ಐತರೇಯ ಉಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #5

ಐತರೇಯೋಪನಿಷತ್ತು, ಶಂಕರಾಚಾರ್ಯರಿಂದ ವ್ಯಾಖ್ಯಾನಿಸಲ್ಪಟ್ಟ ದಶೋಪನಿಷತ್ತುಗಳಲ್ಲಿ ಒಂದಾಗಿದೆ. ಈ ಉಪನಿಷತ್ತಿನ ಮೊದಲನೆಯ ಅಧ್ಯಾಯದಲ್ಲಿ ಸೃಷ್ಟಿಗೆ ಸಂಬಂಧಪಟ್ಟ ಅಖ್ಯಾಯಿಕೆಯಿದ್ದು, “ಅಹಂ ಬ್ರಹ್ಮಾಸ್ಮಿ” ಎಂಬ ಬೋಧೆಯಿದೆ.

ಗ್ವೇದಕ್ಕೆ ಸೇರಿದ ಐತರೇಯ ಅರಣ್ಯಕದ, ಎರಡನೇ ಅರಣ್ಯಕದ ಭಾಗವೇ ಐತರೇಯ ಉಪನಿಷತ್. ಎರಡನೇ ಅರಣ್ಯಕದ ನಾಲ್ಕನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳನ್ನು ಐತರೇಯ ಉಪನಿಷತ್ ಎಂದು ಕರೆಯಲಾಗುತ್ತದೆ. ಈ ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ.

ಮಹೀದಾಸ ಎಂದು ಕರೆಯಲ್ಪಡುವ ಐತರೇಯನು ಇದರ ದ್ರಷ್ಟಾರ. ಐತರೇಯ ಋಷಿಯ ಕಥೆ ಹೀಗಿದೆ:

ಐತರೇಯನು ಬ್ರಾಹ್ಮಣನೊಬ್ಬನಿಗೆ ಇತರ ಜಾತಿಯ (ಬ್ರಾಹ್ಮಣೇತರ) ಉಪಪತ್ನಿಯಲ್ಲಿ ಹುಟ್ಟಿದ ಮಗ. ಇತರಳ ಮಗನಾಗಿದ್ದರಿಂದಲೇ ಅವನಿಗೆ ಆ ಹೆಸರು. ತಂದೆಗೆ ಉಪಪತ್ನಿಯ ಮಗನಾದ ಈತನ ಮೇಲೆ ಪ್ರೇಮವಿರಲಿಲ್ಲ. ಅವನ ತಾರತಮ್ಯ ಬುದ್ಧಿಯಿಂದ ಐತರೇಯನು ಬಹಳ ದುಃಖಿತನಾಗಿದ್ದನು.

ಮಗನ ದುಃಖವನ್ನು ಕಂಡು ಬೇಸರಗೊಂಡ ತಾಯಿಯು , ತನ್ನ ಮಗನನ್ನು ಯೋಗ್ಯನನ್ನಾಗಿ ಮಾಡುವಂತೆ ಮಹೀ ದೇವಿಯಲ್ಲಿ (ಮಹಿ = ಭೂಮಿ) ಪ್ರಾರ್ಥಿಸಿದಳು. ಮಹೀದೇವಿಯು ಐತರೇಯನಿಗೆ ಆವರೆಗೆ ಪ್ರಕಾಶ ಕಾಣದೆ ಇದ್ದ ವೇದಜ್ಞಾನವನ್ನು ದಯಪಾಲಿಸಿದಳು. ಈ ಜ್ಞಾನವು ಐತರೇಯನ ಮೂಲಕ ಪ್ರಕಟಗೊಂಡು, ಅವನಿಂದಲೇ ಪ್ರಕಾಶಿಸಲ್ಪಟ್ಟಿತು. ಆದ್ದರಿಂದ ಈತ ಮಹೀದೇವಿಯ ಕೃಪೆಯಿಂದ ಕಂಡುಕೊಂಡ ಜ್ಞಾನವನ್ನು ‘ಐತರೇಯ ಉಪನಿಷತ್ತು’ ಎಂದು ಕರೆಯಲಾಯಿತು.

ಐತರೇಯನು ಮಹೀದೇವಿಯ ಕೃಪೆಗೆ ಪಾತ್ರನಾಗಿದ್ದರಿಂದ ಆತನಿಗೆ ‘ಮಹೀದಾಸ’ನೆಂಬ ಹೆಸರು ಉಂಟಾಯಿತು.

ಐತರೇಯೋಪನಿಷತ್ತು, ಶಂಕರಾಚಾರ್ಯರಿಂದ ವ್ಯಾಖ್ಯಾನಿಸಲ್ಪಟ್ಟ ದಶೋಪನಿಷತ್ತುಗಳಲ್ಲಿ ಒಂದಾಗಿದೆ. ಈ ಉಪನಿಷತ್ತಿನ ಮೊದಲನೆಯ ಅಧ್ಯಾಯದಲ್ಲಿ ಸೃಷ್ಟಿಗೆ ಸಂಬಂಧಪಟ್ಟ ಅಖ್ಯಾಯಿಕೆಯಿದ್ದು, “ಅಹಂ ಬ್ರಹ್ಮಾಸ್ಮಿ” ಎಂಬ ಬೋಧೆಯಿದೆ. ವಿಶ್ವವನ್ನು ಸೃಷ್ಟಿಸಿದ ಪರಮಾತ್ಮನು, ಸೃಷ್ಟಿಯ ಪ್ರತಿಯೊಂದರಲ್ಲೂ ಪ್ರವೇಶಿಸಿ, “ನಾನು ಬ್ರಹ್ಮನೇ ಆಗಿದ್ದೇನೆ” ಎಂದು ಸಾಕ್ಷಾತ್ತಾಗಿ ಅರಿತುಕೊಳ್ಳುತ್ತಾನೆಂದು ಈ ಉಪನಿಷತ್ತು ಹೇಳುತ್ತದೆ.

Advertisements

One Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.