ತಾವೋ ತಿಳಿವು #56 ~ ಜಗತ್ತಿನ ಸಮಸ್ತವೂ ತಾವೋ ಒಡಲಿಗೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

 

tao1

ರಮಾಣುವಿಗಿಂತ ಚಿಕ್ಕದಾದರೂ
ಅಗಣಿತ ಬ್ರಹ್ಮಾಂಡಗಳ ತವರು ತಾವೋ.
ಗ್ರಹಿಸಲು ಹೋದವರೆಲ್ಲ ಮುಗ್ಗರಿಸಿ
ಮೂಗು ಮುರಿದುಕೊಂಡಿದ್ದಾರೆ.

ಆಳುವವರು ತಾವೋ ಅಪ್ಪಿಕೊಂಡಾಗ
ಜಗತ್ತಿನ ಸಮಸ್ತವೂ ಸಾಮರಸ್ಯದಲ್ಲಿ ಮಗ್ನ
ಆಗ, ನೆಲ, ಮುಗಿಲು ಒಂದಾಗಿ
ಮಧುರ ಇಬ್ಬನಿಯಲ್ಲಿ ಸ್ನಾನ.

ಹೆಸರುಗಳು, ರೂಹುಗಳು
ಕೇವಲ ಅನುಕೂಲಕ್ಕಾಗಿ, ತಾತ್ಕಾಲಿಕ ಮಾತ್ರ,
ಗುಂಪು, ಸಂಸ್ಥೆಗಳು ಕೂಡ.
ಇವಕ್ಕೆಲ್ಲ ಯಾವಾಗ
ಮಂಗಳ ಹಾಡಬೇಕೆನ್ನುವುದು ಗೊತ್ತಿದ್ದಾಗಲೇ
ಎಲ್ಲವೂ ಮಂಗಳಕರ.

ಕಣಿವೆಯ ಎಲ್ಲ ತೊರೆಗಳು ಹರಿದು
ಸಮುದ್ರ ಸೇರುವಂತೆ
ಜಗತ್ತಿನ ಸಮಸ್ತವೂ ತಾವೋ ಒಡಲಿಗೆ.

Leave a Reply