ತಾವೋ ತಿಳಿವು #61 ~ ಉಗ್ರನಿಗೆ ಸಹಜ ಸಾವಿಲ್ಲ

ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ

tao

ತಾವೋ ಧರಿಸಿದ್ದು ಒಂದನ್ನ,
ಆ ಒಂದು, ಇನ್ನೆರಡನ್ನ,
ಇನ್ನೆರಡು, ಮತ್ತೆ ಮೂರನ್ನ,
ಮೂರು, ಸಾವಿರ ಸಾವಿರಗಳನ್ನ.

ಸಾವಿರದ ಹೆಗಲ ಮೇಲೆ ಪ್ರಕೃತಿ,
ತೋಳಲ್ಲಿ ಪುರುಷ.
ಪ್ರಕೃತಿ – ಪುರುಷರ ಸಮ್ಮಿಲನದಲ್ಲಿ
ಸಾಮರಸ್ಯ.

ಅನಾಥರನ್ನ, ಕಳೆದುಕೊಂಡವರನ್ನ, ಬಹಿಷ್ಕೃತರನ್ನ ಕಂಡರೆ
ಹೇಸಿಗೆ ಜನರಿಗೆ;
ಆದರೂ, ರಾಜರೂ, ಒಡೆಯರೂ
ತಮ್ಮನ್ನು ತಾವು, ಹಾಗೆಂದು ಕರೆದುಕೊಳ್ಳುತ್ತಾರೆ.

ಆದ್ದರಿಂದಲೇ
ಕೂಡುವುದು ಎಂದರೆ, ಕಳೆಯುವುದು
ಕಳೆಯುವುದು ಎಂದರೆ, ಕೂಡುವುದು.

ಹಿಂದಿನ ಋಷಿಗಳ ಮಾತೇ
ನನ್ನದು ಕೂಡ,

ಉಗ್ರನಿಗೆ ಸಹಜ ಸಾವಿಲ್ಲ.

Leave a Reply