಬದಲಾಗಿ, ಹೇಗೆಲ್ಲಾ ಕಲಿಯಬಾರದು
ಎನ್ನುವುದನ್ನ ಮಮತೆಯಿಂದ ಹೇಳಿಕೊಟ್ಟರು.

ದಾರಿ ಗೊತ್ತಿದೆ ಎಂದುಕೊಂಡವರು
ಯಾರ ಮಾತನ್ನೂ ಕೇಳುವುದಿಲ್ಲ,
ಗೊತ್ತಿಲ್ಲ ಎನ್ನುವುದ ಬಲ್ಲವರು ಹುಡುಕುತ್ತಾರೆ,
ಹುಡುಕಿ, ಹುಡುಕಿ
ತಮ್ಮ ದಾರಿ ತಾವೇ ಕಂಡು ಕೊಳ್ಳುತ್ತಾರೆ.

ಆಳುವುದನ್ನ ಕಲಿಯ ಬಯಸುವವರು
ಶಾಲೆಯಿಂದ, ಅರಮನೆಯಿಂದ ಹೊರ ಬರುವುದನ್ನ
ಮೊದಲು ಕಲಿಯಬೇಕು.

ಎರಕ ಸರಳವಾದಷ್ಟು ಮೂರ್ತಿ ಸ್ಪಷ್ಟವಾಗುವುದು.

ಸಹಜ ಬದುಕಿಗೆ ತೃಪ್ತರಾದವರು
ಉಳಿದವರಿಗೂ ಆ ಮನೆಯ ಕೀಲಿ ಕೈ ದಾಟಿಸುವರು.

Leave a Reply