ತಾವೋ ತಿಳಿವು #65 ~ ಕೋಗಿಲೆಯ ಹಾಗೆ ಸರಾಗ, ತಾವೋ ರಾಗ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ

upanishat 2

ಗತ್ತಿನ ಪ್ರತಿಯೊಂದೂ
ತಾವೋ ಹಾಡಿದಂತೆ.
ಹುಟ್ಟುವಾಗ ಭೋಳೆ, ಪರಿಪೂರ್ಣ,
ರೆಕ್ಕೆ ಬಿಚ್ಚಿದ ಹಕ್ಕಿ.
ಆಮೇಲೆ, ಸುತ್ತ ಮುತ್ತಲಿನ ಸನ್ನಿವೇಶಗಳೇ
ತಂದೆ, ತಾಯಿ.
ರಾಜ ದರ್ಬಾರುಗಳಲ್ಲಿ ಹಾಡಿದಂತಲ್ಲ
ಇದು ಕೋಗಿಲೆಯ ಹಾಗೆ ಸರಾಗ
ತಾವೋ ರಾಗ

ಕೇವಲ ಹುಟ್ಟಿಸುವುದಲ್ಲ
ಆರೈಕೆ, ಲಾಲನೆ ಪಾಲನೆ, ರಕ್ಷಣೆ
ಎಲ್ಲ ತಾವೋ ಜವಾಬ್ದಾರಿ,
ಕೊನೆಗೆ ತನ್ನೊಳಗೆ ವಾಪಸ್ ಕರೆಸಿಕೊಳ್ಳುವ ತನಕ.

ಸ್ವಾಧೀನದ ಹುಕಿಯಿಲ್ಲದ ಸೃಷ್ಟಿ,
ನಿರೀಕ್ಷೆಗಳ ಆಸೆಯಿಲ್ಲದ ಕ್ರೀಯೆ,
ತಲೆ ತೂರಿಸುವ ಚಾಲಾಕಿಯಿಲ್ಲದ ಸಲಹೆ
ತಾವೋಗೆ ತುಂಬ ಸಹಜ.

ಅಂತಯೇ, ತಾವೋ ಪ್ರೇಮ
ಹುಟ್ಟು ಗುಣ.

Leave a Reply