ಸ್ವರ್ಗ ಮತ್ತು ಧರೆ
ಮನುಷ್ಯತ್ವದಿಂದ ಮುಕ್ತವಾಗಿವೆ.
ಅವುಗಳ ಕಣ್ಣಿನಲ್ಲಿ
ಸಮಸ್ತರೂ ಹುಲ್ಲಿನ ನಾಯಿಗಳು*
ಹಾಗೆಯೇ
ಸಂತರಿಗೂ ಮನುಷ್ಯತ್ವ ಎಂಬುದಿಲ್ಲ.
ಅವರಿಗೂ ಎಲ್ಲ
ಹುಲ್ಲಿನ ನಾಯಿಗಳಂತಯೇ.*
ತಾವೋ ಬಲೂನಿನಂತೆ
ಖಾಲಿ ಹೌದು
ಆದರೆ ಅನಂತ ಸಾಧ್ಯತೆಗಳು,
ಏರಿದಂತೆಲ್ಲ ಹಿಗ್ಗುತ್ತದೆ,
ಮಾತು ಚುಚ್ಚಿದಾಗಲೆಲ್ಲ ಅಪ್ಪಚ್ಚಿ.
ಮಾತಿನ ಮನೆಯೆದುರು
ಮಸಣದ ತೋಟ,
ತಾವೋಗೆ ಶರಣಾಗಿ,
ಶರಣು ಎನ್ನಿ.
*ಬಲಿ ಕೊಡವುದಕ್ಕಾಗಿ ತಯಾರಿಸಲಾಗುವ ಹುಲ್ಲಿನ ಬೊಂಬೆಗಳು. ವಿಧಿ ಪೂರ್ಣವಾದ ನಂತರ ತುಳಿದಾಡುತ್ತಾರೆ, ಒಲೆಗೆ ಹಾಕುತ್ತಾರೆ.