ತಾವೋ ತಿಳಿವು #70 ~ ಏನನ್ನೂ ಮಾಡದಿದ್ದಾಗ ಏನೂ ಮಾಡಲು ಉಳಿಯುವುದಿಲ್ಲ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ

tao

ಜ್ಞಾನದ ಹಾದಿ ಹಿಡಿದವ
ಪ್ರತಿದಿನ
ಗಳಿಸುತ್ತ ಹೋಗುತ್ತಾನೆ.
ಆದರೆ
ತಾವೋ ಮಾರ್ಗದಲ್ಲಿ
ಪ್ರತಿಹೆಜ್ಜೆ ಇಟ್ಟಾಗಲೂ
ಏನಾದರೊಂದನ್ನು ಕಳೆದುಕೊಳ್ಳುತ್ತೇವೆ.
ಈ ನಷ್ಟ
ಯಾವ ಮಟ್ಟ ಮುಟ್ಟುತ್ತದೆಯೆಂದರೆ
ಯಾವದೂ ನಮ್ಮ ಕೈಲಾಗುವುದಿಲ್ಲ.
ಏನನ್ನೂ ಮಾಡದಿದ್ದಾಗ
ಏನೂ ಮಾಡಲು ಉಳಿಯುವುದಿಲ್ಲ.

‘ಸಂಕೋಚ’ ಸೋಲುತ್ತದೆ ಅನಿಸಿದರೂ
‘ನಿಸ್ಸಂಕೋಚ’ ಸೋತಿದ್ದೇ ಹೆಚ್ಚು.

Leave a Reply