ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ
ಕುಗ್ಗಿಸಿ ಹಿಡಿಯಾಗಿಸಬೇಕೆಂದರೆ
ಮೊದಲು ಹಿಗ್ಗಿ, ಬೆಳೆದು, ವಿಸ್ತಾರವಾಗಲಿ.
ಬಾಡಿ, ಬಿದ್ದು ನಾಶವಾಗಬೇಕೆಂದರೆ
ಮೊದಲು ಬೆಳೆದು ಅರಳಿ, ಹೂವಾಗಲಿ.
ಬಯಸಿ ಗೆದ್ದು, ಕೈವಶವಾಗಬೇಕೆಂದರೆ
ಮೊದಲು, ಸೋತು, ಕರಗಿ, ಶರಣಾಗಲಿ.
ಇದೇ ಸೂಕ್ಷ್ಮ ತಾವೋ ತಿಳಿವು.
ವಿನಯ ಕಠೋರತೆಯ ಮೇಲೆ ಸವಾರಿ ಮಾಡಿದರೆ
ನಿಧಾನ, ವೇಗವನ್ನು ಹಿಂದೆ ಹಾಕುತ್ತದೆ.
ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ
ಬೆಳೆದ ಫಸಲು ಮಾತ್ರ ಜನರಿಗೆ ಕಾಣಿಸಲಿ.