ನಿಮಗಾಗಿ ನೀವು ಓಡಿ, ಸ್ಪರ್ಧೆಗಾಗಿ ಅಲ್ಲ : ಬೆಳಗಿನ ಹನಿ

 

ನಿಮಗಾಗಿ ನೀವು ಗುರಿ ನಿಕ್ಕಿ ಮಾಡಿಕೊಳ್ಳಿ, ನಿಮ್ಮ ಓಟ ನೀವು ಓಡಿ. ನೀವು ನಿಗದಿಪಡಿಸಿಕೊಂಡ ಅವಧಿಯಲ್ಲಿ ಗುರಿ ತಲುಪುವಿರೋ ಇಲ್ಲವೋ ಗಮನಿಸಿ. ಸಾಧ್ಯವಾಗದೆ ಹೋದರೆ, ಗುರಿಯ ವ್ಯಾಪ್ತಿಯನ್ನೆ ಒಂದಷ್ಟು ಚಿಕ್ಕದಾಗಿಸಿಕೊಳ್ಳಿ. ಇದರಿಂದ ನಷ್ಟವೇನಾಗದು. ನೀವು ಯಾರಿಗೂ ಏನನ್ನೂ ಪ್ರೂವ್ ಮಾಡಬೇಕಿಲ್ಲ. ನೀವು ಖುಷಿಯಿಂದ ಇರುವುದಷ್ಟೆ ಮುಖ್ಯ ~ ಚೈತನ್ಯ

ಹುತೇಕವಾಗಿ ನಾವೆಲ್ಲರೂ ನಮ್ಮ ವೈಫಲ್ಯಗಳನ್ನು ಯಾರ ಮೇಲಾದರೂ ಹೊರಿಸಿ ಪಾರಾಗುವ ಯೋಚನೆಯನ್ನು ಮಾಡುತ್ತಿರುತ್ತೇವೆ. ಹೀಗೆ ನಮ್ಮ ಸೋಲಿನ ಹೊಣೆ ಹೊರಲಿಕ್ಕೆ ಸುಲಭವಾಗಿ ಸಿಗುವ ಹೆಗಲು ‘ವಿಧಿ’ಯದ್ದು. ನಮ್ಮ ಪ್ರಯತ್ನದ ಕೊರತೆ, ನಮ್ಮ ಆದ್ಯತೆ, ನಮ್ಮ ದೌರ್ಬಲ್ಯಗಳು ನಮಗೆ ತಡೆಯೇ ಹೊರತು ವಿಧಿಯಾಗಲೀ ಅದೃಷ್ಟವಾಗಲೀ ಅಲ್ಲ. ನಮ್ಮ ಗುರಿಯನ್ನು ನಾವು ಜೀವನ್ಮರಣದ ಪ್ರಶ್ನೆಯನ್ನಾಗಿ ಕಂಡು, ಅದನ್ನು ತಲುಪಲು ರಟ್ಟೆಗಳಲ್ಲಿ ಕಸುವು ತುಂಬಿಕೊಂಡು ಕಷ್ಟ ಕೋಟಲೆಗಳ ಹರಿವನ್ನು ಹಿಂದಕ್ಕೆ ತಳ್ಳಿ ತಳ್ಳಿ ಈಜಬೇಕು. ಆಗ ಮಾತ್ರ ಗೆಲುವು ನಮ್ಮದಾಗುವುದು. 

ಅಂದಹಾಗೆ, ಈ ಗೆಲುವಿನ ಬಯಕೆ ಗುರಿ ತಲುಪಲು ಇರಬೇಕು ಹಿರತು ಮತ್ತೊಬ್ಬರನ್ನು ಮೀರಿಸಿ ಮುಂದಕ್ಕೆ ಹೋಗಲು ಅಲ್ಲ. ನಾವು ನಮ್ಮ ಗೆಲುವನ್ನು ಮತ್ತೊಬ್ಬರ ನಡಿಗೆಯ ಹೋಲಿಕೆಯ ಮೂಲಕ ನಿರ್ಧರಿಸುವುದಾದರೆ ನಾವು ಯಾವತ್ತೂ ಗೆಲ್ಲಲು ಸಾಧ್ಯವಾಗುವುದೇ ಇಲ್ಲ. ಹೊರನೋಟಕ್ಕೆ ನಾವು ಎರಡು ಹೆಜ್ಜೆ ಅವರಿಗಿಂತ ಮುಂದೆ ಹೋಗಬಹುದು, ಲಾಭ ಗಳಿಸಬಹುದು, ಅಥವಾ ಹೆಚ್ಚಿನದೇನನ್ನೋ ಮಾಡಬಹುದು. ಆದರೆ ನಾವು ಸದಾ ಕಾಲವು ಅವರ ಚಲನೆಯತ್ತ ಗಮನ ನೆಟ್ಟ ಮನಸ್ಸಿನ ಗುಲಾಮರಾಗಿ ಉಳಿದುಬಿಟ್ಟುರುತ್ತೇವೆ. ಯೋಚಿಸಿ, ಗುಲಾಮರ ಗೆಲುವೂ ಒಂದು ಗೆಲುವೇ!? 

ಆದ್ದರಿಂದ, ನಿಮಗಾಗಿ ನೀವು ಗುರಿ ನಿಕ್ಕಿ ಮಾಡಿಕೊಳ್ಳಿ, ನಿಮ್ಮ ಓಟ ನೀವು ಓಡಿ. ನೀವು ನಿಗದಿಪಡಿಸಿಕೊಂಡ ಅವಧಿಯಲ್ಲಿ ಗುರಿ ತಲುಪುವಿರೋ ಇಲ್ಲವೋ ಗಮನಿಸಿ. ಸಾಧ್ಯವಾಗದೆ ಹೋದರೆ, ಗುರಿಯ ವ್ಯಾಪ್ತಿಯನ್ನೆ ಒಂದಷ್ಟು ಚಿಕ್ಕದಾಗಿಸಿಕೊಳ್ಳಿ. ಇದರಿಂದ ನಷ್ಟವೇನಾಗದು. ನೀವು ಯಾರಿಗೂ ಏನನ್ನೂ ಪ್ರೂವ್ ಮಾಡಬೇಕಿಲ್ಲ. ನೀವು ಖುಷಿಯಿಂದ ಇರುವುದಷ್ಟೆ ಮುಖ್ಯ.

ಹೀಗೆ ಸೋತಾಗಲೂ ಅದು ನಿಮ್ಮದೇ ಸೋಲು, ಗೆದ್ದಾಗಲೂ ನಿಮ್ಮದೇ ಗೆಲುವು. ಸೋಲನ್ನು ಪಾಠವಾಗಿಯೂ ಗೆಲುವನ್ನು ಸೋಲಿಗಿಂತ ದೊಡ್ಡ ಬೋಧನೆಯಾಗಿಯೂ ಗ್ರಹಿಸಿ; ಸಂತಸದಿಂದಿರಿ!

30

ಲಾಫಿಂಗ್ ಫಿಲಾಸಫರ್ : ಡೆಮಾಕ್ರಿಟಸ್
ತತ್ತ್ವಜ್ಞಾನ ಎಂದರೆ ಮುಖ ಗಂಟಿಕ್ಕಿಕೊಂಡು ನಡೆಸುವ ಚರ್ಚೆ, ತತ್ತ್ವಜ್ಞಾನಿಗಳು ಎಂದರೆ ಆಕಾಶ ತಲೆ ಮೇಲೆ ಬಿದ್ದಂತೆ ಇರುತ್ತಾರೆ ಅನ್ನುವುದು ಜನ ಸಾಮಾನ್ಯರ ಸಾಮಾನ್ಯ ನಂಬಿಕೆ. ಈ ರೂಢಿಗತ ನಂಬಿಕೆ ಹುಸಿ ಹೋಗುವಂತೆ ಬಾಳಿದವನು ಗ್ರೀಕ್ ತತ್ತ್ವಜ್ಞಾನಿ, ವಿಜ್ಞಾನಿ ಡೆಮಾಕ್ರಿಟಸ್.
ಡೆಮಾಕ್ರಿಟಸ್ ಸದಾ ನಗುನಗುತ್ತ, ತಮಾಷೆ ಸ್ವಭಾವ ತೋರುತ್ತ ಇದ್ದುದರಿಂದ ಈತನನ್ನು ‘ಲಾಫಿಂಗ್ ಫಿಲಾಸಫರ್’ ಎಂದು ಕರೆಯಲಾಯಿತು. ಕ್ರಿ.ಪೂ.5ನೇ ಶತಮಾನ ಈತನ ಕಾಲಮಾನ

Leave a Reply