ಆನಂದಮಯೋsಭ್ಯಾಸಾತ್ : ವೇದಾಂತ ಸೂತ್ರ

ಆನಂದದಿಂದ ಇರುವುದು ಆತ್ಮದ ಅಭ್ಯಾಸ. ಅದನ್ನು ಹೊರಗಿನಿಂದ ಎರವಲು ಪಡೆಯಬೇಕಾಗಿಲ್ಲ. ಆತ್ಮವು ಆನಂಮಯ ಕೋಶದಿಂದ ಸದಾ ಸುತ್ತುವರಿಯಲ್ಪಟ್ಟಿರುತ್ತದೆ – ಎನ್ನುತ್ತದೆ ವೇದಾಂತ ಸೂತ್ರ. 

vedanta sutra

ನಂದಮಯ ಎಂಬ ಪದದ ತಾತ್ತ್ವಿಕ, ಪಾಂಡಿತ್ಯಪೂರ್ಣ ಜಿಜ್ಞಾಸೆಗಳೇನೇ ಇರಲಿ… ದೈನಂದಿನ ಬದುಕಿನ ಆನ್ವಯಿಕ ಅರ್ಥಕ್ಕೆ ಹಚ್ಚಿದರೆ ಇದು ಬಹಳ ಸರಳವಾಗಿದೆ. ಆತ್ಮವನ್ನು ‘ಆನಂದಮಯೋsಅಭ್ಯಾಸಾತ್’ ಎನ್ನುತ್ತದೆ ಬ್ರಹ್ಮಸೂತ್ರ. ಇದರ ಸರಳ ಅರ್ಥ – “ಆತ್ಮಕ್ಕೆ ಆನಂದವಾಗಿರುವುದೇ ಅಭ್ಯಾಸ. ಆನಂದವು ಆತ್ಮದ ಸಹಜ ಭಾವ. ಅದು ಆತ್ಮದ ಸಹಜ ಸಿದ್ಧಿ. ಆತ್ಮವು ಆನಂದಮಯ ಕೋಶದಿಂದ ಸುತ್ತುವರಿಯಲ್ಪಟ್ಟಿದ್ದು, ಅದನ್ನೇ ರೂಢಿಯಾಗಿಸಿಕೊಂಡಿದೆ” ಎಂದು. 

ಇಂಥಾ ಆನಂದಮಯವಾದ ಆತ್ಮ ನಮ್ಮೊಳಗೆ ಇರುವಾಗ ನಾವು ದುಃಖಿತರಾಗಿ ಇರುವುದನ್ನೆ ಹೆಚ್ಚು ಹಂಬಲಿಸುತ್ತೇವೆ. ನಮಗೆ ಸಂತಸವನ್ನು ಕಾಪಿಟ್ಟುಕೊಳ್ಳುವುದಕ್ಕಿಂತ ದುಃಖಗಳನ್ನು ಕೆದಕಿ ನೋಯುವುದರಲ್ಲೇ ಹೆಚ್ಚಿನ ಆಸಕ್ತಿ. ದುಃಖಕ್ಕೆ ಕಾರಣವಾದ ಅರಿಷಡ್ವರ್ಗಗಳೊಡನೆ ನಮ್ಮ ಗೆಳೆತನ. ಯಾವ ಕಾಮ, ಕ್ರೋಧ,  ಲೋಭ, ಮೋಹ, ಮದ, ಮತ್ಸರಗಳನ್ನು ಮನುಷ್ಯ ಜೀವದ ಆರು ಶತ್ರುಗಲೆಂದು ಕರೆದಿದ್ದಾರೋ, ಆ ಶತ್ರುಗಳೇ ನಮ್ಮ ಪರಮ ಮಿತ್ರರು. ಅವುಗಳ ಸಹವಾಸಲದಲಿ ನಾವು ನಮ್ಮ ಗುರುತು ಪಡೆಯಲು ಹವಣಿಸುತ್ತೇನೆ. ಪರಿಣಾಮವಾಗಿ ಹೆಚ್ಚುಹೆಚ್ಚು ದುಃಖ್ಕಕೆ ಒಳಗಾಗುತ್ತಾ ಹೋಗುತ್ತೇವೆ. 

ಆದ್ದರಿಂದ, ಈ ಶತ್ರುಗಳನ್ನು ದೂರವಿಡಿ. ದುಃಖಕ್ಕೆ ಕಾರಣ ಏನಿವೆಯೋ ಅವನ್ನೇ ದೂರ ಮಾಡಿದರೆ ನಮ್ಮ ನೈಜ ಸುಖಕ್ಕೆ ಮುಸುಕಿದ ತೆರೆ ಸರಿಯುವುದು. ಅಲ್ಲಿ ಆನಂದದ ಬೆಳಕು ಮೂಡುವುದು. 

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.