ತನ್ನದೇ ಸ್ವಾಗತಕ್ಕೆ ಕಸ ಗುಡಿಸಿದ ರೋಶಿ! : ಝೆನ್ ಕಥೆ

roshi

ಪೂರ್ವ ಕರಾವಳಿಯ ಭೇಟಿಯ ಕಾರ್ಯಕ್ರಮ ಕಾಲದಲ್ಲಿ ಒಮ್ಮೆ ಮಾಸ್ಟರ್ ರೋಶಿ, ತಮ್ಮ ಸಭೆಯ ಸ್ಥಳಕ್ಕೆ ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚೆಯೇ ಆಗಮಿಸಿದರು.

ಮಾಸ್ಟರ್ ರೋಶಿಯ ಸ್ವಾಗತದ ಸಲುವಾಗಿ ನೆಲ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದ ಅಲ್ಲಿನ ಕಾರ್ಯಕರ್ತರು, ಮಾಸ್ಟರ್ ರೋಶಿಯನ್ನು ಗಮನಿಸಲಿಲ್ಲ. ರೋಶಿ ತೋಳು ಮೇಲೇರಿಸಿಕೊಂಡು ತಾವೂ ನೆಲ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿಕೊಂಡರು.

ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯ ಪದಾಧಿಕಾರಿಯೊಬ್ಬರು, ಮಾಸ್ಟರ್ ರೋಶಿಯನ್ನು ಗುರುತಿಸಿ “ಮಾಸ್ಟರ್ ಇದೇನು ಮಾಡುತ್ತಿದ್ದೀರಿ?” ಎಂದು ಆತಂಕದಿಂದ ಕೇಳಿದರು.

ರೋಶಿ ನಗುತ್ತ ಉತ್ತರಿಸಿದರು
“ಏನಿಲ್ಲ, ಎಲ್ಲ ಮಾಸ್ಟರ್ ರೋಶಿಯ ಸ್ವಾಗತಕ್ಕಾಗಿ….”

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply