ನಿಮ್ಮ ವ್ಯಕ್ತಿತ್ವವನ್ನು ತಿಳಿಯಲು ಒಂದು ‘ಟಿಬೆಟನ್ ಟೆಸ್ಟ್’

ಇದೊಂದು ಅತ್ಯಂತ ಸರಳ ಮೈಂಡ್ ಗೇಮ್. ನೀವು ಈ ಕೆಳಗಿನ 3 ಪ್ರಶ್ನೆಗಳಿಗೆ ಉತ್ತರಿಸಿ. ಕೊನೆಯಲ್ಲಿ ನೀಡಿರುವ ಫಲಿತಾಂಶಗಳ ಜೊತೆ ತಾಳೆ ಹಾಕಿ, ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಿ!! ಈ ಸರಳ ಪರೀಕ್ಷೆ ನಿಮ್ಮ ಗೊಂದಲವನ್ನು ತಿಳಿಯಾಗಿಸಲು; ನಿಮ್ಮ ವ್ಯಕ್ತಿತ್ವ ಮತ್ತು ಸಂಬಂಧಗಳ ಬಗ್ಗೆ ಖಚಿತತೆ ನೀಡಲು ಸಹಕಾರಿ.  

ಈ ಕೆಳಗಿನ ಪ್ರಾಣಿಗಳಿಗೆ ನಿಮ್ಮ ಆದ್ಯತೆಯ ಅನುಸಾರ ಸಂಖ್ಯೆಗಳನ್ನು ನೀಡಿ:
ಹಸು – | ಹುಲಿ – | ಕುರಿ – | ಕುದುರೆ – | ಹಂದಿ –

ಈ ಕೆಳಗಿನ ವಾಕ್ಯಗಳನ್ನು ಆಯಾ ಪ್ರಾಣಿಗಳ ಗುಣವಿಶೇಷಗಳಿಂದ ಪೂರ್ಣಗೊಳಿಸಿ
ನಾಯಿ ….. | ಬೆಕ್ಕು ……. | ಹೆಗ್ಗಣ ………

ನಿಮ್ಮ ಬದುಕಿನಲ್ಲಿ ಮುಖ್ಯ ಎನ್ನಿಸುವ ಐದು ವ್ಯಕ್ತಿಗಳನ್ನು ನೆನೆಯಿರಿ. ಈ ಕೆಳಗಿನ ಬಣ್ಣಗಳ ಮುಂದೆ ಅವರ ಹೆಸರನ್ನು ಬರೆಯಿರಿ. ಒಬ್ಬ ವ್ಯಕ್ತಿಗೆ ಒಂದೇ ಬಣ್ಣ ಇರಬೇಕು.
ಹಳದಿ – | ಕೇಸರಿ – | ಕೆಂಪು – | ಬಿಳಿ – | ಹಸಿರು –

ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ!!

ಮೊದಲನೆ ಪ್ರಶ್ನೆಯು ನಿಮ್ಮ ಆದ್ಯತೆಯ ಅನುಸಾರ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ:
ಹುಲಿ : ನಿಮ್ಮ ಕುರಿತು ನಿಮಗಿರುವ ಆತ್ಮವಿಶ್ವಾಸವನ್ನು ಸೂಚಿಸುತ್ತದೆ
ಕುರಿ : ಪ್ರೀತಿಯನ್ನು ಸೂಚಿಸುತ್ತದೆ
ಕುದುರೆ : ಕುಟುಂಬವನ್ನು ಸೂಚಿಸುತ್ತದೆ
ಹಂದಿ : ಹಣವನ್ನು (ದುಡಿಮೆಯನ್ನು) ಸೂಚಿಸುತ್ತದೆ

ನೀವು ಬದುಕನ್ನು ನೋಡುವ ಬಗೆಯನ್ನು ಎರಡನೇ ಪ್ರಶ್ನೆಯು ಸೂಚಿಸುತ್ತದೆ:
ನಾಯಿಗೆ ನೀವು ಹಚ್ಚುವ ವೀಶೇಷಣವು ನಿಮಗೆ ನೀವು ಕೊಟ್ಟುಕೊಳ್ಳುವ ವಿಶೇಷಣವೇ ಆಗಿರುತ್ತದೆ
ಬೆಕ್ಕಿಗೆ ನೀವು ಕೊಡುವ ವಿಶೇಷಣವು ನಿಮ್ಮ ಸಂಗಾತಿಯನ್ನು ನೀವು ಹೇಗೆ ನೋಡುತ್ತೀರಿ ಎಂಬುದನ್ನು ಸೂಚಿಸುತ್ತದೆ
ಹೆಗ್ಗಣಕ್ಕೆ ನೀವು ನೀಡುವ ವಿಶೇಷಣವು ನಿಮ್ಮ ಶತ್ರುಗಳನ್ನು ಹೇಗೆ ಕಾಣುತ್ತೀರಿ ಎಂಬುದನ್ನು ಸೂಚಿಸುತ್ತದೆ

ಬಣ್ಣಗಳು ನಿಮ್ಮ ಬದುಕಿನಲ್ಲಿ ಯಾವ ವ್ಯಕ್ತಿಯನ್ನು ಎಷ್ಟು ಪ್ರಾಮುಖ್ಯತೆಯಿಂದ ನೋಡುತ್ತೀರಿ ಎಂಬುದನ್ನು ಸೂಚಿಸುತ್ತವೆ:
ಹಳದಿ : ನಿಮ್ಮ ಬದುಕಿನಲ್ಲಿ ಮಹತ್ತರ ಪ್ರಭಾವ ಬೀರಿದ ವ್ಯಕ್ತಿ
ಕೇಸರಿ : ನಿಮ್ಮ ನಿಜವಾದ ಗೆಳೆಯ/ತಿ
ಕೆಂಪು : ನೀವು ಹೃತ್ಪೂರ್ವಕವಾಗಿ ಪ್ರೀತಿಸುವ ವ್ಯಕ್ತಿ
ಬಿಳಿ : ದಯಾಮಯಿಯಾದ, ಕಾಳಜಿ ತೋರುವ ವ್ಯಕ್ತಿ
ಹಸಿರು : ನೀವು ಕೊನೆತನಕ ನೆನಪಿನಲ್ಲಿಟ್ಟುಕೊಳ್ಳಲು ಬಯಸುವ ವ್ಯಕ್ತಿ

Leave a Reply