ಬೆಂಕಿಯೊಳಗುಳ್ಳ ಗುಣ ಬಿಸಿ ನೀರಲುಂಟೇ? : ಅಲ್ಲಮನ ವಚನ

ತೋರಿಕೆಯ ಆಚರಣೆಗಳಿಂದೇನು ಫಲ? ಕ್ಷಣವೋ, ಅರೆ ಕ್ಷಣವೋ… ಶ್ರದ್ಧಾಭಕ್ತಿಯಿಂದ ಮನದುಂಬಿ ಭಗವಂತನನ್ನು ನೆನೆದರೆ ಸಾಕು ಅನ್ನುತ್ತಾನೆ ಅಲ್ಲಮ ಪ್ರಭುದೇವ. 

allama

ಮಗೆ ತೋರುಗಾಣಿಕೆಯ ಆಚರಣೆಯಲ್ಲೇ ಹೆಚ್ಚಿನ ಆಸಕ್ತಿ. ಪೂಜೆಯನ್ನು ವೈಭವದಿಂದ ಮಾಡುತ್ತೇವೆ. ಅದ್ದೂರಿಯ ಅಲಂಕಾರ ಮಾಡುತ್ತೇವೆ. ಜಪಮಣಿಯನ್ನು ಎಲ್ಲರಿಗೂ ಕಾಣುವಂತೆ ತಿರುಗಿಸುತ್ತಾ ಕೂರುತ್ತೇವೆ. ಸಂಕೇತಗಳನ್ನು ಧರಿಸುತ್ತೇವೆ. ಇವೆಲ್ಲದರಿಂದ ಪ್ರಯೋಜನವೇ ಇಲ್ಲವೆಂದಲ್ಲ. ತೋರುಗಾಣಿಕೆಯಿಂದ ಮಾಡಿದರೂ ಈ ಎಲ್ಲ ಪ್ರಕ್ರಿಯೆಯಲ್ಲಿ ಭಗವಂತನ ಹೆಸರನ್ನು ಕೊನೆಪಕ್ಷ ಉಚ್ಚರಿಸುತ್ತ ಇರುತ್ತೇವಲ್ಲ… ಅಷ್ಟೋ ಇಷ್ಟೋ ಫಲ ದೊರಕುತ್ತದೆ. ಈ ಫಲ ಬಿಸಿನೀರಿಗೆ ಸಮನಷ್ಟೆ. 

ಆದರೆ, ಕ್ಷಣವೋ, ಅರೆ ಕ್ಷಣವೋ… ಯಾವ ಢಾಂಬಿಕತೆಯೂ ಇಲ್ಲದೆ ನಿಜವನ್ನು, ಆ ಪರಮಸತ್ಯವನ್ನು (ಭಗವಂತನನ್ನು) ನೆನೆದರೆ ಖಂಡಿತವಾಗಿಯೂ ಫಲವುಂಟು. ತಲ್ಲೀನತೆಯಿಂದ, ಸಮಗ್ರವಾಗಿ, ಪ್ರಾಮಾಣಿಕವಾಗಿ ಭಗವಂತನ್ನು ನೆನೆದರೆ ಪೂರ್ಣ ಫಲಗಳುಂಟು. ಈ ಫಲ ಬೆಂಕಿಯಂತೆ ಪರಿಪೂರ್ಣ. 

ಅಲ್ಲಮ ಪ್ರಭುವಿನ ಈ ವಚನ ಇದನ್ನು ಸ್ಪಷ್ಟವಾಗಿ ಸಾರುತ್ತಿದೆ. “ಕ್ಷಣವಾದಡೆಯೂ ಆಗಲಿ, ಕ್ಷಣಾರ್ಧವಾದಡೆಯೂ ಆಗಲಿ ನಿಜದ ನೆನಹೇ ಸಾಕು; ಬೆಂಕಿಯೊಳಗುಳ್ಳ ಗುಣ ಬಿಸಿ ನೀರಲುಂಟೇ?” ಎಂದು ಪ್ರಶ್ನಿಸುವ ಮೂಲಕ ಪರಮಸತ್ಯವನ್ನು ಹೊಂದಲು ಯಾವ ದಾರಿ ಅತ್ಯುತ್ತಮ ಎಂಬುದನ್ನು ಸೂಚಿಸುತ್ತಿದ್ದಾನೆ. 

Leave a Reply