ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ
ತಾವೋ ಆಳುವ ಜಗತ್ತಿನಲ್ಲಿ
ಯುದ್ಧದ ಕುದುರೆಗಳು, ನೆಲ ಊತು ಹದ ಮಾಡಿದರೆ
ತಾವೋ ವಿಮುಖ ಜಗತ್ತಿನ ನೆಲದಲ್ಲಿ
ಯುದ್ಧದ ಕುದುರೆಗಳನ್ನು ಬೆಳೆಯಲಾಗುತ್ತದೆ.
ಭಯಕ್ಕಿಂತ ದೊಡ್ಡ ಭ್ರಮೆ
ಅತೃಪ್ತಿಗಿಂತ ಘೋರ ಆಪತ್ತು
ವೈರಿಗಳಿರುವ ಮಹಾ ಅದೃಷ್ಟ
ಯಾರಿಗೂ ಬೇಡ.
ಎಷ್ಟು ಸಾಕು ಎನ್ನುವುದು ಗೊತ್ತಿದ್ದರೆ
ಅಷ್ಟೇ ಸಾಕು.