ಕೀವುಗಳಿಗಿಂತ ನಿನ್ನ ಮಾತು ಅಸಹ್ಯ : ಝೆನ್ ಕಥೆ

bankieಕುಷ್ಟ ರೋಗದಿಂದ ಬಳಲುತ್ತಿದ್ದ ಭಿಕ್ಷುಕರ ಗುಂಪೊಂದು ಝೆನ್ ಮಾಸ್ಟರ್ ಬಾಂಕಿಯ ಆಶ್ರಮಕ್ಕೆ ಬಂದು ಅವನ ಆಶ್ರಯ ಕೋರಿತು. ಅಪಾರ ಅಂತಃಕರಣದ ಮನುಷ್ಯನಾದ ಬಾಂಕಿ ಅವರಿಗೆಲ್ಲ ತನ್ನ ಆಶ್ರಮದಲ್ಲಿ ಇರಲು ಅವಕಾಶ ಮಾಡಿಕೊಟ್ಟ.

ಬಾಂಕಿ ಸ್ವತ ತಾನೇ ಕುಷ್ಟ ರೋಗಿಗಳನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿಸಿ, ಔಷಧಿ ಹಚ್ಚಿ ಅವರ ಆರೈಕೆ ಮಾಡುತ್ತಿದ್ದ.

ಬಾಂಕಿಯ ಪ್ರವಚನಕ್ಕೆ ಮತ್ತು ಅವನ ಶಿಷ್ಯರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ದೇವಸ್ಥಾನ ಕಟ್ಟಿಸಿಕೊಟ್ಟ ರಾಜನ ಪ್ರತಿನಿಧಿಗೆ ಇದೆಲ್ಲ ಹಿಡಿಸುತ್ತಿರಲಿಲ್ಲ.

“ ಮಾಸ್ಟರ್ ಎಂಥ ಕೊಳಕು ಇದು. ದಯವಿಟ್ಟು ಸ್ವಚ್ಛ ಕೈ ತೊಳೆದುಕೊಳ್ಳಿ “ ರಾಜ ಪ್ರತಿನಿಧಿ ಮುಖ ಸಿಂಡರಿಸುತ್ತ ಕೇಳಿಕೊಂಡ.

“ ಈ ರೋಗಿಗಳ ದೇಹದ ಗಾಯ, ಕೀವುಗಳಿಗಿಂತ ನಿನ್ನ ಮಾತು ನನಗೆ ಪರಮ ಅಸಹ್ಯ, ಕಿವಿ ತೊಳೆದುಕೊಳ್ಳ ಬೇಕು ನಾನೀಗ “

ಮಾಸ್ಟರ್ ಬಾಂಕಿ ಮುಖ ಎತ್ತದೇ ಉತ್ತರ ಕೊಟ್ಟ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply